ಮೈಸೂರು,ಏಪ್ರಿಲ್,16,2025 (www.justkannada.in): ರಸ್ತೆ ಅಗಲೀಕರಣ ನೆಪವೊಡ್ಡಿ ಮೈಸೂರಿನ ಎಸ್ಪಿ ಕಛೇರಿ ಬಳಿ 40 ಮರಗಳ ಕಡಿದ ಜಾಗದಲ್ಲೇ ಇದೀಗ ರೈತರು ಗಿಡ ನೆಟ್ಟಿದ್ದಾರೆ.
ರಾಜ್ಯ ರೈತ ಸಂಘದ ರೈತರಿಂದ ಗಿಡ ನೆಡುವ ಕಾರ್ಯಕ್ರಮ ನಡೆದಿದ್ದು ರೈತರು ವಿವಿಧ ತಳಿಯ ಗಿಡ ನೆಟ್ಟಿದ್ದಾರೆ. ಸಾಮೂಹಿಕ ರೈತ ಸಂಘದ ಜಿಲ್ಲಾಧ್ಯಕ್ಷ ಮಂಜುಕಿರಣ್ ನೇತೃತ್ವದಲ್ಲಿ ಗಿಡ ನೆಡುವ ಅಭಿಯಾನ ನಡೆಸಿದ್ದು ಅರಣ್ಯ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳ ನಡೆಗೆ ವ್ಯಾಪಕ ಖಂಡನೆ ವ್ಯಕ್ತಪಡಿಸಿದರು.
ರಸ್ತೆ ಅಗಲೀಕರಣ ನೆಪವೊಡ್ಡಿ ಮೈಸೂರಿನ ಎಸ್ಪಿ ಕಛೇರಿ ಬಳಿ 40 ಆರೋಗ್ಯಕರ ಮರಗಳಿಗೆ ಕತ್ತರಿ ಹಾಕಲಾಗಿತ್ತು. ಈ ಸಂಬಂಧ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಮರ ಕಡಿದವರ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಸದ್ಯ ರೈತರು ಗಿಡನೆಟ್ಟು ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ. ಮಹಿಳೆಯರು ಸೇರಿದಂತೆ ವಿವಿಧ ಸಂಘಟನೆಗಳಿಂದಲೂ ಗಿಡ ನೆಡುವ ಅಭಿಯಾನ ಆರಂಭಿಸಿದ್ದು ಪೊಲೀಸರು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.
Key words: Farmers, planted, trees, Mysore, 40 trees, cut down.
The post ಮೈಸೂರಿನಲ್ಲಿ40 ಮರಗಳ ಕಡಿದ ಜಾಗದಲ್ಲೇ ಗಿಡ ನೆಟ್ಟ ರೈತರು. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.