ಬೆಂಗಳೂರು, ಜೂನ್, 9,2025 (www.justkannada.in): ರಾಜ್ಯದ ಎಲ್ಲ ವಿದ್ಯುತ್ ಮೀಟರ್ ಗಳನ್ನು ಸ್ಮಾರ್ಟ್ ಮೀಟರ್ ಮಾಡಲಾಗುತ್ತದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಜೆ ಜಾರ್ಜ್, ಸದ್ಯ ಕೆಲ ಮೀಟರ್ ಗಳನ್ನು ಮಾತ್ರ ಸ್ಮಾರ್ಟ್ಮೀಟರ್ ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಎಲ್ಲ ಮೀಟರ್ಗಳನ್ನು ಸ್ಮಾರ್ಟ್ ಮೀಟರ್ ಮಾಡಲು ತೀರ್ಮಾನ ಮಾಡಲಾಗಿದೆ . ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಹೆಚ್ಚು ಅನುಕೂಲವಾಗಲಿದ್ದು, ಮೊಬೈಲ್ ರೀಚಾರ್ಜ್ ರೀತಿ ಮೀಟರ್ ರೀಚಾರ್ಜ್ ಮಾಡಬಹುದು ಎಂದು ತಿಳಿಸಿದರು.
ಹೊಸ ಸ್ಮಾರ್ಟ್ ಮೀಟರ್ ಗೆ ಸಿಮ್ ರೀತಿ ಅಳವಡಿಸಲಾಗಿದೆ. ಒಂದು ಸ್ಮಾರ್ಟ್ ಮೀಟರ್ ಗೆ ಐದು ಸಾವಿರ ರೂಪಾಯಿ ಇದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮತ್ತು ಕೇಂದ್ರ ಇಲಾಖೆ ಸೂಚನೆಯಂತೆ ಪಡೆಯಬೇಕಿದೆ. ಹಳೇ ಮೀಟರ್ ಹಿಂಪಡೆಯುವುದಿಲ್ಲ ಎಂದು ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.
Key words: smart meter, power meters , state, Minister, KJ George
The post ರಾಜ್ಯದ ಎಲ್ಲಾ ವಿದ್ಯುತ್ ಮೀಟರ್ ಗಳನ್ನ ಸ್ಮಾರ್ಟ್ ಮೀಟರ್ ಮಾಡಲು ತೀರ್ಮಾನ- ಸಚಿವ ಕೆ.ಜೆ ಜಾರ್ಜ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.