22
April, 2026

A News 365Times Venture

22
Wednesday
April, 2026

A News 365Times Venture

ಮೈಸೂರು ದಸರಾ: ಗಜಪಡೆಯ ತಾಲೀಮು ಆರಂಭ

Date:

ಮೈಸೂರು,ಆಗಸ್ಟ್,12,2025 (www.justkannada.in): ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿ ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ತಾಲೀಮು ಇಂದಿನಿಂದ ಆರಂಭವಾಗಿದೆ.

ಗಜಪಡೆಯ ಆನೆಗಳು ಅರಮನೆಯಿಂದ ಹೊರಟು ಹಳೇ ಆರ್.ಎಂ.ಸಿ ವರೆಗೂ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿವೆ. ತಾಲೀಮಿನಲ್ಲಿ 9 ಆನೆಗಳು ಭಾಗಿಯಾಗಿದ್ದು, ಮೊದಲ ಹಂತದಲ್ಲಿ ಆರ್.ಎಂ.ಸಿ ವರೆಗೂ ಮಾತ್ರ ತಾಲೀಮು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ ಗಜಪಡೆ ಹೆಜ್ಜೆ ಹಾಕಲಿವೆ.

ಈ ಕುರಿತು ಮಾತನಾಡಿದ ಡಿಸಿಎಫ್ ಪ್ರಭುಗೌಡ, ಇಂದಿನಿಂದ ಗಜಪಡೆ ತಾಲೀಮು ಆರಂಭಿಸಿವೆ. ಎಲ್ಲ ಆನೆಗಳು ಕೂಡ ಆರೋಗ್ಯದಿಂದ ಇವೆ. ಈಗಾಗಲೇ ವೈದ್ಯರು ಎಲ್ಲ ರೀತಿಯ ತಪಾಸಣೆ ಮಾಡಿದ್ದಾರೆ. ಮೊದಲ ಹಂತದಲ್ಲಿ ಆರ್.ಎಂ.ಸಿವರೆಗೆ ಆನೆಗಳು ತಾಲೀಮು ಮಾಡಿವೆ. ಮುಂದಿನ ದಿನಗಳಲ್ಲಿ ಒಂದೊಂದೇ ರೀತಿಯ ತಾಲೀಮು ಮಾಡಿಸಲಾಗುವುದು ಎಂದು ತಿಳಿಸಿದರು.

ಇಂದು ವಿಶ್ವ ಆನೆಗಳ ದಿನಾಚರಣೆ, ಈ ಹಿನ್ನಲೆ ಅರಮನೆಯಲ್ಲಿ 60 ಜನ ಶಾಲಾ ಮಕ್ಕಳಿಗೆ ಆನೆಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಆನೆಗಳ ಸ್ವಭಾವ, ನಡವಳಿಕೆ, ಆಹಾರ ಪದ್ಧತಿಗಳನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ಆನೆಗಳ ದಿನವನ್ನು ಆಚರಣೆ ಮಾಡುತ್ತೇವೆ ಎಂದು ಡಿಸಿಎಫ್ ಪ್ರಭುಗೌಡ ಹೇಳಿದರು.

Key words: Mysore Dasara, Gajapade, workout

The post ಮೈಸೂರು ದಸರಾ: ಗಜಪಡೆಯ ತಾಲೀಮು ಆರಂಭ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರಧಾನಿ ಮೋದಿ ವಿರುದ್ದ ಆಕ್ಷೇಪಾರ್ಹ ಹೇಳಿಕೆ: ಖರ್ಗೆ ಅವರನ್ನ ವಜಾ ಮಾಡಿ-ಆರ್.ಅಶೋಕ್

ಬೆಂಗಳೂರು,ಏಪ್ರಿಲ್,22,2026 (www.justkannada.in): ಪ್ರಧಾನಿ ಮೋದಿ ಅವರ ಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿರುವ ...

1.70 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ PSI ಮತ್ತು ಕಾನ್ ಸ್ಟೇಬಲ್

ಬಾಗಲಕೋಟೆ,ಏಪ್ರಿಲ್,22,2026 (www.justkannada.in):  ಲಂಚ ಸ್ವೀಕರಿಸುತ್ತಿದ್ದ ವೇಳೆ ಪೊಲೀಸ್ ಸಬ್ ಇನ್ ಸ್ಪೆಕ್ಟರ್,...

ಒಳಮೀಸಲಾತಿ ಇತ್ಯರ್ಥ ಆಗುವವರೆಗೆ ಹಿಂದಿನ ಮೀಸಲಾತಿಯಂತೆ ನೇಮಕ ಮಾಡಿ- ಜ್ಞಾನ ಪ್ರಕಾಶ ಸ್ವಾಮೀಜಿ ಮನವಿ

ಬೆಂಗಳೂರು,ಏಪ್ರಿಲ್,22,2026 (www.justkannada.in): ಒಳಮೀಸಲಾತಿ ಗೊಂದಲದಿಂದಾಗಿ ನೇಮಕಾತಿಗಳಿಗೆ ತಡೆಬಿದ್ದಿದ್ದು ಸುಮಾರು ಮೂರು ವರ್ಷಗಳಿಂದಲೂ...

ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ತತ್ವ, ಸಿದ್ದಾಂತ ಬೆಳೆಯಲು ಸಾಧ್ಯ- ಮಲ್ಲಿಕಾರ್ಜುನ ಖರ್ಗೆ

ಬೀದರ್,ಏಪ್ರಿಲ್,22,2026 (www.justkannada.in): ಬಸವ ತತ್ವ, ಸಿದ್ಧಾಂತಗಳ ಬಗ್ಗೆ ಬಹಳಷ್ಟು ಜನರು ಮಾತನಾಡುತ್ತಾರೆ....