ಮೈಸೂರು,ಮೇ,21,2025 (www.justkannada.in): ಮೈಸೂರಿನ ಹೊರವಲಯದಲ್ಲಿ ಯುವತಿ ಶವ ಪತ್ತೆಯಾಗಿದ್ದು ಅನುಮಾನಸ್ಪಾದವಾಗಿ ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.
ಗಿರಿಯಾಬೋವಿ ಪಾಳ್ಯ ನಿವಾಸಿ ಲತಾ (25) ಶವವಾಗಿ ಪತ್ತೆಯಾಗಿರುವ ಯುವತಿ. ನಗರದ ಹೊರವಲಯದ ವಿದ್ಯಾವಿಕಾಸ ಕಾಲೇಜಿನ ಬಳಿ ಯುವತಿ ಲತಾ ಮೃತ ದೇಹ ಪತ್ತೆಯಾಗಿದೆ.
ವೇಲಿನಿಂದ ಕುತ್ತಿಗೆ ಬಿಗಿದು ಲತಾರನ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೇರೆಡೆ ಕೊಂದು ನಿರ್ಜನ ಪ್ರದೇಶದಲ್ಲಿ ಮೃತ ದೇಹವನ್ನ ಎಸೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆಯಾಗಿದೆ. ಈ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: young woman, body, found, Mysore
The post ಮೈಸೂರಿನ ಹೊರವಲಯದಲ್ಲಿ ಅನುಮಾನಸ್ಪದವಾಗಿ ಯುವತಿ ಶವ ಪತ್ತೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.