ಚಾಮರಾಜನಗರ,ಏಪ್ರಿಲ್,21,2026 (www.justkannada.in): ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ. ವೀಕ್ ಆಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಸಮಯಕ್ಕೆ ತಕ್ಕಂತೆ ವೀಕ್ ಅಂಡ್ ಸ್ಟ್ರಾಂಗ್ ಆಗಿರಬೇಕು ಎಂದಿದ್ದಾರೆ.
ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಂದರ್ಭಕ್ಕೆ ತಕ್ಕಂತೆ ವೀಕ್ ಆಗಬೇಕು ಹಾಗೆಯೇ ಸ್ಟ್ರಾಂಗ್ ಆಗಬೇಕು. ಎಲ್ಲವೂ ಸಮಯ ಸಂದರ್ಭಕ್ಕೆ ತಕ್ಕಂತೆ ಇರಬೇಕು ರಾಜಕೀಯದಲ್ಲಿ ಗೀವ್ ಅಂಡ್ ಟೇಕ್ ಪಾಲಿಸಿ ಅನುಸರಿಸಬೇಕು ಎಂದರು.
ಇನ್ನು ದಾವಣಗೆರೆ ದಕ್ಷಿಣ ಉಪಚುನಾವಣೆ ವಿಚಾರ ಮುಸ್ಲೀಂ ಸಮುದಾಯದ ಮುಖಂಡರು ಮುನಿಸಿಕೊಂಡಿದ್ದಾರೆಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, ಅಲ್ಪಸಂಖ್ಯಾತರು ಮುನಿಸಿಕೊಂಡಿದ್ದರೇ ನಾವು ಸರಿಪಡಿಸುತ್ತೇವೆ ಎಂದರು.
Key words: CM Siddaramaiah, weak, strong, Minister, Satish Jarkiholi
The post ಸಮಯಕ್ಕೆ ತಕ್ಕಂತೆ ವೀಕ್ ಅಂಡ್ ಸ್ಟ್ರಾಂಗ್ ಆಗಿರಬೇಕು- ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




