20
September, 2026

A News 365Times Venture

20
Sunday
September, 2026

A News 365Times Venture

ರೈತರ ಹಿತ ಕಾಯಲು ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಸಿದ್ಧ- ಡಿಸಿಎಂ ಡಾ.ಜಿ ಪರಮೇಶ್ವರ್

Date:

ಬೆಂಗಳೂರು,ಸೆಪ್ಟಂಬರ್‌, 19,2026 (www.justkannada.in) ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೊಳಗಾಗಿರುವ ರೈತರ ಹಿತ ಕಾಯಲು ಮತ್ತು ಸಮಸ್ಯೆಗೆ ಸ್ಪಂದಿಸಲು ರಾಜ್ಯ ಸರ್ಕಾರ ಸದಾ ಸಿದ್ಧ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಪರಮೇಶ್ವರ್‌, ರಾಜ್ಯದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಸಮಗ್ರವಾಗಿ ಚರ್ಚಿಸಲಾಗುತ್ತಿದ್ದು, ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರೈತರನ್ನು ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು.

ರಾಜ್ಯಾದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿಧಾನಮಂಡಲದಲ್ಲಿ ಸಮಗ್ರ ಚರ್ಚೆ ಅಗತ್ಯವಿದೆ. ಬರ ಪರಿಹಾರಕ್ಕಾಗಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು, ಕೇಂದ್ರ ಸರ್ಕಾರದಿಂದ ಯಾವ ರೀತಿಯ ನೆರವು ಪಡೆಯಬೇಕು ಎಂಬುದರ ಬಗ್ಗೆ ಒಗ್ಗಟ್ಟಿನಿಂದ ಚರ್ಚೆ ನಡೆಸುವ ಉದ್ದೇಶದಿಂದ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದರು.ಬರದ ಜೊತೆಗೆ ಕಸ್ತೂರಿರಂಗನ್ ವರದಿ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

Key words: Government, ready , safeguard, farmers, respond, distress, DCM, Dr. G. Parameshwara

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಹಕಾರ ಪದ್ದತಿಯಿಂದ ರೈತರ ಪ್ರಗತಿ: ಸಿಎಂ ಡಿ.ಕೆ ಶಿವಕುಮಾರ್ ಅಭಿಮತ

ಶಿವಮೊಗ್ಗ, ಸೆಪ್ಟಂಬರ್‌, 19,2026 (www.justkannada.in) “ಜೊತೆಗೂಡುವುದು ಆರಂಭ, ಜೊತೆಗೂಡಿ ಆಲೋಚಿಸುವುದು ಪ್ರಗತಿ,...

 “Save Hindu Temples” ಉಪಕ್ರಮಕ್ಕೆ ಸಂಸದ ಯದುವೀರ್ ಒಡೆಯರ್ ಚಾಲನೆ

ಮೈಸೂರು, ಸೆಪ್ಟೆಂಬರ್, 19, 2026 (www.justkannada.in): ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ...

ರೋಜ್‌ ಗಾರ್ ಮೇಳ ಯುವಶಕ್ತಿಗೆ ಹೊಸ ಅವಕಾಶಗಳ ಸಂಕೇತ: ಉದ್ಯೋಗ ಸೃಷ್ಟಿಗೆ ಒತ್ತು-ಕೇಂದ್ರ ಸಚಿವ ವಿ ಸೋಮಣ್ಣ

ಮೈಸೂರು ಸೆಪ್ಟೆಂಬರ್, 19,2026 (www.justkannada.in): ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಯುವಜನತೆ ಪ್ರಮುಖ...

ಕಸ್ತೂರಿ ರಂಗನ್‌ ವರದಿಯ ಆತಂಕಕ್ಕೆ ಕೇಂದ್ರ ಸರ್ಕಾರವೇ ಕಾರಣ: ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಶಿವಮೊಗ್ಗ,ಸೆಪ್ಟೆಂಬರ್ 19,2026 (www.justkannada.in) ರಾಜ್ಯ ಸರ್ಕಾರ  ಸ್ಪರ್ಷವಾಗಿ ಕಸ್ತೂರಿ ರಂಗನ್ ವರದಿಯನ್ನು...