ಮೈಸೂರು,ಮಾರ್ಚ್,15,2025 (www.justkannada.in): ಸಿಎಂ ಬದಲಾವಣೆ ವಿಚಾರಕ್ಕೆ ಸದ್ಯಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ಈ ಮಧ್ಯೆ ಇದೀಗ ನನಗೆ ಸಿಎಂ ಹುದ್ದೆ ಕೊಟ್ಟರೆ ನಿರ್ವಹಿಸುವೆ ಎಂದು ಹೇಳುವ ಮೂಲಕ ಶಾಸಕ ತನ್ವೀರ್ ಸೇಠ್ ಸಿಎಂ ಹುದ್ದೆ ರೇಸ್ ನಲ್ಲಿ ನಾನು ಇದ್ದೀನಿ ಎಂದು ಸುಳಿವು ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಶಾಸಕ ತನ್ವೀರ್ ಸೇಠ್, ಸಿಎಂ ಹುದ್ದೆ ಆಸೆ ಯಾರಿಗೆ ಇರುವುದಿಲ್ಲ ಹೇಳಿ ನನಗೂ ಕೂಡ ಸಿಎಂ ಹುದ್ದೆ ಮೇಲೆ ಆಸೆ ಇದೆ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಸಂಬಂಧ ಬದಲಾವಣೆ ಮಾಡೋವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಆ ಸ್ಥಾನದಲ್ಲಿ ಇರುವವರೆಗೆ ಅವರಿಗೆ ಗೌರವ ನೀಡಬೇಕು. ಬದಲಾವಣೆ ಆಗತ್ತೆ, ಆಗಲ್ಲ ಆ ಚರ್ಚೆ ಬಗ್ಗೆ ಏನು ಹೇಳಲ್ಲ. ನಮ್ಮ ವರಿಷ್ಠರು ಅಂತಿಮ ತೀರ್ಮಾನ ಮಾಡುತ್ತಾರೆ. ಅವಕಾಶ ಯಾವಾಗ, ಯಾರು ಕೊಡ್ತಾರೆ ಆವಾಗ ನಿರ್ವಹಣೆ ಮಾಡುತ್ತೇನೆ. ಸಿಎಂ ಅನ್ನೋದು ಕೇವಲ ಒಂದು ಹುದ್ದೆ ಅಲ್ಲ. ರಾಜ್ಯಕ್ಕೆ ದಿಕ್ಕು ದೆಸೆ ತೋರಿಸುವ ಹುದ್ದೆ . ಹೀಗಾಗಿ ಸದ್ಯಕ್ಕೆ ಆ ಬಗ್ಗೆ ಚರ್ಚೆ ಮಾಡಲ್ಲ ಎಂದರು.
ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್ , ನನಗೆ ಸಚಿವ ಸ್ಥಾನದ ಬಗ್ಗೆ ಸಾಕಷ್ಟು ಆಸೆ ಇದೆ. ಆದರೆ ಯಾವುದು ಕೂಡ ಖಾಲಿ ಇಲ್ಲ. ನನಗೆ ಸಚಿವ ಸ್ಥಾನ ನೀಡಿದರೆ ಯಶಸ್ವಿಯಾಗಿ ನಿಭಾಯಿಸುವೆ ಎಂದರು.
ಡಿಕೆ ಶಿವಕುಮಾರ್ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ
ಡಿಕೆ ಶಿವಕುಮಾರ್ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ. ಯಾರಿಗೆ ಯಾವುದು ಶಾಶ್ವತವಲ್ಲ. ಯಾರಿಗೆ ಯಾವ ಹುದ್ದೆಯೂ ಶಾಶ್ವತವಲ್ಲ. ಡಿಕೆಶಿ ಅವರು ಕಾಂಗ್ರೆಸ್ ಪಕ್ಷವನ್ನ ಸಂಕಷ್ಟದ ಸಮಯದಲ್ಲಿ ಮುನ್ನಡೆಸಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಾರು ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯವಿದೆ. ಅವರು ರಾಜ್ಯದ ಅಧ್ಯಕ್ಷರಾಗಿರುತ್ತಾರೆ. ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ನಾನಿಲ್ಲ. ಕಾರ್ಯಕರ್ತರ ರೀತಿ ಕೆಲಸ ಮಾಡುತ್ತೀನಿ ಎಂದು ತನ್ವೀರ್ ಸೇಟ್ ತಿಳಿಸಿದರು.
1% ಅಷ್ಟೇ ಬಜೆಟ್ ನಲ್ಲಿ ಮುಸ್ಲಿಂ ಗೆ ಕೊಟ್ಟಿದ್ದಾರೆ
ಹಲಾಲ್ ಬಜೆಟ್ ಎಂಬ ಬಿಜೆಪಿ ಟೀಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ತನ್ವೀರ್ ಸೇಠ್, 1% ಅಷ್ಟೇ ಬಜೆಟ್ ನಲ್ಲಿ ಮುಸ್ಲಿಂ ಗೆ ಕೊಟ್ಟಿದ್ದಾರೆ. ಇದನ್ನು ಹಲಾಲ್ ಬಜೆಟ್ ಅಂದ್ರೆ ಏನು? ದೇವರನ್ನ ನಂಬಿಸುವ ಕಾರ್ಯ. ಬಿಜೆಪಿ ಅವರು ಆ ರೀತಿ ಹೇಳಿದರೇ ಇನ್ಮುಂದೆ ಹಲಾಲ್ ಬಜೆಟ್ ಇರಲಿ ಅಂತ ನಾನು ಹೇಳುತ್ತೇನೆ ಎಂದರು.
ಪ್ರತಾಪ್ ಸಿಂಹ ನನ್ನ ಸ್ನೇಹಿತ , ನನ್ನ ಅವನ ನಡುವೆ ನನಗೆ ಒಳ್ಳೆ ಸ್ನೇಹವಿದೆ. ಆದರೆ ಆತನ ಮಾತು , ನಾಲಿಗೆ ಸ್ವಲ್ಪ ಸರಿಯಿಲ್ಲ. ಅವನ ಮಾತಿನಿಂದ ಹಲವರಿಗೆ ನೋವಾಗಿದೆ. ಸಭ್ಯತೆ ಮೀರಿ ಆತ ನಡೆದುಕೊಳ್ಳಬಾರದು. ಅದು ಕಂಟ್ರೋಲ್ ಮಾಡಿಕೊಳ್ಳಬೇಕು. ಹಜ್ ಗೆ ನಾವು ದೇವಸ್ಥಾನದ ದುಡ್ಡು ಬಳಸಿಲ್ಲ ಬೇಕಾದ್ರೆ ಆರ್. ಟಿ. ಐ ಅರ್ಜಿ ಹಾಕಿ ಮಾಹಿತಿ ತೆಗೆದುಕೊಳ್ಳಬಹುದು ಎಂದು ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ಟಾಂಗ್ ಕೊಟ್ಟರು.
ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ವಿಚಾರ, ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ತನಿಖೆ ತಂಡ ಸತ್ಯವನ್ನು ಜನರ ಮುಂದೆ ಇಡುವ ಕೆಲಸ ಮಾಡಬೇಕು. ನಾನು ಇಂತಹ ವಿಚಾರಕ್ಕೆ ತಲೆ ಹಾಕಲ್ಲ. ಮೈಸೂರಿನಲ್ಲಿ 2014 ರಲ್ಲಿ ನಡೆದಿರುವ ಪ್ರಕರಣ ಕೂಡ ನನ್ನ ತಲೆಯಲ್ಲಿ ಇಲ್ಲ ಎಂದು ತನ್ವೀರ್ ಸೇಠ್ ತಿಳಿಸಿದರು.
Key words: MLA, Tanveer Sait, hints, race, CM post
The post ಸಿಎಂ ಹುದ್ದೆ ರೇಸ್ ನಲ್ಲಿ ನಾನು ಇದ್ದೀನಿ ಎಂದು ಸುಳಿವು ಕೊಟ್ಟ ಶಾಸಕ ತನ್ವೀರ್ ಸೇಠ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.