ಮೈಸೂರು, ಫೆ. 21: ಮಾನವೀಯತೆಯ ದೃಷ್ಟಿಯಿಂದ ಸರ್ಕಾರಿ ಗೋಮಾಳದಲ್ಲಿ ಉಳಿಮೆ ಮಾಡುತ್ತಿದ್ದ ರೈತರ ದಾಖಲೆ ಆಧರಿಸಿ ಸರ್ಕಾರ ಪರಿಹಾರ ನೀಡುತ್ತಿದೆ. ಉಳುಮೆ ಮಾಡುತ್ತಿರುವ ದಾಖಲೆ ಸಲ್ಲಿಸಿ ಪರಿಹಾರ ಪಡೆಯುವಂತೆ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲೆಯ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಸರ್ಕಾರಿ ಗೋಮಾಳದಲ್ಲಿ ಸುಮಾರು 150ಕ್ಕೂ ಹೆಚ್ಚು ರೈತ ಕುಟುಂಬದವರು ಉಳಿಮೆ ಮಾಡಿ ಜೀವನ ಸಾಗಿಸುತ್ತಿದ್ದು ಈ ಗೋಮಾಳವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮದವರು ವಶಕ್ಕೆ ಪಡೆದುಕೊಂಡು ರೈತರಿಗೆ ಯಾವುದೇ ಭೂ ಪರಿಹಾರ ನೀಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಾ.ಯತೀಂದ್ರ ಸಿದ್ದರಾಮಯ್ಯ, ಮಾನವೀಯತೆ ದೃಷ್ಟಿಯಿಂದ ಸರ್ಕಾರಿ ಗೋಮಾಳದಲ್ಲಿ ಉಳಿಮೆ ಮಾಡುತ್ತಿದ್ದ ರೈತರ ದಾಖಲೆಗಳನ್ನು ಪಡೆದುಕೊಂಡು ಸರ್ಕಾರ ಪರಿಹಾರ ನೀಡುತ್ತಿದೆ. ಈ ಭೂಮಿಯಲ್ಲಿ ನೀವು ಉಳುಮೆ ಮಾಡುತ್ತಿದ್ದು ನಿಮ್ಮಲ್ಲಿ ದಾಖಲೆಗಳು ಇದ್ದರೆ ಅದನ್ನು ತಾಲೂಕು ತಹಸೀಲ್ದಾರ್ ಅವರಿಗೆ ಸಲ್ಲಿಸಿದರೆ ನಿಮಗೂ ಕೂಡ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಆಗ, ಈ ಭೂಮಿ ವ್ಯಾಪ್ತಿಯಲ್ಲಿ ಯಾರು ಉಳುಮೆ ಮಾಡದೆ ಇರುವಂತಹ ಬೇರೆ ಬೇರೆ ಗ್ರಾಮಗಳ ಬೇರೆ ಬೇರೆ ಭಾಗದ ರೈತರುಗಳು ಪರಿಹಾರ ಪಡೆದುಕೊಳ್ಳುತ್ತಿದ್ದಾರೆ . ಕೂಡಲೇ ಮುಖ್ಯಮಂತ್ರಿಗಳು , ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಲೋಪ ಸರಿಪಡಿಸುವಂತೆ ಸೂಚನೆ ನೀಡಬೇಕು ಎಂದು ರೈತರು ಒತ್ತಾಯ ಮಾಡಿದರು .
key words: ‘Land compensation’, farmers, tilling, gomaala, Dr Yatindra Siddaramaiah
‘Land compensation’ if farmers tilling in government gomaala submit documents: Dr Yatindra Siddaramaiah
The post ಸರ್ಕಾರಿ ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ರೈತರು ದಾಖಲೆ ಸಲ್ಲಿಸಿದರೆ “ ಭೂ ಪರಿಹಾರ “: ಡಾ.ಯತೀಂದ್ರ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.