29
August, 2026

A News 365Times Venture

29
Saturday
August, 2026

A News 365Times Venture

ರಂಗಭೂಮಿ ಕಲಾವಿದೆ ಇಂದಿರಾ ನಾಯರ್ ಇನ್ನಿಲ್ಲ

Date:

ಮೈಸೂರು,ಆಗಸ್ಟ್,28,2026 (www.justkannada.in): ರಂಗಭೂಮಿಯ ಹಿರಿಯ ಕಲಾವಿದೆ ಮೈಸೂರಿನ ಇಂದಿರಾ ನಾಯರ್ ಇಂದು ಬೆಳಿಗ್ಗೆ (ಆಗಸ್ಟ್ 28) ಹೃದಯಾಘಾತದಿಂದ ನಿಧನರಾದರು.

ಇಂದಿರಾ ನಾಯರ್ ಅವರಿಗೆ 76 ವರ್ಷ ವಯಸ್ಸಾಗಿತ್ತು.  ಇದೀಗ ಇಂದು ಬೆಳಿಗ್ಗೆ ಇಂದಿರಾ ನಾಯರ್ ಮೃತಪಟ್ಟಿದ್ದಾರೆ.

ಜನನ, ಬಾಲ್ಯ ಮತ್ತು ಕುಟುಂಬ ಹಿನ್ನೆಲೆ, : ರಂಗಪಯಣದ ಹಾದಿ ಹೀಗಿದೆ.

ಇಂದಿರಾ ನಾಯರ್ ಅವರು 1950ರ ಫೆಬ್ರವರಿ 4ರಂದು ಚಿತ್ರದುರ್ಗದಲ್ಲಿ ಎಂ.ಪಿ. ಕೃಷ್ಣನ್ ಮತ್ತು ಗಿರಿಜಾ ಕೃಷ್ಣನ್ ದಂಪತಿಯ ಪುತ್ರಿಯಾಗಿ ಜನಿಸಿದರು. ಇವರ ಕುಟುಂಬ ಮೂಲತಃ ಕೇರಳದ ಕೊಟ್ಟಾಯಂ ಮೂಲದ್ದಾಗಿದ್ದರೂ, ತಂದೆ ಎಂ.ಪಿ. ಕೃಷ್ಣನ್ ಅವರು ಇಂಜಿನಿಯರಿಂಗ್ ಮುಗಿಸಿ ಕರ್ನಾಟಕ ಸರ್ಕಾರದ ಸೇವೆಯಲ್ಲಿದ್ದ ಕಾರಣ ಇವರ ಬಾಲ್ಯವು ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾಗಿತು. ಇವರು ಒಟ್ಟು ಏಳು ಜನ ಒಡಹುಟ್ಟಿದವರ (ನಾಲ್ಕು ಹೆಣ್ಣು, ಮೂರು ಗಂಡು) ದೊಡ್ಡ ಕುಟುಂಬದಲ್ಲಿ ಬೆಳೆದರು. ಚಿತ್ರದುರ್ಗದಲ್ಲಿ ಜನಿಸಿದ ಕಾರಣ ತಂದೆಯವರು ಇವರನ್ನು ತಮಾಷೆಯಾಗಿ “ಚಿತ್ರದುರ್ಗದ ಒನಕೆ ಓಬವ್ವ” ಎಂದು ಕರೆಯುತ್ತಿದ್ದರು.

ಕನ್ನಡ ನಾಡಿನ ಪರಿಸರ ಹಾಗೂ ಮನೆಯೊಳಗಿನ ಕೇರಳದ ಆಚಾರ-ವಿಚಾರಗಳ ದ್ವಿಸಂಸ್ಕೃತಿಯ ವಾತಾವರಣವು ಇವರ ವ್ಯಕ್ತಿತ್ವಕ್ಕೆ ವಿಶಾಲ ದೃಷ್ಟಿಕೋನವನ್ನು ನೀಡಿತು.

ಮೂರನೇ ತರಗತಿಯಲ್ಲಿರುವಾಗ ಇವರ ಕುಟುಂಬ ಮೈಸೂರಿಗೆ ಸ್ಥಳಾಂತರಗೊಂಡಿತು. ಕ್ರೈಸ್ಟ್ ಕಿಂಗ್ ಕಾನ್ವೆಂಟ್ (೭ನೇ ತರಗತಿವರೆಗೆ), ಜೆ.ಎಸ್.ಎಸ್. ಪ್ರೌಢಶಾಲೆ (೧೦ನೇ ತರಗತಿ) ಹಾಗೂ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು.

1967 ರಿಂದ 1970 ರವರೆಗೆ ಮೈಸೂರಿನ ‘ವಾಕ್ ಮತ್ತು ಶ್ರವಣ ಸಂಸ್ಥೆ’ಯಲ್ಲಿ (AIISH) ಪ್ಯಾರಾಮೆಡಿಕಲ್ ಕೋರ್ಸ್‌ನಲ್ಲಿ ಪದವಿ ಪಡೆದು, ಅದೇ ಸಂಸ್ಥೆಯಲ್ಲಿ ಸುಮಾರು 30 ವರ್ಷಗಳ ಕಾಲ ಮಾತು ಮತ್ತು ಶ್ರವಣ ಸಮಸ್ಯೆ ಇರುವ ಮಕ್ಕಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತುದಾರರಾಗಿ ಸೇವೆ ಸಲ್ಲಿಸಿ 1996ರಲ್ಲಿ ಸ್ವಯಂ ನಿವೃತ್ತಿ ಪಡೆದರು. ನಿವೃತ್ತಿಯ ನಂತರವೂ 10 ವರ್ಷಗಳ ಕಾಲ ಅರೆಕಾಲಿಕ ಉಪನ್ಯಾಸಕಿಯಾಗಿ ಕೆಲಸ ಮಾಡಿದರು.

ಬಾಲ್ಯದಿಂದಲೇ ಕಲೆಯತ್ತ ಆಸಕ್ತಿ ತಳೆದಿದ್ದ ಇವರು ಆಸ್ಥಾನ ವಿದುಷಿ ಡಾ. ಕೆ. ವೆಂಕಟಲಕ್ಷ್ಮಮ್ ಹಾಗೂ ವಿದುಷಿ ನಂದಿನಿ ಈಶ್ವರ್ ಅವರಲ್ಲಿ ಭರತನಾಟ್ಯ ತರಬೇತಿ ಪಡೆದು ಜೂನಿಯರ್ ಹಂತ ಪೂರ್ಣಗೊಳಿಸಿದರು.

ಕಾಲೇಜು ದಿನಗಳಲ್ಲಿ ಅಂತರ್ಕಾಲೇಜು ನಾಟಕ ಸ್ಪರ್ಧೆಗಳ ಮೂಲಕ ರಂಗಭೂಮಿಗೆ ಕಾಲಿಟ್ಟರು. ಡಾ. ನಾ. ರತ್ನ ಅವರನ್ನು ತಮ್ಮ ಮೊದಲ ರಂಗಗುರು ಎಂದು ಭಾವಿಸುವ ಇಂದಿರಾ ನಾಯರ್ ಅವರು, ರಂಗಭೂಮಿಯ ಶಿಸ್ತು ಮತ್ತು ಸೂಕ್ಷ್ಮತೆಗಳನ್ನು ಅವರಿಂದ ಕಲಿತರು. ಮೈಸೂರಿನ ಪ್ರಸಿದ್ಧ ‘ಸಮತೆಂತೋ’ ರಂಗತಂಡದ ಸ್ಥಾಪಕ ಸದಸ್ಯರೊಂದಿಗೆ ಒಡನಾಟ ಬೆಳೆಸಿಕೊಂಡು ಜಿ. ಬಿ. ಜೋಶಿಯವರ ‘ಕದಡಿದ ನೀರು’ ನಾಟಕದ ಮೂಲಕ ತಂಡವನ್ನು ಸೇರಿಕೊಂಡರು.

1967-1974ರ ಅವಧಿಯಲ್ಲಿ ‘ಸ್ವಪ್ನ ವಾಸವದತ್ತ’, ‘ಸೋಲಿಗರ ಸಿದ್ದ’, ‘ಬಹದ್ದೂರ್ ಗಂಡು’, ‘ಇಲಿ ಬೋನು’, ‘ಮೃಚ್ಛಕಟಿಕ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. 1972ರಲ್ಲಿ ಬಿ.ವಿ. ಕಾರಂತರ ನಿರ್ದೇಶನದ ‘ವಂಶವೃಕ್ಷ’ ಚಿತ್ರದ ಮೂಲಕ ಸಿನಿಮಾರಂಗಕ್ಕೂ ಕಾಲಿಟ್ಟಿದ್ದರು.

1974ರಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿದ್ದ ಜಯಪ್ರಕಾಶ್ ಅವರೊಂದಿಗೆ ವಿವಾಹವಾದ ನಂತರ, ಕುಟುಂಬ ನಿರ್ವಹಣೆ, ಉದ್ಯೋಗ ಹಾಗೂ ಮಕ್ಕಳ ಪೋಷಣೆಯ ಕಾರಣಗಳಿಂದಾಗಿ ರಂಗಭೂಮಿಯಿಂದ ಸಂಪೂರ್ಣವಾಗಿ ದೂರವುಳಿಯಬೇಕಾಯಿತು. ಸುಮಾರು 35 ವರ್ಷಗಳ ದೀರ್ಘ ವಿರಾಮದ ನಂತರ, 2010ರಲ್ಲಿ ಪತಿಯ ನಿಧನದ ನೋವಿನ ನಡುವೆಯೂ, ಕುಟುಂಬದವರ ಪ್ರೋತ್ಸಾಹದಿಂದ ತಮ್ಮ 60ನೇ ವಯಸ್ಸಿನಲ್ಲಿ ಮತ್ತೆ ರಂಗಭೂಮಿಯತ್ತ ಮುಖ ಮಾಡಿದರು.

ಇವರ ವಿನಂತಿಯ ಮೇರೆಗೆ ಡಾ. ನಾ. ರತ್ನ ಅವರು ಬರೆದುಕೊಟ್ಟ ‘ಕಾಯಿಲೆ ಖಯಾಲಿ’ (2011) ನಾಟಕದ ಮೂಲಕ ರಂಗಭೂಮಿಗೆ ಪುನರಾಗಮನ ಮಾಡಿದರು. ನಂತರದ 15 ವರ್ಷಗಳ ಕಾಲ ನಿರಂತರವಾಗಿ ರಂಗಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ಗೌರವ ಹಾಗೂ ಪ್ರಶಸ್ತಿಗಳು

ಪ್ರಶಸ್ತಿಗಳಿಗಿಂತ ಪಾತ್ರದ ನೈಜತೆಗೆ ಆದ್ಯತೆ ನೀಡುವ ಇಂದಿರಾ ನಾಯರ್ ಅವರು ಆಕಾಶವಾಣಿಯ ‘B+’ ಗ್ರೇಡ್ ಕಲಾವಿದೆಯಾಗಿದ್ದಾರೆ. ‘ಕಡಲಾಸ್ ಪೂಕ್ಕಳ್’ ಕಿರುಚಿತ್ರದ ಅಭಿನಯಕ್ಕಾಗಿ ಮೈಸೂರು ಫಿಲಂ ಫೆಸ್ಟ್ ಹಾಗೂ ಕೇರಳ ಫಿಲಂ ಫೆಸ್ಟಿವಲ್‌ನಲ್ಲಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ ‘ಗ್ಲೋಬಲ್ ಚೇಂಬರ್ ಆಫ್ ಕನ್ಸ್ಯೂಮರ್ ರೈಟ್ಸ್’ ಸಂಸ್ಥೆಯಿಂದ *’ಜೀವಮಾನ ಸಾಧನೆ ಪ್ರಶಸ್ತಿ’*ಗೂ ಭಾಜನರಾಗಿದ್ದಾರೆ.

Key words: Mysore, artist, Indira Nair, no more.

The post ರಂಗಭೂಮಿ ಕಲಾವಿದೆ ಇಂದಿರಾ ನಾಯರ್ ಇನ್ನಿಲ್ಲ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ದಂಪತಿಗೆ ಆತಿಥ್ಯ: ಉಪಹಾರ ಕೂಟದಲ್ಲಿ ಭಾಗಿ

ಮೈಸೂರು,ಆಗಸ್ಟ್,29,2026 (www.justkannada.in): ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾಗೂ ಅವರ ಪತ್ನಿ ಮೈಸೂರಿನ ಜೆ.ಪಿ.ನಗರದಲ್ಲಿರುವ...

ನಾಲ್ಕು ವರ್ಷ ಸೇವೆ, ವರ್ಗಾವಣೆ: ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಗೆ ಬೀಳ್ಕೊಡುಗೆ

ಬೆಂಗಳೂರು,ಆಗಸ್ಟ್,28,2026 (www.justkannada.in):  ರಾಜ್ಯದಲ್ಲಿ ನಾಲ್ಕು ವರ್ಷಗಳ‌ ಕಾಲ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್...

ಮಾನವ–ಆನೆ ಸಂಘರ್ಷ, ಕಸ್ತೂರಿ ರಂಗನ್ ವರದಿ ಅನುಷ್ಠಾನ: ಸಮಗ್ರ ಪ್ರಸ್ತಾವನೆ ಸಲ್ಲಿಸಿದ ಸಂಸದ ಯದುವೀರ್

ಬೆಂಗಳೂರು/ಮೈಸೂರು, ಆಗಸ್ಟ್, 28, 2026 (www.justkannada.in): ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ...

ಶಿಕ್ಷಕರ ದಿನಾಚರಣೆ ಸಿದ್ಧತೆ ಕುರಿತು ಪೂರ್ವಭಾವಿ ಸಭೆ: ಅಧಿಕಾರಿಗಳಿಗೆ ಅಗತ್ಯ ಸೂಚನೆ

ಬೆಂಗಳೂರು, ಆಗಸ್ಟ್,28,2026 (www.justkannada.in):   ಸೆಪ್ಟೆಂಬರ್ 5ರಂದು ಆಯೋಜಿಸಲಾಗಿರುವ ರಾಜ್ಯ ಮಟ್ಟದ ಶಿಕ್ಷಕರ...