ಬೆಂಗಳೂರು,ಮಾರ್ಚ್,29,2025 (www.justkannada.in): ವಿಧಾನಸೌಧಕ್ಕೆ ನೂತನವಾಗಿ ಅಳವಡಿಸಿರುವ ಆಕರ್ಷಣೆಯ ವರ್ಣರಂಜಿತ ದೀಪಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸಲಾಗುತ್ತಿದ್ದು ಏಪ್ರಿಲ್ 6 ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.
ಈ ಕುರಿತು ಮಾತನಾಡಿದ ಸ್ಪೀಕರ್ ಯುಟಿ ಖಾದರ್, ವಿಧಾನಸೌಧ ಪ್ರಜಾಪ್ರಭುತ್ವದ ದೇಗುಲ. ಅಂತರಾಷ್ಟ್ರೀಯ ಮಟ್ಟದಲ್ಲೂ ಆಕರ್ಷಣೆ ಆಗಿದೆ. ಆಡಳಿತಸೌಧಕ್ಕೆ ಜನಾಕರ್ಷಣೆ ಮಾಡುವ ಗುರಿಯಿಂದ ಸರ್ಕಾರಕ್ಕೆ ಮನವಿ ಮಾಡಿದ್ದೆ. ಈಗಾಗಲೇ ಶನಿವಾರ ಭಾನುವಾರ ಬೆಳಗಾವಿಯಲ್ಲಿ ದೀಪಾಲಂಕಾರ ಆಕರ್ಷಣೆ ಆಗುತ್ತಿದೆ. ಈಗ ವಿಧಾನಸೌದದಲ್ಲಿ ಅದೇ ರೀತಿ ಮಾಡಲಾಗುತ್ತಿದೆ. ಸಂಜೆ 6 ಗಂಟೆಯಿಂದ 10 ಗಂಟೆವರೆಗೆ ದೀಪಾಲಂಕಾರ ಇರುತ್ತದೆ. ವಿಶೇಷ ದಿನಗಳಲ್ಲಿ ಲೈಟ್ ಹಾಕೊದಕ್ಕೆ ಹೆಚ್ಚು ಹಣ ಖರ್ಚಾಗುತ್ತಿತ್ತು ಈಗ ಪರ್ಮನೆಂಟ್ ಆಗಿ ಎಲ್ ಇ ಡಿ ಲೈಟ್ ಬಳಕೆಯಾಗಿತ್ತದೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿನ ವರ್ಣರಂಜಿತ ದೀಪಾಲಂಕಾರವನ್ನ ಏಪ್ರಿಲ್ 6 ರಂದು ಸಿಎಂ ಉದ್ಘಾಟನೆ ಮಾಡುತ್ತಾರೆ. ಶನಿವಾರ ಭಾನುವಾರ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕೊಡುವುದಕ್ಕೆ ಮನವಿ ಮಾಡಿದ್ದೇವೆ. ಇದರ ಬಗ್ಗೆ ಚೀಫ್ ಸೆಕ್ರೆಟರಿ ಜೊತೆ ಚರ್ಚೆ ಮಾಡುತ್ತೇನೆ. ಏಪ್ರಿಲ್ 6 ರಂದು ಸಾರ್ವಜನಿಕರಿಗೆ ಅವಕಾಶ ಕೊಡುತ್ತೇವೆ. ಭಾನುವಾರ ಪೊಲೀಸ್ ಬ್ಯಾಂಡ್ ಒಂದೊಂದು ದಿನ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ ಎಂದು ಸ್ಪೀಕರ್ ಯು.ಟಿ ಖಾದರ್ ಮಾಹಿತಿ ನೀಡಿದರು.
ಸಾರ್ವಜನಿಕರ ವಿಧಾನಸೌಧ ಪ್ರವೇಶ ಹಾಗೂ ಭದ್ರತೆ ವಿಚಾರ ಕುರಿತು ಮಾತನಾಡಿದ ಸ್ಪೀಕರ್ ಯುಟಿ ಖಾದರ್, ಸರ್ಕಾರಕ್ಕೆ ಸಲಹೆ ಸೂಚನೆ ಕೊಟ್ಟಿದ್ದೇವೆ. ಬ್ಯಾಗ್ ಜೊತೆ ಬರಬಾರದು, ಆಧಾರ್ ಕಾರ್ಡ್ ತರುವಂತೆ ಜಾಗೃತಿ ಮೂಡಿಸಬೇಕು. ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಬೇಕು. ಬಂದೋಬಸ್ತ್ ಮಾಡೋದು ನಮ್ಮ ಕರ್ತವ್ಯ. ಸಿಎಂ ಇದಕ್ಕೆ ಒಪ್ಪಿಗೆ ಕೊಡುತ್ತಾರೆ ಎಂಬ ಭರವಸೆ ಇದೆ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದರು.
Key words: Colorful, illuminations ,Vidhana Soudha, Speaker, UT Khadar
The post ವಿಧಾನಸೌಧಕ್ಕೆ ವರ್ಣರಂಜಿತ ದೀಪಾಲಂಕಾರ: ಏ.6 ರಂದು ಲೋಕಾರ್ಪಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.