5
May, 2026

A News 365Times Venture

5
Tuesday
May, 2026

A News 365Times Venture

ಶಾಂತ ಸ್ವಭಾವ, ಪ್ರೀತಿ, ಸರಳ ಬದುಕನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ ಕೈವಾರ ತಾತಯ್ಯ- ಎಚ್ಎ ವೆಂಕಟೇಶ್

Date:

ಮೈಸೂರು, ಮಾರ್ಚ್,3,2026 (www.justkannada.in): ಕೈವಾರ ತಾತಯ್ಯನವರು ಈ ನಾಡು ಕಂಡ ಅಪರೂಪದ ಸಂತರು, ಸಮಾಜ ಸುಧಾರಕರು, ಮಹಾನ್ ಜ್ಞಾನಿಗಳು, ಯೋಗಿಗಳು, ಸಿದ್ಧಪುರುಷರು ಹಾಗೂ ತ್ರಿಕಾಲ ಜ್ಞಾನಿಗಳು. ಸದಾ ಭಕ್ತಿ, ಭಜನೆ ,ಧ್ಯಾನ ಮತ್ತು ಉಪದೇಶಗಳ ಮೂಲಕ ಅಂತರಂಗ ಶುದ್ದಿಗೆ ಒತ್ತು ಕೊಟ್ಟರು. ಶಾಂತ ಸ್ವಭಾವ, ಪ್ರೀತಿ, ಸರಳ ಬದುಕನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ ಎಂದು ಶ್ರೀ ಯೋಗಿ ನಾರಾಯಣ ಯತಿಂದ್ರರ ಪ್ರಚಾರ ಸಭಾ ಪ್ರಧಾನ ಸಂಚಾಲಕರು ಹಾಗೂ ಮೈಲಾಕ್ ಮಾಜಿ ಅಧ್ಯಕ್ಷರಾದ ಎಚ್ಎ ವೆಂಕಟೇಶ್ ಬಣ್ಣಿಸಿದರು.

ಮೈಸೂರಿನ ಸರಸ್ವತಿಪುರಂ ನಲ್ಲಿರುವ ಬಣಜಿಗ( ಬಲಿಜ) ವಿದ್ಯಾರ್ಥಿ ನಿಲಯದಲ್ಲಿ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ 300ನೇ ವರ್ಷದ ಜಯಂತಿಯನ್ನು ಉದ್ಘಾಟಿಸಿ  ಮಾತನಾಡಿದ ಹೆಚ್.ಎ ವೆಂಕಟೇಶ್,  ಕೈವಾರ ನಾರೇಯಣ ಯುತಿಯ ಕಾಲ ಕ್ರಿ.ಶ.1730 ರಿಂದ1840.100 ವರ್ಷಗಳ ಸುದೀರ್ಘ ಬದುಕಿನಲ್ಲಿ ಅರ್ಧಶತಕ ಪ್ರಾಪಂಚಿಕ ಜೀವನವನ್ನು ಉಳಿದರ್ದ ಬಾಳನ್ನು ಯೋಗಿಯಾಗಿ ಬಾಳಿದವರು. ಒಂದು ಸಾಧಾರಣ ಸಂಸಾರದಲ್ಲಿದ್ದು ಒಬ್ಬ ಬಳೆ ವ್ಯಾಪಾರಿಯಾಗಿ ಜೀವನ ಸಾಗಿಸುತ್ತಾ ಮಕ್ಕಳನ್ನು ಪಡೆದು, ನಂತರ ದಿನಗಳಲ್ಲಿ ಸಂಸಾರ ತ್ಯಜಿಸಿ ಸನ್ಯಾಸ ಸ್ವೀಕರಿಸಿ , ಸಮಾಜವನ್ನು ಆಧ್ಯಾತ್ಮಿಕ ಮಾರ್ಗಕ್ಕೆ ಕೊಂಡೊಯ್ಯುವ ಕೆಲಸದಲ್ಲಿ ತೊಡಗಿಸಿಕೊಂಡರು. ನಿಜಕ್ಕೂ ತಾತಯ್ಯನವರ  ಜೀವನ ಒಂದು ಅದ್ಭುತ ಪವಾಡ ಎಂದರು.

ಸಂಸಾರ ಜೀವನದಲ್ಲಿ ಬಳೆಗಾರ ವೃತ್ತಿಯಲ್ಲಿ ನಿರತರಾಗಿದ್ದ  ತಾತಯ್ಯನವರು ಯೋಗಿ ಬಾಳಿನಲ್ಲಿ ಕವಿಯಾಗಿ, ಸಮಾಜಮುಖಿ ಚಿಂತಕರಾಗಿ, ಸಾಮಾಜಿಕ ಪಿಡುಗುಗಳನ್ನು ಪರಿಹರಿಸಿದ ಹರಿಕಾರನಾಗಿ ,ಕೈವಾರ ನಾರೇಯಣಪ್ಪ ಸಾರ್ಥಕತೆಯನ್ನು ಕಂಡಿದ್ದಾರೆ. ಕಾಲಜ್ಞಾನ, ನಾರೇಯಣ ಕವಿ ಶತಕ, ಸೂಕ್ಷ್ಮ ಭೀಮಲಿಂಗ ಮತ್ತು ಪ್ರಪಂಚ ನಾರೇಯಣ ಕವಿ ಪದ್ಯಗಳು ತಾತಯ್ಯನವರು ಬರೆದಿರುವ ಪ್ರಮುಖ ಕೃತಿಗಳು.

ಒಟ್ಟಾರೆಯಾಗಿ ಸಾಹಿತ್ಯ, ವಿಜ್ಞಾನ ,ತಂತ್ರಜ್ಞಾನ, ಆರ್ಥಿಕ ,ರಾಜಕೀಯ, ಧಾರ್ಮಿಕ ಮತ್ತು ಆಧ್ಯಾತ್ಮಿಕಗಳೆಲ್ಲದರ ಸಮ ಹಿತ ಮಿಶ್ರಣವಿರುವ ತಾತಯ್ಯ ನವರ ವಿಚಾರಧಾರೆಗಳು ಎಲ್ಲಾ ಕಾಲಕ್ಕೂ ಅನ್ವಯಗೊಳ್ಳುವ ಗುಣ ಹೊಂದಿದೆ ಎಂದು ಅಭಿಪ್ರಾಯ ಪಟ್ಟರು.

ಸಂಘದ ಅಧ್ಯಕ್ಷ ಎಂ. ನಾರಾಯಣ್, ಪ್ರಧಾನ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ,ಖಜಾಂಚಿ ಕೆ.ಚಂದ್ರಶೇಖರ್, ನಿರ್ದೇಶಕರಗಳಾದ ಬಿ .ಕೆ. ಸುರೇಶ್, ಟಿ. ಎಸ್.ರಮೇಶ್, ಎ.ಚನ್ನಕೇಶವ, ನಿವೃತ್ತ ಶಿಕ್ಷಕ ರಮೇಶ್, ಮಂಜುನಾಥ್ ವ್ಯವಸ್ಥಾಪಕ ಎಚ್. ಆರ್. ವೆಂಕಟೇಶ್, ನಿಲಯ ಪಾಲಕ ರಾಮಕೃಷ್ಣಯ್ಯ, ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು- ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Key words: Kaivara Tathaiah, great spirit, HA Venkatesh

The post ಶಾಂತ ಸ್ವಭಾವ, ಪ್ರೀತಿ, ಸರಳ ಬದುಕನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ ಕೈವಾರ ತಾತಯ್ಯ- ಎಚ್ಎ ವೆಂಕಟೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

TVK ಶಾಸಕಾಂಗ ಪಕ್ಷದ ನಾಯಕನಾಗಿ ನಟ ವಿಜಯ್ ಆಯ್ಕೆ

ಚೆನ್ನೈ,ಮೇ,5,2026 (www.justkannada.in): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ  ಹೊಸ...

ಪ. ಬಂಗಾಳ, ಅಸ್ಸಾಂನಲ್ಲಿನ ಜಯ ಬಿಜೆಪಿಯದ್ದಲ್ಲ, ಅದು ಚು.ಆಯೋಗದ್ದು- ಪ್ರಿಯಾಂಕ್ ಖರ್ಗೆ ಕಟು ಟೀಕೆ

ಬೆಂಗಳೂರು,ಮೇ,5,2026 (www.justkannada.in): ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿಯ ಜಯ ಜಯವೇ...

‘ಮುಖ್ಯಮಂತ್ರಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡಲ್ಲ’ ಎಂದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ,ಮೇ,5,2026 (www.justkannada.in):  ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನ...

ಸಾಮಾಜಿಕ ನ್ಯಾಯದಂತೆ ರಾಜಕೀಯ ಅಧಿಕಾರ ದೊರೆಯಬೇಕಿದೆ- MLC ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಮೇ,5,2026 (www.justkannada.in): ಸಾಮಾಜಿಕ ನ್ಯಾಯದಂತೆ ರಾಜಕೀಯ ಅಧಿಕಾರ ದೊರೆಯಬೇಕಿದೆ ಎಂದು  ವಿಧಾನಪರಿಷತ್...