10
July, 2025

A News 365Times Venture

10
Thursday
July, 2025

A News 365Times Venture

ಮೈಸೂರು ದಸರಾ-2025: ಆ.4 ರಂದು ಮೊದಲ ಹಂತದ ಗಜಪಡೆಗೆ ಸ್ವಾಗತ ಕಾರ್ಯಕ್ರಮ

Date:

ಮೈಸೂರು,ಜುಲೈ,1,2025 (www.justkannada.in): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ – 2025ಕ್ಕೆ  ದಸರಾ ಗಜಪಡೆ ಆಯ್ಕೆ ಕಸರತ್ತು ಆರಂಭವಾಗಿದ್ದು ಗಜಪಡೆ ಕಟ್ಟುವ ಕಾರ್ಯ ತೀವ್ರಗೊಂಡಿದೆ.

7 ಕ್ಯಾಂಪ್ ಗಳಿಂದ 25 ಆನೆಗಳ ಹೆಲ್ತ್ ಕಾರ್ಡ್ ಸ್ವೀಕಾರ ಮಾಡಲಾಗಿದ್ದು ಎರಡು ವಾರಗಳಲ್ಲಿ‌ ಲಿಸ್ಟ್ ಪ್ರಕಟವಾಗಲಿದೆ. ಆಗಸ್ಟ್ 4 ರಂದು ವೀರನಹೊಸಹಳ್ಳಿಯಲ್ಲಿ ಮೊದಲ ಹಂತದ ಗಜಪಡೆಗೆ ಸ್ವಾಗತ ಕಾರ್ಯ ನೆರವೇರಲಿದೆ.

ಮೈಸೂರು ದಸರಾಗೆ ಅರಣ್ಯಾಧಿಕಾರಿಗಳು ಈಗಾಗಲೇ 25 ಆನೆಗಳನ್ನ ಪರಿಶೀಲಿಸಿದ್ದು, ಈ ಬಾರಿಯೂ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಅಂಬಾರಿ ಹೊರುವ ಸಾಧ್ಯತೆ ಇದೆ. ಮತ್ತಿಗೋಡು ಕ್ಯಾಂಪ್‌ನಿಂದ ಭೀಮ, ಶ್ರೀಕಂಠ, ಪಾರ್ಥ, ದುಬಾರೆ ಕ್ಯಾಂಪ್‌ ನಿಂದ ಧನಂಜಯ, ಪ್ರಶಾಂತ್, ಕಂಜನ್, ಸುಗ್ರೀವ, ಶ್ರೀರಾಮ, ಹರ್ಷ, ಅಯ್ಯಪ್ಪ, ಹೇಮಾವತಿ, ದೊಡ್ಡ ಹರವೆ ಕ್ಯಾಂಪ್‌ನಿಂದ ಏಕಲವ್ಯ, ಭೀಮನಕಟ್ಟೆ ಕ್ಯಾಂಪ್‌ನಿಂದ ಗಣೇಶ, ಶ್ರೀರಂಗ, ರೂಪ, ಬಳ್ಳೆ ಕ್ಯಾಂಪ್‌ ನಿಂದ ಮಹೇಂದ್ರ, ದೊಡ್ಡ‌ಹರವೆ ಲಕ್ಷ್ಮಿ, ಬಂಡೀಪುರ ಹಳೇ ಕ್ಯಾಂಪಸ್‌ ನಿಂದ ಹಿರಣ್ಯ, ಲಕ್ಷ್ಮಿ, ರೋಹಿತ್, ಪಾರ್ಥ ಸಾರಥಿ, ಐರಾವತ ಹಾರಂಗಿ ಕ್ಯಾಂಪ್‌ನಿಂದ ಲಕ್ಷ್ಮಣ ಮತ್ತು ಈಶ್ವರ ಆನೆಗಳ ಪರಿಶೀಲನೆ ನಡೆಸಲಾಗಿದೆ.

25 ಆನೆಗಳ ಪೈಕಿ 14 ರಿಂದ 15 ಆನೆಗಳು ಮಾತ್ರ ದಸರಾ ಜಂಬೂಸವಾರಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಲಿದ್ದು 15 ದಿನಗಳ ಒಳಗೆ ಅಂತಿಮ ಪಟ್ಟಿ ಸಲ್ಲಿಸಲು ತಯಾರಿ ನಡೆಸಲಾಗುತ್ತಿದೆ.  ಅಂತಿಮ ಪಟ್ಟಿ ತಯಾರಾದ ಬೆನ್ನಲ್ಲೆ ಆಗಸ್ಟ್ 4 ರಂದು ಮೊದಲ ಹಂತದಲ್ಲಿ 9 ಆನೆಗಳಿಗೆ ಗಜಪೂಜೆ ನೆರವೇರಲಿದ್ದು ಗಜಪಡೆ ಅರಮನೆ ಪ್ರವೇಶ ಮಾಡಲಿವೆ.vtu

Key words: Mysore Dasara-2025, first phase, Gajapade, August 4th

The post ಮೈಸೂರು ದಸರಾ-2025: ಆ.4 ರಂದು ಮೊದಲ ಹಂತದ ಗಜಪಡೆಗೆ ಸ್ವಾಗತ ಕಾರ್ಯಕ್ರಮ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಡಬಲ್ ಮರ್ಡರ್: ತಮ್ಮನಿಂದಲೇ ಅಣ್ಣ ಮತ್ತು ತಂದೆಯ ಹತ್ಯೆ

ಹಾಸನ ,ಜುಲೈ,10,2025 (www.justkannada.in):  ವ್ಯಕ್ತಿಯೊಬ್ಬ ಮಚ್ಚಿನಿಂದ ಕೊಚ್ಚಿ ತನ್ನ ತಂದೆ ಮತ್ತು...

ಪುತ್ರ ಆತ್ಮಹತ್ಯೆಗೆ ಶರಣು: ವಿಚಾರ ತಿಳಿದು ತಂದೆ ಹೃದಯಾಘಾತದಿಂದ ಸಾವು

ಯಾದಗಿರಿ,ಜುಲೈ,10,2025 (www.justkannada.in):  ಪುತ್ರ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿಚಾರ ತಿಳಿದು ತಂದೆಯೂ...

JDS ತೊರೆದು ಕಾಂಗ್ರೆಸ್ ಸೇರ್ತಾರಾ ಶಾಸಕ ಜಿ.ಟಿ ದೇವೇಗೌಡ..?  ಈ ಬಗ್ಗೆ ಸ್ವತಃ ಅವರ ಪ್ರತಿಕ್ರಿಯೆ ಹೀಗಿತ್ತು..!

ಮೈಸೂರು, ಜುಲೈ,9,2025 (www.justkannada.in):  ನಾನು ಜೆಡಿಎಸ್ ನಲ್ಲಿ ಇರಬೇಕಾ ಬೇಡವಾ?  ಬಿಜೆಪಿಗೆ...

ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ: ಸಿಎಂ, ಕಾನೂನು ಇಲಾಖೆ ಜೊತೆ ಚರ್ಚೆ- ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು,ಜುಲೈ,9,2025 (www.justkannada.in): ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ ನಡೆಸಿದ್ದು ಕಾನೂನಿನ...