25
August, 2026

A News 365Times Venture

25
Tuesday
August, 2026

A News 365Times Venture

ಮೈಸೂರು ವಿವಿ: ಅಪ್ರಕಟಿತ ಹಸ್ತಪ್ರತಿಯಲ್ಲಿರುವ ಕೃತಿಗಳ ಕುರಿತು ಒಡಂಬಡಿಕೆಗೆ ಸಹಿ

Date:

ಮೈಸೂರು,ಏಪ್ರಿಲ್,17,2025 (www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆ ಪ್ರಾಚ್ಯವಿದ್ಯಾ ಸಂಶೋಧನಾಲಯವು ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶಾರದಾ ಪೀಠ ಶೃಂಗೇರಿ ಸಂಸ್ಥೆಯೊಂದಿಗೆ ಅಪ್ರಕಟಿತ ಹಸ್ತಪ್ರತಿಗಳಲ್ಲಿರುವ ಕೃತಿಗಳ ಕುರಿತಾದ ಒಂದು ಒಡಂಬಡಿಕೆ ಸಹಿ  ಮಾಡಿತು.

ಇದರ ಅಡಿಯಲ್ಲಿ ವಿದ್ವಾಂಸರ ಮೂಲಕ  ಅಪ್ರಕಟಿತದವಾದ ಅಂದಾಜು 13000 ಹಸ್ತಪ್ರತಿಗಳಲ್ಲಿರುವ ಕೃತಿಗಳ ವರ್ಣನಾತ್ಮಕ ಸೂಚಿಯನ್ನು (Manuscripts Descriptive Catalogue) ಮಾಡಲು,  ಆಯ್ದ ಕೃತಿಗಳನ್ನು ಪುಸ್ತಕರೂಪದಲ್ಲಿ ಮುದ್ರಿಸಲು ಮತ್ತು  ⁠Digitization of catalogues in the form of searchable database ಮಾಡಲು ನಿಶ್ಚಯಮಾಡಲಾಗಿದೆ.

ಈ ಒಡಂಬಡಿಕೆಯ ರೂ.92,40,000/- ಗಳ ಈ ಯೋಜನೆಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ಎಂ.ಕೆ.ಸವಿತಾ ಅವರು ಹಾಗೂ ಶ್ರೀ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಪಿ.ಎ.ಮುರಳಿ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ. ಡಿ.ಪಿ. ಮಧುಸೂಧನಾಚಾರ್ಯ, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ( ಮೌಲ್ಯಮಾಪನ) ಪ್ರೊ ನಾಗರಾಜ್ ಅವರು  ಹಾಗೂ ಉಭಯ ಸಂಸ್ಥೆಗಳ ವಿದ್ವಾಂಸರು ಉಪಸ್ಥಿತರಿದ್ದರು.

Key words: University of Mysore,  Agreement,  signed, unpublished,  manuscripts

The post ಮೈಸೂರು ವಿವಿ: ಅಪ್ರಕಟಿತ ಹಸ್ತಪ್ರತಿಯಲ್ಲಿರುವ ಕೃತಿಗಳ ಕುರಿತು ಒಡಂಬಡಿಕೆಗೆ ಸಹಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯ ಮುಖ್ಯ ಶಿಕ್ಷಕಿ ಆಯ್ಕೆ: ಸಚಿವರಿಂದ ಅಭಿನಂದನೆ

ಶಿವಮೊಗ್ಗ,ಆಗಸ್ಟ್,22,2026 (www.justkannada.in): ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ (National Teachers Award-2026) ಯನ್ನು...

ಶಿವಮೊಗ್ಗ: KPS ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವ ಮಧು ಬಂಗಾರಪ್ಪ ಶಂಕುಸ್ಥಾಪನೆ

ಶಿವಮೊಗ್ಗ, ಆಗಸ್ಟ್,22,2026 (www.justkannada.in):  ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ರಾಜ್ಯ...

ಕುಂಟು ನೆಪವಿಟ್ಟುಕೊಂಡು ಸದನ ನಡೆಸಲು ಬಿಡುತ್ತಿಲ್ಲ: ಸ್ಪಷ್ಟ ಆರೋಪಗಳಿದ್ದರೆ ಸಾಕ್ಷಿ ಮೂಲಕ ಹೇಳಲಿ- ದಿನೇಶ್ ಗುಂಡೂರಾವ್

 ಬೆಂಗಳೂರು,ಆಗಸ್ಟ್,22,2026 (www.justkannada.in): ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ...

ವಿದ್ಯುತ್ ತಂತಿಯ ಮೇಲೆ ನೇತಾಡುತ್ತಿರುವ ಅಪಾಯಕಾರಿ ಕೊಂಬೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಮೈಸೂರು, ಆಗಸ್ಟ್,24,2026 (www.justkannada.in):  ಮೈಸೂರಿನ ಚಾಮರಾಜಪುರಂ ಬಜ್ಜಣ್ಣ ಲೇನ್‌ನ ಕೊಪ್ಪಲು ಮಾರಮ್ಮ...