ಚಾಮರಾಜನಗರ,ಮೇ,24,2025 (www.justkannada.in): ಕರ್ನಾಟಕ, ತಮಿಳುನಾಡು ಮತ್ತು ಕೇರಳ ಮೂರು ರಾಜ್ಯಗಳಲ್ಲಿ ಆನೆ ಗಣತಿ ಕಾರ್ಯಾರಂಭವಾಗಿದೆ.
ರಾಜ್ಯದ ಬಂಡಿಪುರದ, ನಾಗರಹೊಳೆಯಲ್ಲಿ ನಿನ್ನೆಯಿಂದಲೇ ಆನೆ ಗಣತಿ ಆರಂಭವಾಗಿದ್ದು, ಮಾನವ ಮತ್ತು ಆನೆ ಸಂಘದ ತಡೆ ಮತ್ತು ಸಂಘರ್ಷ ನಿರ್ವಹಣಾ ತಂತ್ರ ವಿನ್ಯಾಸಕ್ಕೆ ಆನೆ ಗಣತಿ ಮಾಡಲಾಗುತ್ತಿದೆ.
ನಾಗರಹೊಳೆ ಎಂಟು ವಲಯ, ಬಂಡಿಪುರದ 13 ವಲಯಗಳಲ್ಲಿ ಆನೆ ಗಣತಿ ಕಾರ್ಯ ಶುರುವಾಗಿದ್ದು, ಮೇ.23 ರಿಂದ 25 ರ ವರೆಗೆ ಮೂರು ದಿನಗಳ ಕಾಲ ನಡೆಯುತ್ತಿದೆ. ನೆರೆ ರಾಜ್ಯ ಕೇರಳ,ತಮಿಳುನಾಡಿನಲ್ಲೂ ಆನೆ ಗಣತಿ ನಡೆಸಲಾಗುತ್ತಿದೆ.
ಕಾಡಿನಲ್ಲಿ ನಡೆದುಕೊಂಡು ನೇರವಾಗಿ ಕಾಣುವ ಆನೆಗಳ ಗಣತಿ ಮಾಡಲಾಗತ್ತಿದ್ದು, 114 ಬೀಟ್ ಗಳಲ್ಲಿ ಟ್ರಾಂಜಾಕ್ಟ್ ಲೈನ್ ನಲ್ಲಿ ನಡೆದುಕೊಂಡು ಎಡ, ಬಲ ಸಿಕ್ಕುವ ಲದ್ದಿ ನೋಡಿ, ಕಾಡಿನ ನೀರಿರುವ ಸ್ಥಳಗಳಲ್ಲಿ ಬಂದ ಆನೆಗಳನ್ನ ಲೆಕ್ಕ ಹಾಕಲಾಗುತ್ತಿದೆ. ಆನೆ ಗಂಡೋ, ಹೆಣ್ಣೋ ಹಾಗೂ ವಯಸ್ಸು ಮತ್ತು ಮರಿ ಆನೆಗಳ ಬಗ್ಗೆ ಫಾರ್ಮೆಟ್ ನಲ್ಲಿ ಗಣತಿದಾರರು ನಮೂದಿಸಲಿದ್ದಾರೆ. ಬಂಡಿಪುರದ ಮತ್ತು ನಾಗರಹೊಳೆ ಆನೆ ಗಣತಿಗೆ ಸುಮಾರು 600 ಕ್ಕೂ ಹೆಚ್ಚು ಗಣತಿದಾರರನ್ನು ನೇಮಕ ಮಾಡಲಾಗಿದೆ.
Key words: Elephant, census, begins, state
The post ರಾಜ್ಯದಲ್ಲಿ ಆನೆ ಗಣತಿ ಆರಂಭ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.