ಮೈಸೂರು,ಜೂನ್,20,2025 (www.justkannada.in): ಮೈಸೂರಿನ ಜೆಕೆ ಟೈರ್ಸ್ ಅಂಡ್ ಇಂಡಸ್ಟ್ರೀಸ್ ನ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಸ್ವಯಂ ಪ್ರೇರಿತವಾಗಿ -ರಕ್ತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಜೆಕೆ ಟೈರ್ಸ್ ಅಂಡ್ ಇಂಡಸ್ಟ್ರೀಸ್, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಸಂಸ್ಥೆ ಹಾಗೂ ಕೆ.ಆರ್.ಆಸ್ಪತ್ರೆಯ ರಕ್ತನಿಧಿ ಕೇಂದ್ರ ಹಾಗೂ ಲಯನ್ಸ್ ಕ್ಲಬ್ ಆಸರೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಜೆಕೆ ಟೈರ್ಸ್ ಉಪಾಧ್ಯಕ್ಷರು ವರ್ಕ್ಸ್ ಹಾಗೂ ಸಿಐಐ ಮೈಸೂರು ಚಾಪ್ಟರ್ ಮಾಜಿ ಅಧ್ಯಕ್ಷ ವಿ. ಈಶ್ವರ್ ರಾವ್ ಅವರ ಮಾರ್ಗದರ್ಶನದಲ್ಲಿ ಸುಮಾರು 1300 ಮಂದಿ ಉದ್ಯೋಗಿಗಳು ರಕ್ತದಾನ ಮಾಡಿದರು.
ಜೆಕೆ ಸಮೂಹ ಸಂಸ್ಥೆ ಅಧ್ಯಕ್ಷರಾಗಿದ್ದ ದಿ.ಹರಿಶಂಕರ್ ಸಿಂಘಾನಿಯಾ ಅವರ ಜನ್ಮದಿನಾಚರಣೆ ಅಂಗವಾಗಿ ಕಳೆದ 11 ವರ್ಷಗಳಿಂದಲೂ ರಕ್ತದಾನ -ಶಿಬಿರವನ್ನು ಆಯೋಜಿಸಲಾಗುತ್ತಿದೆ. ಇಂದು ಸಹ ಮೇಟಗಳ್ಳಿಯಲ್ಲಿರುವ ಸಂಸ್ಥೆಯ ಎರಡು ಘಟಕ, ಹೆಬ್ಬಾಳ್ ಕೈಗಾರಿಕೆ ಪ್ರದೇಶ, ಜೆಕೆ ಅತಿಥಿ ಗೃಹ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಸಿಐಐ ಮೈಸೂರು ಜೋನ್ ಮಾಜಿ ಅಧ್ಯಕ್ಷ ಸ್ಯಾಮ್ ಚೇರಿಯನ್ ಹಾಗೂ ಜೆಕೆ ಟೈರ್ ಕಂಪೆನಿ ನಿರ್ದೇಶಕ ಸಲ್ವಾಯ್ನ್ ಗೇಬ್ರಿಯಲ್ ಡೆನಿಸ್ ಸಂಗೋತ್ ಉದ್ಘಾಟಿಸಿದರು.
ಈ ವೇಳೆ ಜೆಕೆ ಟೈರ್ಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಆರ್.ಜಗದೀಶ್, ಜೀವಧಾರ ರಕ್ತನಿಧಿ ಕೇಂದ್ರದ ಮುತ್ತಣ್ಣ, ಲಯನ್ ಮನೋಜ್ ಕುಮಾರ್, ಕೆ.ಆರ್.ಆಸ್ಪತ್ರೆ ರಕ್ತನಿಧಿ ಕೇಂದ್ರದ ಅಧಿಕಾರಿ ಕುಸುಮ, ಜೆಕೆ ಟೈರ್ ಕಂಪನಿಯ ಅಧಿಕಾರಿಗಳಾದ ರಾಜೀವ್ ಕುಮಾರ್, ಡೊನಾಲ್ಡ್, ಸುಬ್ರಮಣ್ಯ, ನವೀನ್, ರಾಮ್ ಪ್ರಸಾದ್, ರವೀಂದ್ರ, ನಾಗರಾಜ್, ಶ್ರೀನಾಥ್ ಹಾಗೂ ಕಾರ್ಮಿಕರ ಯೂನಿಯನ್ ಸಂಘದ ಪದಾಧಿಕಾರಿಗಳಾದ ಚನ್ನಕೇಶವ, ದಾದಾಪೀರ್, ಅಶೋಕ್, ಶಿವಕುಮಾರ್ , ಕಾಂತರಾಜು, ರವಿಕುಮಾರ್ ಹಾಗೂ ಇತರೆ ಸಿಬ್ಬಂದಿಗಳು, ಅಧಿಕಾರಿಗಳು ಆಸರೆ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
Key words: Blood, Donate, Mysore ,JK Tires, Employees
The post ಸ್ವಯಂ ಪ್ರೇರಿತ ರಕ್ತದಾನ ಮಾಡಿ ಮಾದರಿಯಾದ ಮೈಸೂರು ‘JK ಟೈರ್ಸ್’ ಉದ್ಯೋಗಿಗಳು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.