ಮೈಸೂರು,ಮಾರ್ಚ್,25,2025 (www.justkannada.in): ಮೈಸೂರಿನ ಎನ್ ಆರ್ ಕ್ಷೇತ್ರದ ರಾಜೀವನಗರದಲ್ಲಿ ನಿರ್ಮಾಣಗೊಂಡಿರುವ ನಮ್ಮ ಕ್ಲಿನಿಕ್ ಅನ್ನು ಶಾಸಕ ತನ್ವೀರ್ ಸೇಠ್ ಉದ್ಘಾಟಿಸಿದರು.
ಆರೋಗ್ಯ ಕ್ಷೇತ್ರದ ಬಲವರ್ಧನೆಗಾಗಿ ಪಿ.ಎಂ ಅಭಿಮ್ ಯೋಜನೆಯಡಿ ರಾಜ್ಯದಲ್ಲಿನ ಆರೋಗ್ಯ ಕ್ಷೇತ್ರವನ್ನು ತಳಮಟ್ಟದಿಂದ ಬಲಪಡಿಸುವ ಮತ್ತು ಸುಧಾರಣೆ ತರುವ ದೃಷ್ಟಿಯಿಂದ ಆರೋಗ್ಯ ಕ್ಷೇತ್ರಕ್ಕಾಗಿ ನೀಡುವ ಅನುದಾನದಡಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಯಲ್ಲಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ಸರ್ಕಾರದಿಂದ ನಗರ ಆರೋಗ್ಯ ಕೇಂದ್ರ “ನಮ್ಮ ಕ್ಲಿನಿಕ್”ಗಳನ್ನು ತೆರೆಯಲಾಗುತಿದೆ. ಈ ನಡುವೆ ಎನ್ ಆರ್ ಕ್ಷೇತ್ರದಲ್ಲಿಯೂ ನಿರ್ಮಾಣಗೊಂಡ ನಮ್ಮ ಕ್ಲಿನಿಕ್ ಅನ್ನು ಶಾಸಕ ತನ್ವೀರ್ ಸೇಠ್ ಉದ್ಘಾಟಿಸಿದರು.
ವಿಕೇಂದ್ರಿಕೃತ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಮತ್ತು ಸುಧಾರಿತ ಸಮುದಾಯ ಆರೋಗ್ಯ ಪ್ರಕ್ರಿಯೆಗಳನ್ನು ವಿಶೇಷವಾಗಿ ಕೊಳಗೇರಿ ಮತ್ತು ಕೊಳಗೇರಿ ಸ್ವರೂಪದ ಪ್ರದೇಶಗಳು ಹಾಗೂ ದುರ್ಬಲವರ್ಗದ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಸಮುದಾಯ ಆರೋಗ್ಯ ಪ್ರಕ್ರಿಯೆಗಳಿಗೆ ಒತ್ತನ್ನು ನೀಡುವುದು
ಸಾರ್ವಜನಿಕ ಆರೋಗ್ಯ ಕಣ್ಣಾವಲು, ಸಮಯೋಚಿತ ವರದಿ ಮತ್ತು ವಿಶ್ಲೇಷಣೆಯನ್ನು ಬಲಪಡಿಸುವುದು. ಸಮುದಾಯದ ಸಹಭಾಗಿತ್ವವನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳು ಸಾರ್ವತ್ರಿಕವಾಗಿ ತಲುಪಲು ಕ್ರಮ ಕೈಗೊಳ್ಳುವುದು. ನಮ್ಮ ಕ್ಲಿನಿಕ್ ಉದ್ದೇಶವಾಗಿದೆ. ನಮ್ಮ ಕ್ಲಿನಿಕ್ ನಲ್ಲಿ ಸಾರ್ವಜನಿಕರಿಗೆ 12 ರೀತಿಯ ಸೇವೆಗಳು ಲಭ್ಯವಿರುತ್ತವೆ.
ಈ ಸಂಧರ್ಭದಲ್ಲಿ ಡಿ.ಎಚ್.ಓ ಕುಮಾರಸ್ವಾಮಿ, ಸೈಯದ್ ಇಕ್ಬಾಲ್ , ಮಂಜುನಾಥ್ , ಪ್ರದೀಪ್ ಚಂದ್ರ, ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Key words: Mysore, MLA, Tanveer Sait, inaugurates, Namma Clinic
The post ಮೈಸೂರು: ‘ನಮ್ಮ ಕ್ಲಿನಿಕ್’ ಉದ್ಘಾಟಿಸಿದ ಶಾಸಕ ತನ್ವೀರ್ ಸೇಠ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.