ಮೈಸೂರು,ಮೇ,21, 2025 (www.justkannada.in): ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗವು, ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಸ್ಎಸ್ಎಹೆಚ್ಇಆರ್) ಯೋಗ ವಿಭಾಗದ ಸಹಯೋಗದೊಂದಿಗೆ ಮತ್ತು ಗ್ಲೋಬಲ್ ಅಸೋಸಿಯೇಷನ್ ಆಫ್ ಪಬ್ಲಿಕ್ ಹೆಲ್ತ್ ಆಶ್ರಯದಲ್ಲಿ, ವಿಶ್ವ ಅಧಿಕ ರಕ್ತದೊತ್ತಡ ದಿನವನ್ನುಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ‘ಅಧಿಕ ರಕ್ತದೊತ್ತಡಕ್ಕಾಗಿ ಯೋಗ’ , ಆರೋಗ್ಯ ಜಾಗೃತಿ ಚಟುವಟಿಕೆಗಳು ಮತ್ತು ಉಚಿತ ಆರೋಗ್ಯ ತಪಾಸಣೆಗಳು ನಡೆದವು. “ನಿಮ್ಮ ರಕ್ತದೊತ್ತಡವನ್ನು ನಿಖರವಾಗಿ ಅಳೆಯಿರಿ, ಅದನ್ನು ನಿಯಂತ್ರಿಸಿ, ಹೆಚ್ಚು ಕಾಲ ಬದುಕಿ” ಎಂಬ ವಾರ್ಷಿಕ ಥೀಮ್ ನೊಂದಿಗೆ ಕಾರ್ಯಕ್ರಮ ಜರುಗಿತು.
ಪ್ರಾಂಶುಪಾಲ ಡಾ. ನಾರಾಯಣಪ್ಪ. ಡಿ, ಉಪಪ್ರಾಂಶುಪಾಲ ಡಾ. ಪ್ರವೀಣ್ ಕುಲಕರ್ಣಿ (ಪ್ಯಾರಾ-ಕ್ಲಿನಿಕಲ್); ಆಡಳಿತ ಅಧಿಕಾರಿ ಸತೀಶ್ ಚಂದ್ರ, ಉಪಡೀನ್ ಡಾ. ಮಧು ಬಿ. ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಸುನಿಲ್ ಕುಮಾರ್. ಡಿ, ಮತ್ತು ಯೋಗ ವಿಭಾಗದ ಸಂಯೋಜಕ ಡಾ. ಸುಜನ್ ಎಂ.ಯು, ಸಸ್ಯಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಅಮೋಘ ಶ್ರೀ ಮತ್ತು ಸಮುದಾಯ ವೈದ್ಯಕೀಯ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ. ರಶ್ಮಿಎಸ್ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.
ಯೋಗವಿಭಾಗದ ಸಹಾಯಕ ಪ್ರಾಧ್ಯಾಪಕಿ ಜಾನವಿ ನೇತೃತ್ವದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ JSSAHER ನ ವಿದ್ಯಾರ್ಥಿಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. 90 ನಿಮಿಷಗಳ ಅವಧಿಯ ಈ ಕಾರ್ಯಕ್ರಮದಲ್ಲಿ, ಸ್ವಯಂಸೇವಕರು ಭಾಗವಹಿಸುವವರಿಗೆ ಸಹಾಯ ಮಾಡಿದರು.
ಆರೋಗ್ಯಮಾಹಿತಿಯುಳ್ಳ ಪೋಸ್ಟರ್ ಗಳ ಮೂಲಕ ಆರೋಗ್ಯ ಜಾಗೃತಿಯನ್ನು ಪ್ರಸಾರ ಮಾಡಲಾಯಿತು ಮತ್ತು ಸಿಬ್ಬಂದಿ ಸದಸ್ಯರನ್ನು ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಹಿಮೋಗ್ಲೋಬಿನ್ ಮಟ್ಟಗಳನ್ನ ಪರೀಕ್ಷಿಸಲಾಯಿತು.
Key words: World Hypertension Day, Yoga, free , health check-ups
The post ವಿಶ್ವ ಅಧಿಕ ರಕ್ತದೊತ್ತಡ ದಿನ: ಯೋಗ, ಉಚಿತ ಆರೋಗ್ಯ ತಪಾಸಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.