6
May, 2026

A News 365Times Venture

6
Wednesday
May, 2026

A News 365Times Venture

ಹೈ ಕಮಾಂಡ್ ಹೇಳಿದ್ರೆ 5 ವರ್ಷ ಇರ್ತೇನೆ: ರಾಹುಲ್ ಗಾಂಧಿ ಕರೆದ್ರೆ ದೆಹಲಿಗೆ -ಸಿಎಂ ಸಿದ್ದರಾಮಯ್ಯ

Date:

ಮೈಸೂರು,ಮೇ,6,2026 (www.justkannada.in):  ಹೈಕಮಾಂಡ್ ಹೇಳಿದರೇ 5 ವರ್ಷ ಇರುತ್ತೇನೆ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ದ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಇಂದು ನಾಳೆ ಎರಡು ದಿನಗಳ ಕಾಲ ಜಿಲ್ಲಾ ಪ್ರವಾಸದಲ್ಲಿದ್ದು, ಇಂದು ಕಲಾಮಂದಿರದಲ್ಲಿ ನಡೆಯುವ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಭಾಗಿಯಾಗಲಿದ್ದಾರೆ. ಬೆಂಗಳೂರಿನಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಪೊಲೀಸ್ ಗೌರವ ವಂದನೆ ಸ್ವೀಕಾರ ಮಾಡಿದರು.

ಸಿಎಂ ಸಿದ್ದರಾಮಯ್ಯಗೆ ಸಚಿವ ಕೆ.ವೆಂಕಟೇಶ್, ಶಾಸಕ ಹರೀಶ್ ಗೌಡ, ಶಾಸಕ ಅನಿಲ್ ಚಿಕ್ಕಮಾದು, ಎಂಎಲ್ಸಿ ಡಾ.ತಿಮ್ಮಯ್ಯ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಜನರಿಗೆ ನಾವು ಕೊಟ್ಟಿರುವ ಕಾರ್ಯಕ್ರಮಗಳು ಮತ್ತು ಆಡಳತವನ್ನು ಮೆಚ್ಚಿ ಉಪ ಚುನಾವಣೆಯಲ್ಲಿ ಜನ ಮತ್ತೆ ನಮಗೆ  ಆಶೀರ್ವಾದ ಮಾಡಿದ್ದಾರೆ. ವಿಪಕ್ಷಗಳ ಷಡ್ಯಂತ್ರ ಏನೂ ನಡೆಯಲಿಲ್ಲ ಎಂದರು.

ಮಾಧ್ಯಮ ಪ್ರತಿನಿಧಿಗಳಿಗೆ ಗದರಿದ ಸಿಎಂ.

ಸಿಎಂ ಬದಲಾವಣೆ ವಿಚಾರ, ಅದೆಲ್ಲ ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳತ್ತೋ ಅದಕ್ಕೆ ನಾನು ಬದ್ದ.ಪದೆ ಪದೆ ಅದೇ ಪ್ರಶ್ನೆ ಯಾಕೆ ಕೇಳ್ತೀರಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸಿಎಂ ಸಿದ್ದರಾಮಯ್ಯ ಗದರಿದರು.

ಹೈ ಕಮಾಂಡ್ ಹೇಳಿದರೇ 5 ವರ್ಷ ಇರುತ್ತೇನೆ.. ನಾನು ಹೈಕಮಾಂಡ್ ಮಾತನ್ನ ಮಾತ್ರ ಕೇಳುವುದು. ನೀವು ಎಷ್ಟೇ ಭಾರಿ ಈ ಪ್ರಶ್ನೆಯನ್ನ ಕೇಳಿದರೂ ನನ್ನ ಉತ್ತರ ಹೈಕಮಾಂಡ್ ಅಷ್ಟೇ‌. 5 ವರ್ಷವೂ ಕಾಂಗ್ರೆಸ್ ಸರ್ಕಾರ ಇರುತ್ತದೆ. ನನ್ನನ್ನು ಇರಿ ಎಂದರೇ ಇರುತ್ತೇನೆ. ಎಲ್ಲಾ ತೀರ್ಮಾನ ಮಾಡುವುದು ಹೈಕಮಾಂಡ್. ಬೇರೆ ಯಾರು ಯಾರೋ ಮಾತನಾಡಿದರೆ ಅದು ಅವರ ವೈಯಕ್ತಿಕ ಎಂದರು.

ರಾಹುಲ್ ಗಾಂಧಿ ತಾವಾಗಿಯೇ ನನ್ನನ್ನು ಕರೆದರೆ ನಾನು ಹೋಗುತ್ತೇನೆ.

ನನ್ನನ್ನು ರಾಹುಲ್ ಗಾಂಧಿ ಇಲ್ಲಿಯವರೆಗೆ ದೆಹಲಿಗೆ ಕರೆದಿಲ್ಲ. ನಾನು ಕೂಡ ರಾಹುಲ್ ಗಾಂಧಿಯ ಅಪಾಯಿಂಟ್ ಮೆಂಟ್ ಕೇಳಿಲ್ಲ. ರಾಹುಲ್ ಗಾಂಧಿ ತಾವಾಗಿಯೇ ನನ್ನನ್ನು ಕರೆದರೆ ನಾನು ಹೋಗುತ್ತೇನೆ. ಅಪಾಯಿಂಟ್ ಮೆಂಟ್ ಫಿಕ್ಸ್ ಆದ ಮೇಲೆ ಸಂಪುಟ ಪುನಾರಚನೆಯಾ? ಸಂಪುಟ ವಿಸ್ತರಣೆಯಾ ಯಾವ ವಿಷಯದ ಚರ್ಚೆ ಎಂಬುದು ಆಗ ಗೊತ್ತಗಲಿದೆ. ಅವರು ನನ್ನನ್ನು ಕರೆದೇ ಇಲ್ಲ ಎಂದ ಮೇಲೆ ಸಭೆಯ ಅಜೆಂಡಾ ಹೇಗೆ ಫಿಕ್ಸ್ ಆಗುತ್ತದೆ. ನಾನು ಅವರು ಕರೆದರೆ ಮಾತ್ರ ಹೋಗುವುದು. ಸದ್ಯಕ್ಕಂತೂ ದೆಹಲಿಯ ಪ್ರವಾಸ ಇಲ್ಲ ಎಂದರು.

ಶೃಂಗೇರಿ  ಕ್ಷೇತ್ರದ ಮರುಮತ ಎಣಿಕೆಯಲ್ಲಿ ಕಾಂಗ್ರೆಸ್ ಸೋಲು ವಿಚಾರ, ಅಂಚೆ ಮತಗಳನ್ನ ಖುದ್ದು ಜೀವರಾಜ್ ಮತ್ತು ಚುನಾವಣಾ ಸಿಬ್ಬಂದಿ ಸೇರಿಕೊಂಡು ತಿದಿದ್ದಾರೆ. ಅವತ್ತು ಫಲಿತಾಂಶ ಬರುವಾಗ ಬಿಜೆಪಿ ಸರ್ಕಾರ ಇತ್ತು. ಅವರ ನಿರ್ದೇಶನದಂತೆ ಚುನಾವಣಾ ಸಿಬ್ಬಂದಿಗಳು ಜೀವರಾಜ್ ಜೊತೆ ಸೇರಿ ಅಂಚೆ ಮತ ತಿದಿದ್ದಾರೆ. ಫಲಿತಾಂಶದ ದಿನ ಮತ ಪತ್ರದಲ್ಲಿ ಇಲ್ಲದ ಗೆರೆ ಈಗ ಹೇಗೆ ಬಂತು. ಈ ವಿಚಾರದಲ್ಲಿ ನಾವು ಕೋರ್ಟ್ ಹೋಗುತ್ತೇವೆ‌ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Key words: CM Change, high command, CM Siddaramaiah, Mysore

The post ಹೈ ಕಮಾಂಡ್ ಹೇಳಿದ್ರೆ 5 ವರ್ಷ ಇರ್ತೇನೆ: ರಾಹುಲ್ ಗಾಂಧಿ ಕರೆದ್ರೆ ದೆಹಲಿಗೆ -ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸರ್ಕಾರದ ಯೋಜನೆಗಳಿಗೆ ಜನರ ಮೆಚ್ಚುಗೆ: ಜನಾಶೀರ್ವಾದದಿಂದ ಪಕ್ಷಕ್ಕೆ  ಗೆಲುವು-ಸಿಎಂ ಸಿದ್ದರಾಮಯ್ಯ

ಮೈಸೂರು, ಮೇ, 06,2026 (www.justkannada.in): ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜನಮೆಚ್ಚುಗೆಗೆ ಪಾತ್ರವಾಗಿದ್ದು,...

ಜೀವರಾಜ್ ಪ್ರಮಾಣ ವಚನ ವಿಳಂಬ ಆರೋಪ: ನಾವು ಯಾವುದೇ ತಡ ಮಾಡಿಲ್ಲ- ಸ್ಪೀಕರ್ ಯು.ಟಿ ಖಾದರ್

ಮಂಗಳೂರು,ಮೇ,6,2026 (www.justkannada.in):  ಹೈಕೋರ್ಟ್ ಆದೇಶದಂತೆ ಅಂಚೆ ಮತದಾನದ ಮರು ಏಣಿಕೆಯಲ್ಲಿ 52...

TVK ಭರ್ಜರಿ ಗೆಲುವು: ನಟ ವಿಜಯ್ ಗೆ ಶುಭ ಹಾರೈಸಿದ ನಟ ಶಿವರಾಜ್ ಕುಮಾರ್

ಬೆಂಗಳೂರು,ಮೇ,5,2026 (www.justkannada.in): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ ನಟ ದಳಪತಿ...

ಗೃಹ ಸಚಿವರ ಭೇಟಿ: ಕನ್ನಡ ಪರ ಹೋರಾಟಗಾರರ ವಿರುದ್ದದ ಕೇಸ್ ಹಿಂಪಡೆಯಲು ಮನವಿ

ಮೈಸೂರು, ಮೇ, 5,2026 (www.justkannada.in):  ಕನ್ನಡ ಪರ ಹೋರಾಟಗಾರರ ವಿರುದ್ಧ ದಾಖಲಾದ...