ಮೈಸೂರು,ಜೂನ್,18,2025 (www.justkannada.in): ಮೈಸೂರಿನ ಪ್ರತಿಷ್ಠಿತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಪತ್ರಕರ್ತರಿಗಾಗಿ ಹೃದ್ರೋಗ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಜೂನ್ 20 ( ಶುಕ್ರವಾರ) ರಂದು ಜಯದೇವ ಆಸ್ಪತ್ರೆಯಲ್ಲಿ ಆಯೋಜಿಸಿದೆ.
ಸಂಘದ ಸದಸ್ಯರು ಅಂದು ಬೆಳಗ್ಗೆ 8 ಗಂಟೆಯೊಳಗೆ ಖಾಲಿ ಹೊಟ್ಟೆಯಲ್ಲಿ ಆಗಮಿಸಿ ಹೆಸರನ್ನು ನೋಂದಾಯಿಸಿಕೊಂಡು ರಕ್ತದ ಸ್ಯಾಂಪಲ್ ನೀಡಬೇಕು. ನಂತರ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಉಪಹಾರದ ಬಳಿ ಹೃದ್ರೋಗ ತಪಾಸಣೆ ತಡೆಯಲಿದೆ. ಮಧ್ಯಾಹ್ನ 12.30 ತನಕ ಆಸ್ಪತ್ರೆಯ ನಿರ್ದೇಶಕ ಹೃದ್ರೋಗ ತಜ್ಞ ಡಾ. ಸದಾನಂದ ಅವರ ನೇತೃತ್ವದಲ್ಲಿ ನುರಿತ ವೈದ್ಯರು, ಪ್ಯಾರ ಮೆಡಿಕಲ್ ಸಿಬ್ಬಂದಿಗಳು ಶಿಬಿರದಲ್ಲಿ ಆರೋಗ್ಯ ಸೇವೆ ಕಲ್ಪಿಸಿಕೊಡಲಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊ. ಸಂ. 9741511340, 9845653548 ಇಲ್ಲಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
Key words: Free heart check-up, journalists, Mysore, June 20
The post ಮೈಸೂರಿನಲ್ಲಿ ಜೂ. 20ಕ್ಕೆ ಪತ್ರಕರ್ತರಿಗೆ ಉಚಿತ ಹೃದ್ರೋಗ ತಪಾಸಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.