11
September, 2026

A News 365Times Venture

11
Friday
September, 2026

A News 365Times Venture

ರಾಜೇಂದ್ರ ಸ್ವಾಮಿಗಳು ಸಮಾಜ ಸುಧಾರಣೆ, ಜಾತಿ ವ್ಯವಸ್ಥೆ ಹೋಗಲಾಡಿಸುವ ಕೆಲಸ ಮಾಡಿದ್ದಾರೆ- ಮಾಜಿ ಸಿಎಂ ಸಿದ್ದರಾಮಯ್ಯ

Date:

ಮೈಸೂರು,ಆಗಸ್ಟ್,29,2026 (www.justkannada.in): ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಸಮಾಜದಲ್ಲಿ ಸುಧಾರಣೆ ತರಲು, ಜಾತಿ ವ್ಯವಸ್ಥೆ ಹೋಗಲಾಡಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸುತ್ತೂರು ಶಾಖಾ ಮಠದಲ್ಲಿ ನಡೆದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸುತ್ತೂರು ಮಠ ಶಿಕ್ಷಣಕ್ಕೆ ದಾಸೋಹಕ್ಕೆ ಹೆಸರುವಾಸಿಯಾಗಿದೆ. ನಾಲ್ಕು ವರ್ಣಗಳ ವ್ಯವಸ್ಥೆಯಿಂದ ದೇಶದಲ್ಲಿ ಅನೇಕರು ಶಿಕ್ಷಣ ವಂಚಿತರಾದರು. ಶೂದ್ರ ವರ್ಗ ಅಕ್ಷರ ಕಲಿಕೆಯಿಂದ ವಂಚಿತವಾಗಿತ್ತು. ಹಾಗಾಗಿ ಸಮಾಜದಲ್ಲಿ ಅಸಮಾನತೆ ನಿರ್ಮಾಣವಾಗಿತ್ತು. ಬಸವಣ್ಣನವರ ಕಾಲದಲ್ಲೂ ಕೂಡ ಅಸಮಾನತೆ ಇತ್ತು. ಅದರ ವಿರುದ್ಧ ಬಸವಣ್ಣ ಹೋರಾಟ ಮಾಡಿದರು ಎಂದರು.

ಮಠ ಮಾನ್ಯಗಳು ಧಾರ್ಮಿಕ ವಾಗಿ ಕೆಲಸ ಮಾಡಿದರೇ ಸಾಲಲ್ಲ. ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕು. ಇದೇ ಕೆಲಸವನ್ನು ರಾಜೇಂದ್ರ ಸ್ವಾಮಿಗಳು ಮಾಡಿದರು. ಪ್ರತಿ ಹಳ್ಳಿಗೆ ಹೋಗಿ ಶಾಲೆ ತೆರೆಯುವ ಕೆಲಸ ಮಾಡಿದರು.  ಆ ಮೂಲಕ ಸಮಾಜದಲ್ಲಿ ಸುಧಾರಣೆ ತರುವ ಕೆಲಸ ಮಾಡಿ ಜಾತಿ ವ್ಯವಸ್ಥೆ ಹೋಗಲಾಡಿಸುವ ಕೆಲಸ ಮಾಡಿದ್ದಾರೆ. ಜಾತಿ ವ್ಯವಸ್ಥೆ ನಿಂತ ನೀರು. ಎಲ್ಲಿವರೆಗೂ ಚಲನೆ ಇರಲ್ಲ ಅಲ್ಲಿವರೆಗೆ ಬದಲಾವಣೆ ಸಾಧ್ಯವಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ಜಾತಿ ವ್ಯವಸ್ಥೆ ವಿರುದ್ಧವೇ ಹೋರಾಟ ಮಾಡಿದರು. ಇವನಮ್ಮವ ಇವನಮ್ಮವ ಎನ್ನುವ ಬಸವಣ್ಣ ವಚನ ಎಲ್ಲರಿಗೂ ಬರಬೇಕು. ಇದಕ್ಕಾಗಿ ಶಿಕ್ಷಣ ಮುಖ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದಿಗೂ ಜಾತಿ ವ್ಯವಸ್ಥೆ ಹೆಚ್ಚಿದ್ದು, ಪಟ್ಟಭದ್ರ ಹಿತಾಸಕ್ತಿಗಳು ಜಾತಿ ಹೋಗಲು ಬಿಡುತ್ತಿಲ್ಲ. ಜಾತಿ ಜಾತಿ ಅಂತಾರೆ. ಇದು ಹೋಗಬೇಕು. ಇಲ್ಲವೆಂದರೇ ಅಸಮಾನತೆ ಹೋಗಲ್ಲ. ವಿದ್ಯಾವಂತರು ಕೂಡ ಕರ್ಮ ಸಿದ್ಧಾಂತ ನಂಬುತ್ತಾರೆ. ಬಸವಣ್ಣ ಅವರೇ ಕರ್ಮ ಸಿದ್ಧಾಂತ ತಿರಸ್ಕಾರ ಮಾಡಿದರು. ಹಣೆ ಬರಹ ಕರ್ಮ ಅಂತಾರೆ.  ಇದು ಕರ್ಮ ಸಿದ್ಧಾಂತ ಎಂದರು.

ನಮ್ಮ ಮನೆಯಲ್ಲಿ 6 ಜನ ಮಕ್ಕಳು. ನಾನು ಓದಿ ವಿದ್ಯಾವಂತನಾದೆ. ಸಿಎಂ ಕೂಡ ಆದೆ. ಯಾವ ಜನ್ಮಗಳು ಇಲ್ಲ, ಕರ್ಮಗಳು ಇಲ್ಲ. ಯಾರು ಇದನ್ನು ನಂಬಬೇಡಿ. ಸಮಾಜ ಬದಲಾವಣೆ ಆಗಬೇಕು. ಸಮ ಸಮಾಜ ನಿರ್ಮಾಣ ಆಗಬೇಕು. ಆಗ ಶೋಷಣೆ ಆಗಲ್ಲ. ನಾವು ರಾಜೇಂದ್ರ ಸ್ವಾಮಿಗಳನ್ನು ನೆನೆಯಬೇಕು. ಶಿಕ್ಷಣಕ್ಕೆ ಒತ್ತು ಕೊಟ್ಟು ಲಕ್ಷಾಂತರ ಜನರಿಗೆ ವಿದ್ಯಾದಾನ ಮಾಡಿದ್ದಾರೆ. ವೈಜ್ಞಾನಿಕವಾಗಿ ವಿದ್ಯಾವಂತರು ಚಿಂತನೆ ಮಾಡಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

Key words: Suttur math, Rajendra Swamiji,  social reform, Former CM, Siddaramaiah

The post ರಾಜೇಂದ್ರ ಸ್ವಾಮಿಗಳು ಸಮಾಜ ಸುಧಾರಣೆ, ಜಾತಿ ವ್ಯವಸ್ಥೆ ಹೋಗಲಾಡಿಸುವ ಕೆಲಸ ಮಾಡಿದ್ದಾರೆ- ಮಾಜಿ ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಫ್ರಾನ್ಸ್, ನೆದರ್ಲೆಂಡ್ಸ್‌ ಪ್ರವಾಸದಲ್ಲಿ ಸಚಿವ ಎಂ.ಬಿ ಪಾಟೀಲ್ : ಸಾಫ್ರಾನ್, ನೆಕ್ಸ್ಪೀರಿಯಾ ಜತೆ ಹೂಡಿಕೆ ಮಾತುಕತೆ

ಬೆಂಗಳೂರು,ಸೆಪ್ಟಂಬರ್,11,2026 (www.justkannada.in): ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಸೆಳೆಯುವ ಉದ್ದೇಶದಿಂದ ಫ್ರಾನ್ಸ್ ಮತ್ತು...

ಕೈ’ ನಾಯಕ ರಾಹುಲ್ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ,ಸೆಪ್ಟಂಬರ್,11,2026 (www.jstkannada.in); ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು...

ಪ್ರಜ್ವಲ್ ರೇವಣ್ಣ ಪೊಲೀಸ್ ಕಸ್ಟಡಿ ಅಂತ್ಯ: ನ್ಯಾಯಾಂಗ ಬಂಧನಕ್ಕೆ ನೀಡಿದ ಕೋರ್ಟ್

ಬೆಂಗಳೂರು,ಸೆಪ್ಟಂಬರ್, 10,2026 (www.justkannada.in):  ತನ್ನ ಬ್ಯಾರಕ್ ನಲ್ಲಿ ಮೊಬೈಲ್ ಪತ್ತೆ ಪ್ರಕರಣಕ್ಕೆ...

 ಮೈಸೂರು: ವೃದ್ಧೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ

ಮೈಸೂರು, ಸೆಪ್ಟಂಬರ್,10, 2026 (www.justkannada.in):  ಮೈಸೂರಿನಲ್ಲಿ ವೃದ್ಧೆಯೊಬ್ಬರ ಚಿನ್ನದ ಸರ ಕಸಿಯಲು...