ಮಂಡ್ಯ,ಏಪ್ರಿಲ್,24,2025 (www.justkannada.in): ಸಹೋದರನ ಸಾವಿನ ಸುದ್ದಿ ತಿಳಿದ ಸಹೋದರಿಯೂ ಹೃದಯಘಾತಕ್ಕೊಳಗಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬಿ.ಜಿ.ಪುರ ಹೋಬಳಿಯ ಕೊಡಗಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಡಗಹಳ್ಳಿ ಗ್ರಾಮದ ವೆಂಕಟೇಶ್ (52) ಎಂಬುವವರು ಹೃದಯಾಘಾತದಿಂದ ನಿಧನ ಹೊಂದಿದ್ದು ಅವರ ನಿಧನದ ದುಃಖದಲ್ಲಿದ್ದ ಸಹೋದರಿ ಶಿವಮ್ಮ(72ವರ್ಷ) ತಮ್ಮನ ಪಾರ್ಥೀವ ಶರೀರದ ಮುಂದೆಯೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.
ಮೃತ ವೆಂಕಟೇಶ್ ಅವರಿಗೆ ಪತ್ನಿ ಪ್ರಮೀಳಾ, ಪುತ್ರ ಅಭಿಷೇಕ್ ಇದ್ದು ಮೃತರಾದ ಶಿವಮ್ಮ ಅವರಿಗೆ ಲಕ್ಷ್ಮಿ, ಸರಸ್ವತಿ ಎಂಬ ಇಬ್ಬರು ವಿವಾಹಿತ ಪುತ್ರಿಯರಿದ್ದು ಸರ್ಕಾರಿ ಶಾಲಾ ಶಿಕ್ಷಕಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೆಂಕಟೇಶ್ ರವರ ಅಂತ್ಯಕ್ರಿಯೆ ಕೊಡಗಳ್ಳಿಯಲ್ಲಿ ಇಂದು ಜರುಗಲಿದ್ದು ಸಹೋದರಿ ಶಿವಮ್ಮ ಅವರ ಅಂತ್ಯಕ್ರಿಯೆ ಕೊಳ್ಳೇಗಾಲದಲ್ಲಿ ನಾಳೆ ಬೆಳಿಗ್ಗೆ 10.30ಗಂಟೆಗೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತ ವೆಂಕಟೇಶ್ ಕೊಳ್ಳೇಗಾಲ ನಗರಸಭೆ ತೋಟಗಾರಿಕೆ ಹೊರಗುತ್ತಿಗೆ ನೌಕರರಾಗಿದ್ದರು , ಮೃತ ಶಿವಮ್ಮ ನಿವೃತ್ತ ರೇಷ್ಮೆ ಇಲಾಖೆ ನೌಕರರು.
Key words: sister, brother, death, Mandya
The post ಸಾವಿನಲ್ಲೂ ಒಂದಾದ ಅಕ್ಕ, ತಮ್ಮ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.