29
April, 2026

A News 365Times Venture

29
Wednesday
April, 2026

A News 365Times Venture

ವಿನಯ್ ಕುಲಕರ್ಣಿ ಮೇಲ್ಮನವಿ ಅರ್ಜಿ ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟ್

Date:

ಬೆಂಗಳೂರು,ಏಪ್ರಿಲ್,28,2026 (www.justkannada.in):  ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ಪ್ರಶ್ನಿಸಿ  ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಮೇಲ್ಮನವಿ  ಅರ್ಜಿಯನ್ನು ವಿಚಾರಣೆಗೆ ಹೈಕೋರ್ಟ್ ಸ್ವೀಕರಿಸಿದೆ.

ಇಂದು ಹೈಕೋರ್ಟ್ ವಿಭಾಗಿಯ ಪೀಠದಲ್ಲಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ ಮೇಲ್ಮನವಿಯ ಅರ್ಜಿ ವಿಚಾರಣೆ ನಡೆಯಿತು. ವಿಚಾರಣಾ ನ್ಯಾಯಾಲಯದ ದಾಖಲೆ ಹಾಜರುಪಡಿಸಲು ಹೈಕೋರ್ಟ್ ಸೂಚಿಸಿತು.

680 ಪುಟಗಳ ತೀರ್ಪು ಇರುವುದರಿಂದ ಆಕ್ಷೇಪಣೆ ಸಮಯಕ್ಕೆ ಸಿಬಿಐ ಮನವಿ ಮಾಡಿತು. ಇದೆ ವೇಳೆ ವಿನಯ್ ಕುಲಕರ್ಣಿ ಪರ ವಕೀಲರು ಸಹ ರಜಾ ಕಾಲದ ಪೀಠದಲ್ಲಿ ವಿಚಾರಣೆಗೆ ಅನುಮತಿ ನೀಡಲು ಮನವಿ ಮಾಡಿದರು. ರಜಾಕಾಲದ ಪೀಠದಲ್ಲಿ ಅಹವಾಲು ಮಂಡಿಸಲು ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿದಾರರಿಗೆ ಅವಕಾಶ ನೀಡಿತು. ಬಳಿಕ ಏಪ್ರಿಲ್ 30ರಂದು ವಿಚಾರಣೆಗೆ ವಿನಯ್ ಕುಲಕರ್ಣಿ ಪರ ವಕೀಲರು ಜಡ್ಜ್ ಗೆ ಮನವಿ ಮಾಡಿದರು.

Key words: High Court, accepts, Vinay Kulkarni, appeal, hearing

The post ವಿನಯ್ ಕುಲಕರ್ಣಿ ಮೇಲ್ಮನವಿ ಅರ್ಜಿ ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಟ ಚೇತನ್  ಸದಸ್ಯತ್ವ ರದ್ದು ಮಾಡುವ ಬಗ್ಗೆ ಚರ್ಚೆ ಮಾಡ್ತೇವೆ- ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ

ಬೆಂಗಳೂರು,ಏಪ್ರಿಲ್,28,2026 (www.justkannada.in):   ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಸಮಾಧಿಗೆ ಜಾಗ...

ಮೇ ಅಂತ್ಯಕ್ಕೆ ಹೈಕಮಾಂಡ್ ಒಂದು ನಿರ್ಧಾರಕ್ಕೆ ಬರಬಹುದು- ಸಚಿವ ಕೆ.ಎಚ್ ಮುನಿಯಪ್ಪ

ನವದೆಹಲಿ,ಏಪ್ರಿಲ್, 28,2026 (www.justkannada.in):  ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಮೇ...

ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹಗೊಳಿಸುವಂತೆ ಆಗ್ರಹ: ಸ್ಪೀಕರ್ ಗೆ ಪತ್ರ

ಬೆಂಗಳೂರು,ಏಪ್ರಿಲ್,28,2026 (www.justkannada.in):  ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ...

KSDL ಅಭೂತಪೂರ್ವ ಸಾಧನೆ: ಇದೇ ಮೊದಲ ಬಾರಿ 2,016 ಕೋಟಿ ರೂ. ವಹಿವಾಟಿನ ವಿಕ್ರಮ

ಬೆಂಗಳೂರು,ಏಪ್ರಿಲ್,28,2026 (www.justkannada.in): ನೂರತ್ತು ವರ್ಷಗಳ ಇತಿಹಾಸವಿರುವ, ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು...