12
September, 2026

A News 365Times Venture

12
Saturday
September, 2026

A News 365Times Venture

ಹೊಸಕಡಜೆಟ್ಟಿ ಮಹದೇವಮ್ಮ ಸಾವು ಪ್ರಕರಣ: ಮೃತಳ ಮಗಳಿಗೆ ₹4.12 ಲಕ್ಷ ಪರಿಹಾರ

Date:

ಮೈಸೂರು,ಸೆಪ್ಟಂಬರ್,11,2026 (www.justkannada.in):  ನಂಜನಗೂಡು ತಾಲೂಕಿನ ಹೊಸಕಡಜೆಟ್ಟಿ ಗ್ರಾಮದ ಮಹದೇವಮ್ಮ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಮೃತಳ ಮಗಳು ಗೀತಾ ಅವರಿಗೆ ₹4,12,500 ಪರಿಹಾರದ ಚೆಕ್ ವಿತರಿಸಿದೆ.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗು ಅವರು ಗೀತಾ ಅವರಿಗೆ ಚೆಕ್ ಹಸ್ತಾಂತರಿಸಿದರು.

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನವೀನ್ ಎಂಬಾತ ಮಹದೇವಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಗೀತಾ ಅವರಿಗೆ ₹20 ಸಾವಿರ ನೀಡಿ ರಾಜಿ ಮಾಡಿಸಲು ಮಧ್ಯವರ್ತಿಗಳು ಯತ್ನಿಸಿದ್ದರು ಎಂಬ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆದ ಬಳಿಕ, ಹುಲ್ಲಹಳ್ಳಿ ಠಾಣೆಯಲ್ಲಿ ಆರೋಪಿ ನವೀನ್ ವಿರುದ್ಧ ಪ್ರಕರಣ ದಾಖಲಾಗಿದೆ.

ನಿಯಮಾನುಸಾರ ಒಟ್ಟು ₹8 ಲಕ್ಷ ಪರಿಹಾರ ನೀಡಬೇಕಿದ್ದು, ಈಗ ₹4.12 ಲಕ್ಷ ವಿತರಿಸಲಾಗಿದೆ. ಉಳಿದ ಮೊತ್ತವನ್ನು ಕೆಲ ದಿನಗಳಲ್ಲಿ ನೀಡುವುದಾಗಿ ಇಲಾಖೆ ಭರವಸೆ ನೀಡಿದೆ.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ED ದಾಳಿ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿ ಚರ್ಚಿಸಿದ ಸಿಎಂ ಡಿಕೆಶಿ

ಬೆಂಗಳೂರು,ಸೆಪ್ಟಂಬರ್,11,2026 (www.justkannada.in): ಕಳೆದ ಎರಡು ದಿನಗಳ ಹಿಂದೆ ಲೋಕೋಪಯೋಗಿ ಇಲಾಖೆ ಸಚಿವ...

ಮೈಸೂರಿನಲ್ಲಿ ಚೆಸ್ಕಾಂ ಕಚೇರಿಗೆ ರೈತರಿಂದ ಮುತ್ತಿಗೆ, ಪ್ರತಿಭಟನೆ

ಮೈಸೂರು,ಸೆಪ್ಟಂಬರ್,11,2026 (www.justkannada.in): ಅನಿಯಮಿತ ಲೋಡ್ ಶೆಡ್ಡಿಂಗ್ ವಿರೋಧಿಸಿ ರೈತರು ಇಂದು ಮೈಸೂರಿನ...

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ, ಪರಿಶೀಲನೆ

ಶಿವಮೊಗ್ಗ, ಸೆಪ್ಟಂಬರ್,11,2026 (www.justkannada.in): ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ಶಾಲಾ ಶಿಕ್ಷಣ ಮತ್ತು...

ಮೈಸೂರು ಕೇಂದ್ರ ಕಾರಾಗೃಹದ ಮೇಲೆ ದಿಢೀರ್ ದಾಳಿ: ಮೊಬೈಲ್ ಅಕ್ರಮಕ್ಕೆ ಕಡಿವಾಣದ ಎಚ್ಚರಿಕೆ!

ಮೈಸೂರು,ಸೆಪ್ಟಂಬರ್,11,2026 (www.justkannada.in):  ಮೈಸೂರು ಕೇಂದ್ರ ಕಾರಾಗೃಹದ ಮೇಲೆ ಕಾರಾಗೃಹ ಡಿಜಿಪಿ ಅಲೋಕ್...