14
July, 2025

A News 365Times Venture

14
Monday
July, 2025

A News 365Times Venture

ಹೆಂಡತಿ ಬಿಟ್ಟು ಬಾಡಿಗೆ ಮನೆ ಮಾಲೀಕನ ಪತ್ನಿ ಮದುವೆಯಾಗಿದ್ದ ವ್ಯಕ್ತಿಯ ಕಿಡ್ನಾಪ್, ಹತ್ಯೆ

Date:

ಬೆಂಗಳೂರು,ಏಪ್ರಿಲ್,28,2025 (www.justkannada.in): ತನ್ನ ಹೆಂಡತಿಯನ್ನ ಬಿಟ್ಟು ಬಾಡಿಗೆ ಮನೆಯ ಮಾಲೀಕನ ಪತ್ನಿಯನ್ನ ಮದುವೆಯಾಗಿದ್ದ ವ್ಯಕ್ತಿಯನ್ನ ನಾಲ್ಕೈದು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಕೊಲೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸೋಲೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದಿಲೀಪ್ ಹತ್ಯೆಯಾದ ವ್ಯಕ್ತಿ. ದಿಲೀಪ್  ಬೆಂಗಳೂರಿನ ದಾಬಸ್ ಪೇಟೆಯಲ್ಲಿ ಕಾರ್ಗೋ ನಡೆಸುತ್ತಿದ್ದನು. ಈ ಮಧ್ಯೆ ದಿಲೀಪ್  ಹೆಂಡತಿಯನ್ನ ಬಿಟ್ಟು ಬಾಡಿಗೆ ಮನೆಯಲ್ಲಿ ವಾಸವಿದ್ದ. ಸೋಲೂರಿನ ಬಾಡಿಗೆಮನೆಯಲ್ಲಿ ವಾಸವಿದ್ದ ದಿಲೀಪ್  ಮನೆ ಮಾಲೀಕನ ಪತ್ನಿ ಅಮೃತ ಎಂಬುವವರನ್ನ ಪರಿಚಯ ಮಾಡಿಕೊಂಡಿದ್ದ. ಈ ಮಧ್ಯೆ 5 ವರ್ಷಗಳ ಹಿಂದೆ ಗಂಡನನ್ನ ಬಿಟ್ಟು  ಅಮೃತ ದೀಲಿಪ್ ಮದುವೆಯಾಗಿದ್ದು , ಒಟ್ಟಾಗಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.  ಇದು ಅಮೃತಾ ಕುಟುಂಬದವರ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಮಧ್ಯೆ  ನಿನ್ನೆ ನೆಲಮಂಗಲದಲ್ಲಿ ಅಮೃತಾ ಮತ್ತು ದಿಲೀಪ್ ಸ್ನ್ಯಾಕ್ಸ್ ತಿನ್ನಲು ಬಂದಿದ್ದರು. ಈ ವೇಳೆ  ಐದಾರು ಜನರ ಗುಂಪು ದಿಲೀಪ್ ಮೇಲೆ ಮಚ್ಚನಿಂದ ಹಲ್ಲೆ ಮಾಡಿ ನಂತರ ಕಿಡ್ನಾಪ್ ಮಾಡಿದ್ದರು. ಇದೀಗ ತುಮಕೂರಿನಲ್ಲಿ ದಿಲೀಪ್   ಶವ ಪತ್ತೆಯಾಗಿದ್ದು, ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Man, kidnapped, murdered, Bangalore

The post ಹೆಂಡತಿ ಬಿಟ್ಟು ಬಾಡಿಗೆ ಮನೆ ಮಾಲೀಕನ ಪತ್ನಿ ಮದುವೆಯಾಗಿದ್ದ ವ್ಯಕ್ತಿಯ ಕಿಡ್ನಾಪ್, ಹತ್ಯೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಹಭಾಷಾ ಹಿರಿಯ ನಟಿ ಬಿ.ಸರೋಜಾ ದೇವಿ ಇನ್ನಿಲ್ಲ

ಬೆಂಗಳೂರು,ಜುಲೈ,14,2025 (www.justkannada.in): ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿರುವ ಬಹುಭಾಷಾ ಹಿರಿಯ ನಟಿ...

ಜು.19 ರಂದು ಮೈಸೂರಿನಲ್ಲಿ ಬೃಹತ್ ಸಮಾರಂಭ: ಸಕಲ ಸಿದ್ದತೆಗೆ ಸಚಿವ ಹೆಚ್.ಸಿ.ಮಹದೇವಪ್ಪ ಸೂಚನೆ

ಮೈಸೂರು,ಜುಲೈ,12,2025 (www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜುಲೈ19 ರಂದು ಮಹಾರಾಜ...

ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದು: ಸೈನ್ಯ ,ಅಂತರಿಕ್ಷದಲ್ಲೂ ಕೆಲಸ ಪ್ರಗತಿಯ ಪ್ರತೀಕ: ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು ಜುಲೈ,13,2025 (www.justkannada.in):  ಶೇ100 ರಷ್ಟು ಅಂಕಗಳನ್ನು ಪಡೆಯುವುದರಲ್ಲಿ ಹೆಣ್ಣುಮಕ್ಕಳೇ ಮುಂದಿದ್ದು,...

ಸರ್ಕಾರದಲ್ಲಿ ಮೋಡ ಕವಿದ ವಾತಾವರಣ: ಯಾವಾಗ ಗುಡುಗು ಸಿಡಿಲು ಬರುತ್ತೋ ಗೊತ್ತಿಲ್ಲ-ಬಿವೈ ವಿಜಯೇಂದ್ರ

ಬೆಂಗಳೂರು,ಜುಲೈ,12,2025 (www.justkannada.in): ಸರ್ಕಾರದಲ್ಲಿ ಒಂದು ರೀತಿಯ ಮೋಡ ಕವಿದ ವಾತಾವರಣವಿದೆ ....