30
July, 2026

A News 365Times Venture

30
Thursday
July, 2026

A News 365Times Venture

ರಾಜ್ಯ ಗೃಹ ಇಲಾಖೆ ಕೇವಲ ಬಿಜೆಪಿಗರ ಭಾಷಣ ಹುಡುಕುವುದರಲ್ಲಿ ನಿರತ-ಶಾಸಕ ಸುನೀಲ್ ಕುಮಾರ್

Date:

ಶಿವಮೊಗ್ಗ,ಜುಲೈ,30,2026 (www.justkannada.in): ರಾಜ್ಯದ ಗೃಹ ಇಲಾಖೆ  ಡ್ರಗ್ಸ್ ದಂಧೆ ಕೊಲೆ ಸುಲಿಗೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕೇವಲ ಬಿಜೆಪಿಗರ ಭಾಷಣ ಹುಡುಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ವಿ.ಸುನೀಲ್ ಕುಮಾರ್, ರಾಜ್ಯದ ಗೃಹ ಇಲಾಖೆ ಫೇಸ್ ಬುಕ್ ವಾಟ್ಸಪ್ ಗೆ ಸೀಮಿತ. ಇದರಿಂದ ರಾಜ್ಯದಲ್ಲಿ ಹೊಸ ಇಲಾಖೆ ಕೂಡ ಹುಟ್ಟಿಕೊಂಡಂತಾಗಿದೆ. ಗೃಹ ಇಲಾಖೆ ಎಂಬುದು ಇವತ್ತು ಇಲ್ಲವೇ ಇಲ್ಲ.  ಗೃಹ ಇಲಾಖೆ ಡ್ರಗ್ಸ್ ದಂಧೆ ಕೊಲೆ ಸುಲಿಗೆ ಬಗ್ಗೆ ತಲೆಕೆಡಿಸಿಕೊಳ್ಳುತಿಲ್ಲ. ಕೇವಲ ಬಿಜೆಪಿಗರ ಭಾಷಣ ಹುಡುಕುವ ಕೆಲಸ ಮಾಡುತ್ತಿದೆ.  ಇಲಾಖೆ ಈ ರೀತಿ ಮಾರ್ಪಾಡಾಗಿರುವುದು ಅತ್ಯಂತ ದುರ್ದೈವದ ಸಂಗತಿ ಎಂದರು.

ಎಂಎಲ್ ಸಿ ಸಿಟಿ ರವಿ, ಶಾಸಕ ಯಶ್ ಪಾಲ್ ಗೆ ನೋಟಿಸ್ ನೀಡಿರುವುದು ವಿಷಾದಕರ.  ನೋಟಿಸ್ ನಿಂದ ಹೆದರಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ನಾವು ಗೋಲಿಬಾರ್ ಲಾಠಿಚಾರ್ಜ್ ಗೆ ಹೆದರಲ್ಲ ಇನ್ನು ಈ ರೀತಿಯ ಬೆದರಿಕೆಗಳಿಗೆ ನಾವು ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ. ಇನ್ನೂ ಒಂದುವರೆ ವರ್ಷಗಳ ಕಾಲ ರಾಜ್ಯದ ಜನರು ಸಹಿಸಿಕೊಳ್ಳಬೇಕು. 2028ರ ಚುನಾವಣೆಯಲ್ಲಿ ರಾಜ್ಯದ ಜನರು ತಕ್ಕ ಉತ್ತರವನ್ನ ನೀಡಲಿದ್ದಾರೆ ಎಂದು  ವಿ. ಸುನೀಲ್ ಕುಮಾರ್  ಹೇಳಿದರು.

Key words:  Home Department, busy, BJP speeches, MLA, Sunil Kumar

The post ರಾಜ್ಯ ಗೃಹ ಇಲಾಖೆ ಕೇವಲ ಬಿಜೆಪಿಗರ ಭಾಷಣ ಹುಡುಕುವುದರಲ್ಲಿ ನಿರತ-ಶಾಸಕ ಸುನೀಲ್ ಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ: ‘ಇಲಿ’ರಾಯನ ಕರಾಮತ್ತಿಗೆ ಬೆಸ್ತುಬಿದ್ದ ಜ್ಯುವೆಲರಿ ಶಾಪ್‌ ಮಾಲೀಕ

ತುಮಕೂರು, ಜುಲೈ, 30,2026 (www.justkannada.in): ಶೆಟರ್ ಒಡೆದಿಲ್ಲ. ಬೀಗ ಮುರಿದಿಲ್ಲ. ಕಳ್ಳನೂ...

 ಕಾವೇರಿ ಕಿಚ್ಚು: ಮೈಸೂರಿನಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

ಮೈಸೂರು,ಜುಲೈ,30,2026 (www.justkannada.in):  ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿನಿತ್ಯ 3500 ಕ್ಯೂಸೆಕ್ ನೀರು...

ಚೆನ್ನಮ್ಮರ 11ನೇ ದಿನದ ಕಾರ್ಯ:  ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿದ ಮಾಜಿ ಪ್ರಧಾನಿ ಹೆಚ್ ಡಿಡಿ

ಹಾಸನ,ಜುಲೈ,30,2026 (www.justkannada.in):  ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ...

ಹೊಸ ವಿಧೇಯಕ ಕಣ್ಣೊರೆಸುವ ತಂತ್ರ: ಮೋದಿ, ಶಾ ಮೌನವೇಕೆ? ಖರ್ಗೆ ವಾಗ್ದಾಳಿ

ನವದೆಹಲಿ,ಜುಲೈ,30,2026 (www.justkannada.in):  ಸಾರ್ವಜನಿಕ ಪರೀಕ್ಷೆಗಳ (ಅಕ್ರಮಗಳ ತಡೆ) ತಿದ್ದುಪಡಿ ಮಸೂದೆ–2026 ಕಣ್ಣೊರೆಸುವ...