28
April, 2026

A News 365Times Venture

28
Tuesday
April, 2026

A News 365Times Venture

ಸಚಿವ ಸುಧಾಕರ್ ಗೆ ಏನಾಗಿದೆ? ಮಾಹಿತಿ ಏಕೆ ಮುಚ್ಚಿಡುತ್ತಿದ್ದೀರಿ? ಬಹಿರಂಗಪಡಿಸಿ- ಕೇಂದ್ರ ಸಚಿವ HDK ಆಗ್ರಹ

Date:

ಬೆಂಗಳೂರು,ಏಪ್ರಿಲ್,27,2026 (www.justkannada.in): ಸಚಿವ ಡಿ.ಸುಧಾಕರ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸುಧಾಕರ್ ಅವರ ಆರೋಗ್ಯದ ಬಗ್ಗೆ ರಾಜ್ಯ ಸರ್ಕಾರ ಸರಿಯಾದ ಮಾಹಿತಿ ನೀಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸಚಿವ‌ ಸುಧಾಕರ್ ಸಾವು ಬದುಕಿನ ಹೋರಾಟ ಮಾಡುತ್ತಿದ್ದಾರೆ ಎಂದು ಇವರು ಹೇಳುತ್ತಿದ್ದಾರೆ. ಆದರೆ ಜನರೇ ಬೇರೆ ಮಾತನಾಡುತ್ತಿದ್ದಾರೆ. ಹಿರಿಯೂರು ಅಥವಾ ಬೇರೆ ಕ್ಷೇತ್ರದ ಬಗ್ಗೆ ಮಾತಾಡಲ್ಲ. ಆದರೆ, ಒಳಗೆ ಏನು ನಡೆಯುತ್ತಿದೆ ಎಂಬುದನ್ನು ನೋಡಬೇಕು. ಯಾವ ಕಾರಣಕ್ಕೆ ಕೆಲ ವಿಷಯಗಳನ್ನು ಮುಚ್ಚಿಟ್ಟಿದ್ದಾರೆ? ಅವರಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಎಲ್ಲಾ ವಿಷಯಗಳನ್ನು ಮುಚ್ಚಿಡಲಾಗಿದೆಯೇ? ಎಂಬುದರ ಬಗ್ಗೆ ರಾಜ್ಯ ಸರ್ಕಾರ ಹೇಳಬೇಕಾಗುತ್ತದೆ ಎಂದಿದ್ದಾರೆ.

ಯಾವ ಕಾರಣಕ್ಕೆ ಎಲ್ಲವನ್ನು ಮುಚ್ಚಿಡುತ್ತಿದ್ದಾರೆ ಎಂಬುದನ್ನು ಜನತೆಗೆ ಹೇಳುವ ಜವಾಬ್ದಾರಿ ಸರ್ಕಾರದ್ದಾಗಿದೆ. ಇಂಥ ವಿಚಾರಗಳಲ್ಲಿ ನಾನು ಚರ್ಚೆ ಮಾಡಲ್ಲ. ಆದರೆ, ಕೆಲ ವ್ಯಕ್ತಿಗಳು ಇಂತಹ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುವಲ್ಲಿ ಎಕ್ಸ್ ಪರ್ಟ್ ಗಳಿದ್ದಾರೆ ಎಂದು ಹೆಚ್ ಡಿಕೆ ನುಡಿದರು.

Key words: Minister, D.Sudhakar, Condition, serious. hiding information, Union Minister, HDK

The post ಸಚಿವ ಸುಧಾಕರ್ ಗೆ ಏನಾಗಿದೆ? ಮಾಹಿತಿ ಏಕೆ ಮುಚ್ಚಿಡುತ್ತಿದ್ದೀರಿ? ಬಹಿರಂಗಪಡಿಸಿ- ಕೇಂದ್ರ ಸಚಿವ HDK ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು: ಜೆಎಸ್ಎಸ್ ಕಾರ್ಪೊರೇಟ್ ಲಾ ಮೂಟ್ ಕೋರ್ಟ್ ಸ್ಪರ್ಧೆ ಯಶಸ್ವಿ

ಮೈಸೂರು,ಏಪ್ರಿಲ್,27,2026 (www.justkannada.in): ಜೆಎಸ್ಎಸ್ ಮಹಾವಿದ್ಯಾಪೀಠದ ಅಧೀನದಲ್ಲಿರುವ ಮೈಸೂರು ಕುವೆಂಪುನಗರದ ಜೆಎಸ್ಎಸ್ ಕಾನೂನು...

ಹಠಾತ್ ಕುಸಿದು ಬಿದ್ದು ಕೋಮಾಗೆ ಜಾರಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸಾವು

ಹಾಸನ, ಏಪ್ರಿಲ್,27,2026 (www.justkannada.in): ಹಠಾತ್ ಕುಸಿದು ಬಿದ್ದು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ...

ಸಂಪುಟ ಪುನಾರಚನೆಯಾಗಿ ಬೇರೆಯವರಿಗೂ ಅವಕಾಶ ಸಿಗಬೇಕು- ಸಚಿವ ದಿನೇಶ್ ಗುಂಡೂರಾವ್

ಹುಬ್ಬಳ್ಳಿ,ಏಪ್ರಿಲ್,27,2026 (www.justkannada.in): ಸಚಿವ ಸಂಪುಟ ಪುನಾರಚನೆಯಾಗಿ ಬೇರೆಯವರಿಗೂ ಅವಕಾಶ  ಸಿಗಬೇಕು ಎಂದು...

ಮಾಡೋದೆ ರಾಜಕೀಯ, ಅದರಲ್ಲಿ ಬೆಳವಣಿಗೆ ಏನಿದೆ? ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಏಪ್ರಿಲ್,27,2026 (www.justkannada.in):  ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ...