3
July, 2026

A News 365Times Venture

3
Friday
July, 2026

A News 365Times Venture

ವಿಮಾನ ಪತನ ದುರಂತ:  ಕೇಂದ್ರ ವಿಮಾನಯಾನ ಸಚಿವರ ರಾಜೀನಾಮೆಗೆ ಈಶ್ವರ್ ಖಂಡ್ರೆ ಆಗ್ರಹ

Date:

ಕಲಬುರುಗಿ,ಜೂನ್,13,2025 (www.justkannada.in):  ನಿನ್ನೆ ಅಹಮದಾಬಾದ್ ನ ಮೇಘಾನಿ ಪ್ರದೇಶದಲ್ಲಿ ವಿಮಾನ ಪತನವಾಗಿ 241 ಮಂದಿ ಸಾವನ್ನಪ್ಪಿದ ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಮಾನಯಾನ ಸಚಿವರು ರಾಜೀನಾಮೆ ನೀಡುವಂತೆ  ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಈಶ್ವರ್ ಖಂಡ್ರೆ,  ಕೇಂದ್ರ ಸರ್ಕಾರ ವಿಮಾನ ದುರಂತದ ಘಟನೆ ಹೊಣೆ ಹೊರಬೇಕು. ವಿಮಾನಯಾನ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಇಂತಹ ದುರಂತ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ಆ ವರದಿ ಜನರ ಮುಂದೆ ಇಡಬೇಕು ಎಂದು ಒತ್ತಾಯಿಸಿದರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ  ಕಾಲ್ತುಳಿತ ಘಟನೆ ಆದಾಗ ಬಿಜೆಪಿಯವರು ಸಿಎಂ, ಡಿಸಿಎಂ ರಾಜೀನಾಮೆ ಕೇಳುತ್ತಿದ್ದರು. ಆದರೆ ಕುಂಭಮೇಳ , ಪಹಲ್ಗಾಮ್ ಘಟನೆಯಲ್ಲಿ ರಾಜೀನಾಮೆ ಕೊಟ್ಟರಾ? ಸಾವಿನಲ್ಲಿ ಯಾರೂ ರಾಜಕೀಯ ಮಾಡಬಾರದು. ಟಾಟಾ ಗ್ರೂಪ್ ಮೃತ ಕುಟುಂಬಸ್ಥರಿಗೆ ಒಂದು ಕೋಟಿ ಪರಿಹಾರ ನೀಡಿದೆ. ಆದರೆ ಈ ಪರಿವಾರದವರಿಗೆ ಎಷ್ಟು ಕೋಟಿ ಕೊಟ್ಟರು ಕಡಿಮೆಯೇ ನಿರ್ವಹಣೆ ಮಾಡುವ ಡಿಜಿಸಿಎ ವಿಮಾನಯಾನ ಮಂತ್ರಿ ಏನು ಮಾಡುತ್ತಿದ್ದರು ಘಟನೆಗೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ನಿರ್ಲಕ್ಷ ವಹಿಸಿದ ಎಲ್ಲರ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.vtu

Key words: Plane crash, Ishwar Khandre, demands, resignation, Union Aviation Minister

The post ವಿಮಾನ ಪತನ ದುರಂತ:  ಕೇಂದ್ರ ವಿಮಾನಯಾನ ಸಚಿವರ ರಾಜೀನಾಮೆಗೆ ಈಶ್ವರ್ ಖಂಡ್ರೆ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯ ಸರ್ಕಾರ ಅಕ್ರಮ ಮತದಾರರ ಪಟ್ಟಿ ರಚನೆಗೆ ಮುಂದಾಗಿದೆ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು,ಜುಲೈ,3,2026 (www.justkannada.in):  ಕಲ್ಯಾಣ ಮಂಟಪ , ಒಂದೇ ಮನೆಯಲ್ಲಿ ಕೂತು ಎಸ್...

ಕೇಂದ್ರ ಸಚಿವರ ಭೇಟಿ: ಅನುದಾನ ಬಿಡುಗಡೆಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಮನವಿ

ಬೆಂಗಳೂರು,ಜುಲೈ,3,2026 (www.justkannada.in): ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ...

1.20 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾ ಬಲೆಗೆ ಬಿದ್ದ ಸರ್ವೆಯರ್

ಮೈಸೂರು,ಜುಲೈ3,2026 (www.justkannada.in): ಜಮೀನು ಪೋಡಿ ಹಾಗೂ ದುರಸ್ಥಿ ಮಾಡಲು1.20 ಲಕ್ಷ ರೂ...

ಕ್ವಾರಿ ದುರಂತ: ತಕ್ಷಣವೇ ಸರ್ಕಾರ ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸಲಿ- ಕೇಂದ್ರ ಸಚಿವ HDK ಆಗ್ರಹ

ಬೆಂಗಳೂರು,ಜುಲೈ,2,2026 (www.justkannada.in): ಬೆಂಗಳೂರು ದಕ್ಷಿಣ ಜಿಲ್ಲೆಯ ಮಾದಪಟ್ಟಣದಲ್ಲಿ ಕಲ್ಲುಕ್ವಾರಿಯಲ್ಲಿ ಬಂಡೆ ಕುಸಿದು...