ಬೆಂಗಳೂರು,ಮೇ,7,2025 (www.justkannada.in): ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಅಪರೇಷನ್ ಸಿಂಧೂರ ಹೆಸರಲ್ಲಿ ಉಗ್ರರ ನೆಲೆಗಳನ್ನ ಭಾರತೀಯ ಸೇನೆ ಧ್ವಂಸಗೊಳಿಸಿದ ಬೆನ್ನಲ್ಲೆ ಇದೀಗ ದೇಶಾದ್ಯಂತ ಮಾಕ್ ಡ್ರಿಲ್ ಮಾಡಲಾಗಿದೆ.
ಭಾರತ ಪಾಕ್ ನಡುವೆ ಯುದ್ದದ ವಾತಾವರಣ ಹಿನ್ನೆಲೆ ದೇಶದ 244 ಕಡೆಗಳಲ್ಲಿ ಮಾಕ್ ಡ್ರಿಲ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬೆಂಗಳೂರು ಸೇರಿ ಮೂರು ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಮಾಡಲಾಗುತ್ತಿದ್ದು ಸೈರನ್ ಸದ್ದು ಮೊಳಗಿದೆ.
ಬೆಂಗಳೂರಿನ ವೈಯಾಲಿ ಕಾವಲ್ ಉಪ್ಪಾರಪೇಟೆ ಪೊಲೀಸ್ ಠಾಣೆ, ಕಮರ್ಷಿಯಲ್ ಸ್ಟ್ರೀಟ್ ರಾಜಾಜಿನಗರ ಅಗ್ನಿ ಶಾಮಕ ಠಾಣೆ ಹಲಸೂರು ಗೇಟ್ ಅಗ್ನಿಶಾಮಕ ಠಾಣೆ ಸೇರಿ ಬೆಂಗಳೂರಿನ 35 ಸ್ಥಳಗಳಲ್ಲಿ ಅಣುಕುಪ್ರದರ್ಶನ ಪ್ರಯುಕ್ತ 3.58 ಗಂಟೆಯಿಂದ 4 ಗಂಟೆವರೆಗೆ ದೇಶಾದ್ಯಂತ ಸೈರನ್ ಮೊಳಗಿದೆ.
ಅಪರೇಷನ್ ಅಭ್ಯಾಸ್ ಹೆಸರಿನಲ್ಲಿ ಈ ಮಾಕ್ ಡ್ರಿಲ್ ನಡೆಸಲಾಗುತ್ತಿದ್ದು, ಯುದ್ದದ ಸನ್ನಿವೇಶದಲ್ಲಿ ಹೇಗೆ ರಕ್ಷಣೆ ಮಾಡಿಕೊಳ್ಳಬೇಕೆಂಬುದು ಇದರ ಉದ್ದೇಶವಾಗಿದೆ.
Key words: Mock drill, across ,country,
The post ರಾಜ್ಯದ 3 ಜಿಲ್ಲೆಗಳು ಸೇರಿ ದೇಶಾದ್ಯಂತ ಮಾಕ್ ಡ್ರಿಲ್: ಮೊಳಗಿದ ಸೈರನ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.