ಬಾಗಲಕೋಟೆ,ಏಪ್ರಿಲ್,28,2026 (www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಯಾಗುತ್ತಿದ್ದು ಇದೀಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಮಹತ್ವದ ಹೇಳಿಕೆಯೊಂದನ್ನ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಸಿದ್ದರಾಮಯ್ಯ ಇನ್ನು 15 ದಿನ ಮಾತ್ರ ಸರದಾರ. 15 ದಿನದ ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಇರುವುದಿಲ್ಲ. ಮೇ 4 ರಂದು 5 ರಾಜ್ಯಗಳ ಚುನಾವಣಾ ಫಲಿತಾಂಶ ಬರುತ್ತದೆ. ಆಗ ಉಪಚುನಾವಣೆ ಫಲಿತಾಂಶವೂ ಬರುತ್ತದೆ. ಇದೇ ವೇಳೇ ಸಿದ್ದರಾಮಯ್ಯನವರ ಖುರ್ಚಿ ಫಲಿತಾಂಶವೂ ಪ್ರಕಟವಾಗುತ್ತದೆ ಎಂದು ಲೇವಡಿ ಮಾಡಿದರು.
ಸಿಎಂ ಆಗಲು ಡಿಕೆ ಶಿವಕುಮಾರ್ ತಯಾರಾಗಿ ಕೂತಿದ್ದಾರೆ. ಇತ್ತ ಸಿದ್ದರಾಮಯ್ಯ ಹಿಂಬಾಲಕರು ಹೈಕಮಾಂಡ್ ಬಳಿ ಲಾಬಿ ನಡೆಸುತ್ತಿದ್ದಾರೆ. 40 ಶಾಸಕರು ಹೈಕಮಾಂಡ್ ಬಳಿ ಲಾಬಿ ನಡೆಸುತ್ತಿದ್ದಾರೆ. ರಾಜ್ಯಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
Key words: Siddaramaiah, CM, only, 15 days, MP Govinda Karajola
The post ಸಿದ್ದರಾಮಯ್ಯ ಇನ್ನು 15 ದಿನ ಮಾತ್ರ ಸರದಾರ- ಸಂಸದ ಗೋವಿಂದ ಕಾರಜೋಳ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




