ಮೈಸೂರು,ಜೂನ್,11,2025 (www.justkannada.in): ಸಿಎಂ ಕುರ್ಚಿಗೆ ಯಾವುದೇ ಗಂಡಾಂತರ ಇಲ್ಲ. 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ಎಂ.ಎಲ್.ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ ಸಿಎಂ ಆಗಿ 5 ವರ್ಷಗಳ ಕಾಲ ಅವರೇ ಮುಂದುವರಿಯುತ್ತಾರೆ. ಹೈಕಮಾಂಡ್ ಯಾವುದೇ ಗಡುವು ನೀಡಿಲ್ಲ. ಇದರ ಬಗ್ಗೆ ಯಾವುದೇ ಚರ್ಚೆಯೂ ಆಗಿಲ್ಲ ಎಂದರು.
ಡಾ.ಯತೀಂದ್ರ ಸಿದ್ದರಾಮಯ್ಯರಿಗೆ ಡಿಮ್ಯಾಂಡ್: ಅಹವಾಲು ಪತ್ರ ಕೊಡಲು ಮುಗಿಬಿದ್ದ ಜನರು
ಮೈಸೂರಿನಲ್ಲಿ ಎಂಎಲ್ ಸಿ ಡಾ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಡಿಮ್ಯಾಂಡ್ ಹೆಚ್ಚಿದ್ದು, ಜಿಲ್ಲಾ ಪಂಚಾಯತಿ ಕಚೇರಿಗೆ ಆಗಮಿಸುತ್ತಿದಂತೆ ಅವರ ಸುತ್ತ ಸಾರ್ವಜನಿಕರು ಅಹವಾಲು ಸಲ್ಲಿಸಲು ಸುತ್ತುವರೆದರು.
ಅಭಿವೃದ್ದಿ ಪರಿಶೀಲನಾ ಸಭೆಗಾಗಿ ಡಾ ಯತೀಂದ್ರ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪಂಚಾಯತ್ ಗೆ ಆಗಮಿಸಿದರು. ಈ ವೇಳೆ ಜನರು ಯತೀಂದ್ರ ಸಿದ್ದರಾಮಯ್ಯರಿಗೆ ಅಹವಾಲು ನೀಡಲು ಮುಗಿಬಿದ್ದರು. ಸಾವಧಾನವಾಗಿಯೇ ಎಲ್ಲರ ಅರ್ಜಿ ಸ್ವೀಕರಿಸಿದ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು.
Key words: no danger, CM’s chair, MLC, Yathindra Siddaramaiah
The post ಸಿಎಂ ಕುರ್ಚಿಗೆ ಯಾವುದೇ ಗಂಡಾಂತರ ಇಲ್ಲ: 5 ವರ್ಷ ಅವರೇ ಸಿಎಂ – MLC ಯತೀಂದ್ರ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.