ಚಾಮರಾಜನಗರ,ಜೂನ್,20,2025 (www.justkannada.in): ಕುರಿ ಮೇಯಿಸುತ್ತಿದ್ದ ವೇಳೆ ಹುಲಿ ದಾಳಿಗೆ ಮಹಿಳೆ ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಬಂಡಿಪುರ ಹುಲಿ ಸಂರಕ್ಷಣಾ ಪ್ರದೇಶದ ಕಾಡಂಚಿನ ಗ್ರಾಮ ದೇಶಿಪುರ ಕಾಲೋನಿಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಓಂಕಾರ ವಲಯದ ದೇಶೀಪುರ ಕಾಲೋನಿ ನಿವಾಸಿ ಪುಟ್ಟಮ್ಮ(40) ಮೃತ ಮಹಿಳೆ. ನಿನ್ನೆ ಸಂಜೆ ವೇಳೆ ಗ್ರಾಮದ ಹೊರ ವಲಯದಲ್ಲಿ ಕುರಿ ಮೇಯಿಸುತ್ತಿದ್ದಾಗ ಮಹಿಳೆ ಮೇಲೆ ಹುಲಿ ದಾಳಿ ನಡೆಸಿದ್ದು, ಕುತ್ತಿಗೆ ಹಿಡಿದು ಅರಣ್ಯದೊಳಗೆ ಎಳೆದೊಯ್ದಿದೆ.
ಈ ಮಧ್ಯೆ ಕುರಿಗಳು ಮನೆಗೆ ಬಂದು ಕುರಿಗಾಹಿ ಪುಟ್ಟಮ್ಮ ಬಾರದೆ ಇದ್ದ ಕಾರಣ ಕುಟುಂಬಸ್ಥರು ಹುಡುಕಾಡಿದ್ದು, ಗ್ರಾಮದ ಹೊರ ಭಾಗದ ಕಾಡಿನೊಳಗೆ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ತಿಳಿಸಿದ್ದು, ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ ಎಸಿಎಫ್ ಸುರೇಶ್,ಆರ್ ಎಫ್ ಓ ಸತೀಶ್ ಸಿಬ್ಬಂದಿ ವರ್ಗ ಪರಿಶೀಲನೆ ನಡೆಸಿದರು.
ಸುದ್ದಿ ತಿಳಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂಧ್ಯಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಹುಲಿ ದಾಳಿಯಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸೂಕ್ತ ಪರಿಹಾರಕ್ಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Key word: Woman, death, tiger, attack.
The post ಹುಲಿ ದಾಳಿಗೆ ಕುರಿಗಾಹಿ ಮಹಿಳೆ ಬಲಿ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.