ಬೆಂಗಳೂರು,ಜೂನ್,18,2025 (www.justkannada.in): ಕರ್ನಾಟಕದಲ್ಲಿ ನಟ ಕಮಲ್ ಹಾಸನ್ ಚಿತ್ರ ಥಗ್ ಲೈಫ್ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಸೂಚನೆ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕರವೇ ನಾರಾಯಣಗೌಡ, ಕಮಲ್ ಹಾಸನ್ ಸಿನಿಮಾ ರಿಲೀಸ್ ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪು ಗೌರವಿಸುತ್ತೇವೆ. ಆದರೆ ಕಮಲ್ ಹಾಸನ್ ಭಾಷೆಯ ಇತಿಹಾಸ ತಿರುಚಿದ್ದಾರೆ. ಕನ್ನಡಿಗರ ಭಾವನೆ ಕೆರಳಿಸಿದ್ದಾರೆ. ಹೀಗಾಗಿ ಕಮಲ್ ಹಾಸನ್ ಚಿತ್ರದ ವಿರುದ್ದ ಹೋರಾಟ ಮುಂದುವರೆಸುತ್ತೇವೆ ಎಂದರು.
ನಮಗೆ ನೋಟಿಸ್ ಕೊಡುವುದು ಹೊಸದೇನಲ್ಲ. ನಮ್ಮ ಭಾವನೆ ವ್ಯಕ್ತಪಡಿಸುವ ಹಕ್ಕು ನಮಗಿದೆ. ಕಮಲ್ ಹಾಸನ್ ಈ ನೆಲಕ್ಕೆ ಬರಬಾರದು ಎಂದು ನಾರಾಯಣಗೌಡ ಹೇಳಿದರು.
Key words: Kamal Hassan, Supreme Court, verdict, Karave, Narayana Gowda
The post ಸುಪ್ರೀಂ ತೀರ್ಪು ಗೌರವಿಸುತ್ತೇವೆ: ಕಮಲ್ ಚಿತ್ರದ ವಿರುದ್ದ ಹೋರಾಟ ಮುಂದುವರಿಕೆ- ಕರವೇ ನಾರಾಯಣಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.