9
June, 2026

A News 365Times Venture

9
Tuesday
June, 2026

A News 365Times Venture

ಶಿಕ್ಷಣವೇ ಸಮಾಜದ ಪ್ರಗತಿಯ ಅಡಿಪಾಯ, ಪ್ರತಿಭೆಯೇ ರಾಷ್ಟ್ರದ ಭವಿಷ್ಯದ ಶಕ್ತಿ : ಡಾ.ಈ.ಸಿ.ನಿಂಗರಾಜ್ ಗೌಡ.

Date:

ಮೈಸೂರು,ಮೇ,13,2026 (www.justkannada.in): ಶಿಕ್ಷಣವೇ ಸಮಾಜದ ಪ್ರಗತಿಯ ಅಡಿಪಾಯ, ಈಗಿನ ವಿದ್ಯಾರ್ಥಿಗಳ ಪ್ರತಿಭೆಯೇ ರಾಷ್ಟ್ರದ ಭವಿಷ್ಯದ ಶಕ್ತಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ರವರು ತಿಳಿಸಿದರು.

ರೋಟರಿ ಮೈಸೂರು ಸೌತ್ ಈಸ್ಟ್ ಕ್ಲಬ್ ವತಿಯಿಂದ ರೋಟರಿ ಎಸಿಎಂಇ ಶಾಲೆಯಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ.ಈ.ಸಿ.ನಿಂಗರಾಜ್ ಗೌಡ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಪಠ್ಯದ ಜೊತೆಗೆ ನಿಮಗೆ ಇಷ್ಟವಾಗುವ ಕನಿಷ್ಥ ಇಬ್ಬರು ಮಹಾಪುರುಷರ ಜೀವನ ಚರಿತ್ರೆಯನ್ನು ಓದಬೇಕು. ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಷ್, ಮಹಾತ್ಮ ಗಾಂಧಿಜಿ, ಡಾ.ಬಿ.ಆರ್. ಅಂಬೇಡ್ಕರ್, ಸರ್.ಎಂ.ವಿಶ್ವೇಶರಯ್ಯ, ಡಾ.ಎಸ್. ರಾಧಕೃಷ್ಣನ್, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಕುವೆಂಪು, ಬೇಂದ್ರೆ, ಬಸವಣ್ಣ ಇನ್ನೂ ಮುಂತಾದವರ ಜೀವನವನ್ನೂ ತಿಳಿದುಕೊಳ್ಳುವ ಮೂಲಕ ಅವರ ತತ್ವ ಆದರ್ಶಗಳನ್ನೂ ನಾವೆಲ್ಲರೂ ಪಾಲಿಸಬೇಕು. ಶಿಕ್ಷಣದ ಜೊತೆಗೆ ಸಾಹಿತ್ಯ, ಕಲೆ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಬೇಕೆಂದರು.

ಇಂದಿನ ಪ್ರತಿಭಾವಂತರೇ ನಾಳಿನ ದೇಶದ ಭವಿಷ್ಯ ಎಂಬ ಸಂದೇಶದೊಂದಿಗೆ ಈ ಪುರಸ್ಕಾರ ಕಾರ್ಯಕ್ರಮ ಸಮಾಜದಲ್ಲಿ ಜ್ಞಾನ, ಸಂಸ್ಕಾರ ಮತ್ತು ಸಾಧನೆಯ ಮೌಲ್ಯಗಳನ್ನು ಬೆಳೆಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಡಾ.ಈ.ಸಿ.ನಿಂಗರಾಜ್ ಗೌಡ ಅವರು ತಿಳಿಸಿದರು.

ರೋಟರಿ ಮೈಸೂರು ಸೌತ್ ಈಸ್ಟ್ ಕ್ಲಬ್ ವತಿಯಿಂದ  ಹತ್ತನೆಯ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ರೋಟರಿ ಸಭಾ ಭವನದಲ್ಲಿ ಸನ್ಮಾನಿಸಲಾಯಿತು.

ರೋಟರಿ ಮೈಸೂರು ಸೌತ್ ಈಸ್ಟ್ ಅಧ್ಯಕ್ಷ ರೋ.ಮುರಳೀಧರ ವೈ ವಿ, ಕಾರ್ಯದರ್ಶಿ ರೋ. ಸುರೇಶ್ , ರೋ ಡಾ. ಈ.ಸಿ. ನಿಂಗರಾಜ್ ಗೌಡ, ರೋ.ಎಂ.ಮೋಹನ್, ರೋ.ವೆಂಕಟೇಶ್, ರೋ.ವಾಸುದೇವನ್, ರೋ.ಗೋವರ್ಧನ್ ಯಾದವ್, ರೋ.ಎಂ.ಆರ್.ಸಾಲಿಯಾನ್, ರೋ.ಜಿ.ವಿ.ಪಿಂಟೋ, ರೋ.ಮುರಳಿ, ರೋ.ಗಣವಂತ, ರೋ.ರವೀಂದ್ರ ಮತ್ತು ಕ್ಲಬ್ ನ ಸದಸ್ಯರು ಹಾಗೂ ACME ಶಾಲೆಯ ಚೇರ್ಮನ್ ಡಾ.ಶರತ್ ಕುಮಾರ್, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Key words: Education, foundation, strength, nation, Dr. E.C. Ningaraj Gowda.

The post ಶಿಕ್ಷಣವೇ ಸಮಾಜದ ಪ್ರಗತಿಯ ಅಡಿಪಾಯ, ಪ್ರತಿಭೆಯೇ ರಾಷ್ಟ್ರದ ಭವಿಷ್ಯದ ಶಕ್ತಿ : ಡಾ.ಈ.ಸಿ.ನಿಂಗರಾಜ್ ಗೌಡ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೂ.21 ರಂದು ಮೈಸೂರು ಅರಮನೆ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಅಪರ ಜಿಲ್ಲಾಧಿಕಾರಿ

ಮೈಸೂರು, ಜೂನ್,8,2026 (www.justkannada.in): ಜಿಲ್ಲಾಡಳಿತದ ವತಿಯಿಂದ ಜೂನ್ 21 ರಂದು  ಮೈಸೂರು...

ಭರ್ಜರಿ ಕಾರ್ಯಚರಣೆ: 41 ಸ್ವತ್ತು ಕಳವು ಮತ್ತು 2 ವಂಚನೆ ಪ್ರಕರಣ ಭೇದಿಸಿದ ಮೈಸೂರು ಪೊಲೀಸರು

ಮೈಸೂರು,ಜೂನ್,8,2026 (www.justkannada.in): ಮೈಸೂರು ನಗರದ ವಿವಿಧ ಠಾಣಾ ಪೊಲೀಸರು ಭರ್ಜರಿ ಕಾರ್ಯಚರಣೆ...

KPCC ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು ನಿಜ- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಜೂನ್,8,2026 (www.justkannada.in): ಕೆಪಿಸಿಸಿ ಅಧ್ಯಕ್ಷ  ಸ್ಥಾನಕ್ಕೆ ನನ್ನ ಬೇಡಿಕೆ ಇದ್ದಿದ್ದು ನಿಜ....

13 ಸಚಿವರಿಗೆ ಕೊಠಡಿಗಳ ಹಂಚಿಕೆ: ರಾಮಲಿಂಗಾರೆಡ್ಡಿ ಅವರಿಗೆ ಬಂಪರ್

ಬೆಂಗಳೂರು, ಜೂನ್,8,2026 (www.justkannada.in): ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವ ಸಂಪುಟದ ನೂತನ...