ಮೈಸೂರು,ಜುಲೈ,1,2025 (www.justkannada.in) : ಅರಮನೆ ನಗರಿ, ಪಾರಂಪರಿಕ ನಗರಿ, ನಿವೃತ್ತರ ಸ್ವರ್ಗ ಎಂದು ಪ್ರಸಿದ್ದಿಯಾಗಿರುವ ಮೈಸೂರಿಗೆ ಈಗ ಹೃದಯಾಘಾತ ನರಕ ಎಂಬ ಅಪಕೀರ್ತಿ ಬಂದಿದೆ. ರಾಜ್ಯದಲ್ಲಿಯೇ ಹೃದಯಾಘಾತದಿಂದ ಮೃತರಾದವಲ್ಲಿ ಮೈಸೂರಿಗರೇ ಹೆಚ್ಚು ಎಂಬ ಮಾಹಿತಿ ಜಯದೇವ ಆಸ್ಪತ್ರೆ ವರದಿಯಿಂದ ಲಭ್ಯವಾಗಿದೆ.
ಈ ಕುರಿತು ಕಳವಳ ವ್ಯಕ್ತಪಡಿಸಿದ ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥ ಡಾ.ಸದಾನಂದ್, ಪ್ರತಿದಿನ ಹೃದಯಾಘಾತದಿಂದ 3 ರಿಂದ ನಾಲ್ಕು ಮಂದಿ ಮೃತಪಡುತ್ತಿದ್ದಾರೆ. ಪ್ರತಿಶತ ಪ್ರತಿ ತಿಂಗಳು 100 ರಿಂದ 120 ಮಂದಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ನೂರು ಮಂದಿ ಸಾವನ್ನಪ್ಪುತ್ತಿರುವುದಾಗಿ ತಿಳಿಸಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಹೃದಯಾಘಾತದಿಂದ 109 ಮಂದಿ ಸಾವನ್ನಪ್ಪಿದರೆ ಮೇ ತಿಂಗಳಲ್ಲಿ 106 ಮಂದಿ ಮೃತಪಟ್ಟಿದ್ದಾರೆ. ತೀವ್ರ ಹೃದಯಾಘತಾದಿಂದಲೇ ಪ್ರತಿತಿಂಗಳು 70 ರಿಂದ 80 ಮಂದಿ ಸಾವನ್ನಪ್ಪುತ್ತಿದ್ದು, ಈ ಪೈಕಿ ಬಹುತೇಕ ಯುವಕ ಸಮೂಹದವರೇ ಹೆಚ್ಚು ಎಂದು ಡಾ.ಸದಾನಂದ್ ಅವರು ತಿಳಿಸಿದ್ದಾರೆ.
Key words: Most, deaths, heart attacks, Mysore
The post ಶಾಕಿಂಗ್ ನ್ಯೂಸ್: ಹೃದಯಾಘಾತದಿಂದ ಮೃತರಾಪಟ್ಟವರಲ್ಲಿ ಮೈಸೂರಿಗರೇ ಹೆಚ್ಚು..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.