11
June, 2026

A News 365Times Venture

11
Thursday
June, 2026

A News 365Times Venture

ಸಾಮಾಜಿಕ ಚಳವಳಿ ಮೂಲಕ ಸಮಸಮಾಜ ನಿರ್ಮಾಣ ಮಾಡಿದವರು ಬಸವಣ್ಣ- ಸಚಿವ ಹೆಚ್.ಸಿ ಮಹದೇವಪ್ಪ

Date:

ಮೈಸೂರು,ಏಪ್ರಿಲ್,20,2026 (www.justkannada.in): ಸಾಮಾಜಿಕ ಚಳವಳಿ ಮೂಲಕ ಸಮಸಮಾಜ ನಿರ್ಮಾಣ ಮಾಡಿದವರು ಬಸವಣ್ಣ. ವರ್ಣಾಶ್ರಮದ ವಿರುದ್ದ ವಚನ ಸಾಹಿತ್ಯ ಮೂಲಕ ಸಂದೇಶ ಸಾರಿದವರು ಬಸವೇಶ್ವರರು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ನುಡಿದರು.

ಇಂದು ಮೈಸೂರಿನಲ್ಲಿ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಬಸವೇಶ್ವರರು ನಮಗೆ ದೊಡ್ಡ ಪ್ರೇರಣ ಶಕ್ತಿ.  ಬಸವಣ್ಣ 8ನೇ ವಯಸ್ಸಿನಲ್ಲಿ ಜನಿವಾರ ಧರಿಸುವ ಸಂದರ್ಭ ಬಂದಾಗ ಧಿಕ್ಕಿರಿಸಿ ನನಗಿಂತ ದೊಡ್ಡವಳಾದ ಅಕ್ಕನಿಗೆ ಜನಿವಾರ ಹಾಕುಲು ಹೇಳಿದರು.  ಆಗ ಆಕೆ ಹೆಣ್ಣೂ ಎಂದಾಗ ಲಿಂಗ ತಾರತಮ್ಯವನ್ನು ವಿರೋಧಿಸಿದರು ಸಾಮಾಜಿ ಚಳುವಳಿ ಮೂಲಕ ಸಮಸಮಾಜ ನಿರ್ಮಾಣ ಮಾಡಿದರು.  ಜನರಿಗೆ ಅರ್ಥವಾಗುವ ರೀತಿ ಹೋರಾಟ ಮಾಡಿದರು ಎಂದರು.

ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ  ಎಂದು ಸಿಎಂ ಘೋಷಿಸಿದ್ದಾರೆ. ಬುದ್ದ, ಬಸವ ಅಂಬೇಡ್ಕರ್, ಪೆರಿಯಾರ್, ಗಾಂಧಿ, ಪುಲೆ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡು ಚರಿತ್ರೆ ನಿರ್ಮಿಸಿದರು.  800 ವರ್ಷಗಳ ಹಿಂದೆಯೇ ಅನುಭವ ಮಂಟಪ ನಿರ್ಮಿಸಿ ಅಲ್ಲಮ ಪ್ರಭು ಅವರನ್ನ ಅಧ್ಯಕ್ಷರನ್ನಾಗಿ ಮಾಡಿದರು ಈಗ ಮಹಿಳಾ  ಮೀಸಲಾತಿ ಬಿಲ್ ಮಂಡಿಸಿದ್ದಾರೆ. ಆದರೆ ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ತಂದು ಹೆಣ್ಣು ಮಕ್ಕಳಿಗೂ ಸಮಾನ ಹಕ್ಕು ನೀಡುವಂತೆ ಪ್ರತಿಪಾದಿಸಿದಾಗ ಅಂಬೇಡ್ಕರ್ ಗೆ ಸೋಲಾಗುವಂತೆ ಮಾಡಿದ್ದು ಮನುವಾದಿಗಳು. ಸಾಮಾಜಿಕ ತಳಹದಿಯ ಮೇಲೆ ಪ್ರಜಾಪ್ರಭುತ್ವ ನಿಂತಿದೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದರು.

Key words: Basavanna, created, equal society, Minister, H.C. Mahadevappa

The post ಸಾಮಾಜಿಕ ಚಳವಳಿ ಮೂಲಕ ಸಮಸಮಾಜ ನಿರ್ಮಾಣ ಮಾಡಿದವರು ಬಸವಣ್ಣ- ಸಚಿವ ಹೆಚ್.ಸಿ ಮಹದೇವಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: ಸರ್ಕಾರಕ್ಕೆ ಕುಟುಕಿದ JDS

ಬೆಂಗಳೂರು, ಜೂನ್​​, 12,2026 (www.justkannada.in): ಗೃಹಲಕ್ಷ್ಮಿ ಯೋಜನೆಯಲ್ಲಿ ಆಗುತ್ತಿರುವ ದುರ್ಬಳಕೆ ತಡೆಯಲು...

ಪ್ರಧಾನಿಯಾಗಿ ಮೋದಿ 12 ವರ್ಷ: ಮೈಸೂರಿನಲ್ಲಿ ಅಭಿನಂದನಾ ಜಾಥಾ, ವಿಶೇಷ ಅರ್ಚನೆ

ಮೈಸೂರು,ಜೂನ್,10,2026 (www.justkannada.in): ಪ್ರಧಾನಿಯಾಗಿ ನರೇಂದ್ರ ಮೋದಿ  12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ...

ಡಿಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಅಸಮಾಧಾನ ಇಲ್ಲ-ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಜೂನ್,10,2026 (www.justkannada.in):  ಡಿಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಅಸಮಾಧಾನವಿಲ್ಲ ಎಂದು ಬೃಹತ್...

ಮೋದಿ ಸಾಧನೆ ಬಗ್ಗೆ ಬಿಜೆಪಿ ಸಂಭ್ರಮ ಪ್ರಜಾಪ್ರಭುತ್ವ ವಿರುದ್ಧದ ಅತಿದೊಡ್ಡ ಅಣಕ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜೂನ್,10,2026 (www.justkannada.in): ಭಾರತದ ಪ್ರಜಾಪ್ರಭುತ್ವವನ್ನು ಹಾಳುಗೆಡವುವ ಮೂಲಕ ದೀರ್ಘಾವಧಿ ಪ್ರಧಾನಿಯಾಗಿ ಮುಂದುವರಿದಿರುವ...