14
July, 2025

A News 365Times Venture

14
Monday
July, 2025

A News 365Times Venture

ಸೇಲಂ ಉಕ್ಕು ಸ್ಥಾವರದಲ್ಲಿ ಕೇಂದ್ರ ಸಚಿವ ಹೆಚ್ ಡಿಕೆ ಯೋಗಾಭ್ಯಾಸ

Date:

ಸೇಲಂ,ಜೂನ್,21,2025 (www.justkannada.in): ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸೇಲಂ ಉಕ್ಕು ಸ್ಥಾವರದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ.ಪಾಲ್ಗೊಂಡರು.

ಕಾರ್ಖಾನೆಯ ಸಿಬ್ಬಂದಿ, ಅವರ ಕುಟುಂಬ ಸದಸ್ಯರು, ಹಿರಿಯ ಅಧಿಕಾರಿಗಳು, ಭಾರತೀಯ ಉಕ್ಕು ಪ್ರಾಧಿಕಾರ ಹಾಗೂ ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳ ಜೊತೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಯೋಗಾಭ್ಯಾಸ ನಡೆಸಿದರು.

ಸೇಲಂ ಟೌನ್‌ ಶಿಪ್‌ನಲ್ಲಿರುವ ಹಿಲ್ ವ್ಯೂ ಕ್ರೀಡಾಂಗಣದಲ್ಲಿ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಸಚಿವರು ಕೆಲ ಪ್ರಮುಖ, ಸರಳ ಆಸನಗಳನ್ನು ಹಾಗೂ ಪ್ರಾಣಾಯಾಮವನ್ನು ಹಾಗೂ ಪ್ರಾಣಾಯಾಮವನ್ನೂಅಭ್ಯಾಸ ಮಾಡಿದರು.

ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ HDK

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಯೋಗ ಎನ್ನುವುದು ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದ ಬೆಳೆದುಬಂದ ಜೀವನಶೈಲಿಯಾಗಿದೆ. ಭಾರತಕ್ಕಷ್ಟೇ ಸೀಮಿತವಾಗಿದ್ದ ಯೋಗವನ್ನು ಹನ್ನೊಂದು ವರ್ಷಗಳ ಹಿಂದೆ ಪ್ರಧಾನಿಗಳಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಅವರು ಇಡೀ ಜಗತ್ತಿನ ವೇದಿಕೆಗೆ ತೆಗೆದುಕೊಂಡು ಹೋದರು. ಅದರ ಪರಿಣಾಮವಾಗಿ ಜಗತ್ತಿನ ಎಲ್ಲೆಡೆ ಜೂನ್‌ 21ನೇ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಆಚರಿಸಲಾಗುತ್ತಿದೆ. ಇದರ ಸಂಪೂರ್ಣ ಹೆಗ್ಗಳಿಕೆ ಮೋದಿ ಅವರಿಗೆ ಸಲ್ಲಬೇಕು ಎಂದರು.

ಸೇಲಂ ಉಕ್ಕು ಸ್ಥಾವರದ ಸಿಬ್ಬಂದಿ, ಅಧಿಕಾರಿಗಳು, ಅವರ ಕುಟುಂಬ ಸದಸ್ಯರ ಜತೆ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಸಿಕ್ಕಿದೆ. ಇದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ರಾಷ್ಟ್ರದ ಬೆನ್ನೆಲುಬಾಗಿರುವ ಉಕ್ಕು ಕ್ಷೇತ್ರದ ಕುಟುಂಬದೊಂದಿಗೆ ಯೋಗದ ಅನನ್ಯತೆ, ಅವಿಸ್ಮರಣೆಯ ಕ್ಷಣಗಳನ್ನು ಅನುಭವಿಸುವ ಭಾಗ್ಯ ನನ್ನದಾಯಿತು ಎಂದು  ಕೇಂದ್ರ ಸಚಿವ ಹೆಚ್ ಡಿಕೆ ಹೇಳಿದರು.

ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ. ಇದು ಮಾನಸಿಕ ಶಾಂತಿ, ಮಾನಸಿಕ ಸ್ಪಷ್ಟತೆ, ದೈಹಿಕ ಸ್ವಾಸ್ತ್ಯತೆ ಮತ್ತು ಸಾಮೂಹಿಕ ಯೋಗಕ್ಷೇಮಕ್ಕೆ ಪರಿಣಾಮಕಾರಿ ಮಾರ್ಗವಾಗಿದೆ. ಪ್ರಧಾನಿಗಳಾದ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಯೋಗವು ಜಗತ್ತನ್ನೇ ಒಗ್ಗೂಡಿಸಿದೆ. ಜಗತ್ತಿನ ಯೋಗಕ್ಷೇಮಕ್ಕೆ ನಮ್ಮ ಪಾರಂಪರಿಕ ಯೋಗವು ಮಹೋನ್ನತ ಕೊಡುಗೆ ನೀಡುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಭಾರತೀಯ ಉಕ್ಕು ಪ್ರಾಧಿಕಾರದ (ಸೈಲ್‌) ಅಧ್ಯಕ್ಷ ಅಮರೇಂದು ಪ್ರಕಾಶ್‌, ಉಕ್ಕು ಸಚಿವ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಭಿಜಿತ್‌ ನರೇಂದ್ರ ಸೇರಿದಂತೆ ಸೇಲಂ ಉಕ್ಕು ಸ್ಥಾವರದ ಹಿರಿಯ ಅಧಿಕಾರಿಗಳು ಕೂಡ ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ದರು.vtu

Key words: Union Minister, HDK, yoga, Salem,  Steel Plant

The post ಸೇಲಂ ಉಕ್ಕು ಸ್ಥಾವರದಲ್ಲಿ ಕೇಂದ್ರ ಸಚಿವ ಹೆಚ್ ಡಿಕೆ ಯೋಗಾಭ್ಯಾಸ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಅಂಧ ಪ್ರಯಾಣಿಕರಿಗಾಗಿ ಬಸ್ ಗಳಿಗೆ  ಧ್ವನಿ ಸ್ಪಂದನ ಡಿವೈಸ್: ನೂತನ ಯೋಜನೆಗೆ ಚಾಲನೆ

ಮೈಸೂರು,ಜುಲೈ,14,2025 (www.justkannada.in): ಅಂಧ ಪ್ರಯಾಣಿಕರ ಸರಳ ಪ್ರಯಾಣಕ್ಕಾಗಿ ರಾಜ್ಯ ಸಾರಿಗೆ ಇಲಾಖೆ...

ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರೇ ಸಹಾಯಧನಕ್ಕೆ ಅರ್ಜಿ ಸಲ್ಲಿಸಿ..

ಬೆಂಗಳೂರು.ಗ್ರಾಮಾಂತರ,ಜುಲೈ,14,2025 (www.justkannada.in): ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ 2025-26 ನೇ...

ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ ‘ಚೌಡೇಶ್ವರಿ ದೇವಿ’ ಹೆಸರು ನಾಮಕರಣ- ಕೇಂದ್ರ ಸಚಿವ ನಿತಿನ್​ ಗಡ್ಕರಿ

ಶಿವಮೊಗ್ಗ, ಜುಲೈ,14,2025 (www.justkannada.in): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ...

ಹಿರಿಯ ಪತ್ರಕರ್ತ ದಿ. ಕೆ.ಬಿ.ಗಣಪತಿ ಅವರಿಗೆ ಶ್ರದ್ಧಾಂಜಲಿ

ಮೈಸೂರು,ಜುಲೈ,14,2025 (www.justkannada.in): ನಿನ್ನೆ ನಿಧನರಾದ  ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್...