ಮೈಸೂರು,ಜುಲೈ,11,2026 (www.justkannada.in): ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಗೆ ರಾಜ್ಯ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮೈಸೂರು ದಸರಾ ವೇಳೆ ಕಂಬಳ ನಡೆಸುವುದು ಬೇಡ. ರಾಜ್ಯ ಸರ್ಕಾರ ಮೈಸೂರಿನ ಜನರ ಭಾವನೆಗೆ ಬೆಲೆ ಕೊಡಬೇಕು ಎಂದಿದ್ದಾರೆ.
ಸರ್ಕಾರ ಭಂಡತನ ಪ್ರದರ್ಶನ ಮಾಡಬಾರದು. ಕರಾವಳಿಯಲ್ಲೇ ಕಂಬಳಬನ್ನು ಸರ್ಕಾರ ಅದ್ದೂರಿಯಾಗಿ ಮಾಡಲಿ. ಅಲ್ಲಿನ ಪರಂಪರೆಯನ್ನು ಮೈಸೂರಿನ ಪರಂಪರೆಗೆ ತುರುಕಬೇಡಿ. ಕಂಬಳಕ್ಕೂ ತನ್ನದೇ ಆದ ಶ್ರೀಮಂತಿಕೆ ಇದೆ, ಅದನ್ನು ಉಳಿಸಿ. ಕರಾವಳಿಯಲ್ಲಿ ಅದ್ದೂರಿಯಾಗಿ ಕಂಬಳ ಮಾಡಿ ನಮ್ಮ ಸಹಕಾರ ವಿರುತ್ತೆ ಎಂದು ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
Key words: No Kambala, Mysore Dasara, BY Vijayendra
The post ಮೈಸೂರು ದಸರಾ ವೇಳೆ ಕಂಬಳ ಬೇಡ: ಜನರ ಭಾವನೆಗೆ ಬೆಲೆ ಕೊಡಿ- ಬಿವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




