ಬೆಂಗಳೂರು,ಮೇ,27,2025 (www.justkannada.in): ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, 183 ಕ್ಕೆ ಕೊರೋನಾ ಪ್ರಕರಣ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಕೋವಿಡ್ ಪರಿಸ್ಥಿತಿ ಅವಲೋಕಿಸಿ, ಕೊರೊನಾ ಸಂಬಂಧ ಮಾಹಿತಿ ಪಡೆದರು. ಈ ವೇಳೆ ಕೊರೊನಾ ತಡೆಗೆ ಅಧಿಕಾರಿಗಳು ಸಜ್ಜಾಗಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಕಳೆದ ಬಾರಿ ಆದ ಸಮಸ್ಯೆ ಮರುಕಳಿಸಬಾರದು, ಬಾಣಂತಿ, ವೃದ್ಧರು, ಉಸಿರಾಟದ ಸಮಸ್ಯೆ ಇರುವವರು ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಸೂಚಿಸಲು ತಿಳಿಸಿದರು.
ಜ್ವರ,ನೆಗಡಿ ಇರುವ ವಿದ್ಯಾರ್ಥಿಗಳಿಗೆ ರಜೆ ನೀಡಿ. ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸಿ. ಸಹಾಯವಾಣಿ ಆರಂಭಿಸಿ. ಅಗತ್ಯ ವಸ್ತುಗಳ ಸಿದ್ದಪಡಿಸಿಕೊಳ್ಳಿ ಸಾಧ್ಯವಾದಷ್ಟು ಕೊರೊನಾ ನಿಯಂತ್ರಣ ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
Key words: Covid cases, rise, CM Siddaramaiah, instructs, prepare
The post ರಾಜ್ಯದಲ್ಲಿ ಕೋವಿಡ್ ಪ್ರಕರಣ 183ಕ್ಕೆ ಏರಿಕೆ: ಕೊರೊನಾ ತಡೆಗೆ ಸಜ್ಜಾಗಲು ಸಿಎಂ ಸಿದ್ದರಾಮಯ್ಯ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.