ಬೆಳಗಾವಿ,ಜೂನ್,6,2026 (www.justkannada.in): ಸಿಎಂ ಆಗಿ ಡಿಕೆ ಶಿವಕುಮಾರ್ ಕಳೆದ ಮೂರು ದಿನಗಳ ಹಿಂದೆ ಪ್ರಮಾಣ ವಚನ ಸ್ವೀಕರಿಸಿದ್ದು, ಡಿಕೆ ಶಿವಕುಮಾರ್ ಸಂಪುಟಕ್ಕೆ 13 ಮಂದಿ ಶಾಸಕರು ಸಚಿವರಾಗಿ ಸೇರ್ಪಡೆಯಾಗಿದ್ದಾರೆ.ಇನ್ನು ಉಳಿದ ಸ್ಥಾನಗಳಿಗಾಗಿ ಶಾಸಕ ಪೈಪೋಟಿ ಹೆಚ್ಚಾಗಿದೆ.
ಇದೀಗ ಶಾಸಕ ಲಕ್ಷ್ಮಣ್ ಸವದಿ ಸಹ ತಮಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಚಿವ ಸ್ಥಾನದ ಭರವಸೆ ಕೊಟ್ಟಿದ್ದರು. ಮುಂದಿನ ಸಲ ಅವಕಾಶ ಕೊಡತ್ತೀನಿ ಅಂದಿದ್ದರು. ಆದರೆ ಕೊಟ್ಟಿಲ್ಲ.
ಸಚಿವ ಸಂಪುಟಕ್ಕೆ ಇನ್ನೂ 20 ನಾಯಕರನ್ನ ತೆಗೆಕೊಳ್ಳುವ ಅವಕಾಶವಿದೆ. ಕಾದು ನೋಡಬೇಕು ಎಂದು ಶಾಸಕ ಲಕ್ಷ್ಮಣ್ ಸವದಿ ತಿಳಿಸಿದರು. ಸಿಎಂ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಪಡೆಯಲು ಹಲವು ಶಾಸಕರು ಲಾಬಿ ನಡೆಸುತ್ತಿದ್ದಾರೆ.
Key words: MLA, Laxman Savadi , ministerial post
The post ಸಚಿವ ಸ್ಥಾನಕ್ಕೆ ಆಗ್ರಹಿಸಿದ ಶಾಸಕ ಲಕ್ಷ್ಮಣ್ ಸವದಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




