ಹುಬ್ಬಳ್ಳಿ,ಜುಲೈ,11,2026 (www.justkannada.in): ಸಿಎಂ ಡಿಕೆ ಶಿವಕುಮಾರ್ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದ ವಿಚಾರ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್, ನಾವು ಸಾಖಷ್ಟು ನಿರೀಕ್ಷೆ ಇಟ್ಟುಕೊಂಡು ಸಭೆಗೆ ಹೋಗಿದ್ದವು ನಯಾಪೈಸೆ ಭರವಸೆ ಹುಟ್ಟುವ ಯಾವುದೇ ಕೆಲಸ ಆಗಲಿಲ್ಲ ಎಂದರು.
ಬೆಂಗಳೂರು ಅಭಿವೃದ್ದಿಗೆ 1.14 ಲಕ್ಷ ಕೋಟಿ ರೂ. ನೀಡುತ್ತಾರೆ. ಉತ್ತರ ಕರ್ನಾಟಕಕ್ಕೆ 14 ಸಾವಿರ ಕೋಟಿ ರೂ ಸಹ ನೀಡಿಲ್ಲ. ಸಿಎಂ ಡಿಕೆ ಶಿವಕುಮಾರ್ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಬರಗಾಲದ ಬಗ್ಗೆ ಸರ್ಕಾರದಿಂದ ಯಾವುದೇ ತಯಾರಿ ಆಗಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ್ ಕಿಡಿಕಾರಿದರು.
Key words: CM, DK Shivakumar, injustice, North Karnataka, MLA, Arvind Bellad
The post ಸಿಎಂ ಡಿಕೆಶಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ- ಶಾಸಕ ಅರವಿಂದ ಬೆಲ್ಲದ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




