ಬೆಂಗಳೂರು,ಫೆಬ್ರವರಿ,22,2025 (www.justkannada.in): ಸಿಎಂ ಸಿದ್ದರಾಮಯ್ಯ ಮುಡಾ ಕೇಸ್ ನ ಚಿಂತೆಯಲ್ಲಿದ್ದಾರೆ. ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗೋದನ್ನ ತಪ್ಪಿಸಲು ಆಗಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಸ್ ನಿರ್ವಾಹಕನ ಮೇಲೆ ಪುಂಡಾಟಿಕೆ ನಡೆದಿದೆ. ಕೋರಮಂಗಲದಲ್ಲಿ ಸಾಮೂಹಿಕ ಅತ್ಯಾಚಾರವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಎಸ್ ಸಿಪಿ ಟಿಎಸ್ ಪಿ ಹಣವನ್ನ ಲೂಟಿ ಮಾಡಿದ್ದಾರೆ. ದಲಿತರ ಹಣ ಲೂಟಿ ಮಾಡಿ ಸರ್ವರಿಗೂ ಗ್ಯಾರಂಟಿ ಕೊಡುತ್ತಿದ್ದಾರೆ. ದಲಿತರಿಗೆ ಮೋಸ ಮಾಡಿದ್ರೆ ಕೋರ್ಟ್ ಹೋಗುತ್ತೇವೆ. ರಾಜ್ಯಾದ್ಯಂತ 14 ತಂಡ ಕೆಲಸ ಮಾಡುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
Key words: muda case, CM Siddaramaiah, jail , Chalavadi Narayanaswamy
The post ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗೋದನ್ನ ತಪ್ಪಿಸಲು ಆಗಲ್ಲ- ಛಲವಾದಿ ನಾರಾಯಣಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.