ಮೈಸೂರು,ಜೂನ್,28,2025 (www.justkannada.in): ಬಿಜೆಪಿಯಲ್ಲಿ ಹೊಸ ಅಧ್ಯಕ್ಷರ ಬಗ್ಗೆ ಚರ್ಚೆಯೇ ಆಗಿಲ್ಲ. ದೆಹಲಿಯಲ್ಲಿ ನಾನಿದ್ದಾಗ ಬದಲಾವಣೆ ಚರ್ಚೆಯೇ ಆಗಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ದೇಶದ ಇತರೆ ರಾಜ್ಯಗಳಲ್ಲಿ ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆ. ನನಗೆ ಮೂರು ತಿಂಗಳಿಗೊಮ್ಮೆ ರಾಜ್ಯದ ವರದಿ ಕೊಡಲು ವರಿಷ್ಠರು ಹೇಳಿದ್ದಾರೆ. ಹೀಗಾಗಿ ದೆಹಲಿಗೆ ತೆರಳಿ ವರದಿ ನೀಡುತ್ತಿದ್ದೇನೆ ಎಂದರು.
ರಾಜ್ಯ ನಾಯಕರ ಸಭೆಯ ಬಗ್ಗೆ ಸಮರ್ಥಿಸಿಕೊಂಡ ಆರ್ ಅಶೋಕ್, ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸಬೇಕಿದೆ. ಅದರಲ್ಲಿ ಪ್ರತಿ ಜಿಲ್ಲೆಗಳ ಸಮಸ್ಯೆ ಚರ್ಚಿಸಿ ಪರಿಹಾರ ಹುಡುಕುವುದಾಗಿದೆ. ಅಂದು ನಡೆದ ಸಭೆಯಲ್ಲಿ ನಾನಿರಲಿಲ್ಲ ಎಂದರು.
ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಕಾಂಗ್ರೆಸ್ ಗೆ ಸಂವಿಧಾನದ ಬಗ್ಗೆ ಗೌರವ ಇದ್ದರೆ ತುರ್ತು ಪರಿಸ್ಥಿತಿಯ ಪರವೂ ವಿರೋಧವೂ ಎಂದು ತಿಳಿಸಲಿ. ತುರ್ತು ಪರಿಸ್ಥಿತಿಯಲ್ಲಿ ಅಮಾಯಕ ದೇಶ ಪ್ರೇಮಿಗಳು ಸತ್ತಿದ್ದೇಕೆ..? ಲಾಠಿಚಾರ್ಜ್ ಮಾಡಿದ್ದೇಕೆ ಎಂಬುದಕ್ಕೆ ಕಾಂಗ್ರೆಸ್ ಉತ್ತರವನ್ನೇ ಕೊಟ್ಟಿಲ್ಲ. ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ಆಗಿಲ್ಲ. ವಿರೋಧವೂ ಅಥವಾ ಪರವೂ ಎಂಬುದನ್ನು ತಿಳಿಸಲಿ ಎಂದು ಆಗ್ರಹಿಸಿದರು.
ವಿಚಾರ ಮುಚ್ಚಿಡುವ ಮೂಲಕ ಕಾಂಗ್ರೆಸ್ ಕಳ್ಳಾಟ ಮಾಡುತ್ತಿದೆ. ಆ ವೇಳೆ ನಾನು ಕೂಡ ಬಂಧನವಾಗಿದ್ದೆ. ನಾನು ಕಾಲೇಜ್ ಸ್ಟೂಡೆಂಟ್ ಆಗಿದ್ದೆ ನನ್ನನ್ನೇಕೆ ಅರೆಸ್ಟ್ ಮಾಡಿದ್ದೂ ಹೇಳಿರಿ. ಅಘೋಷಿತ ತುರ್ತು ಎಂದರೆ ನಾವೇನು ಚುನಾವಣೆಗೆ ನಿಲ್ಲಬೇಡ ಎಂದು ತಡೆದಿದ್ದೇವಾ. ಬೇರೆ ಬೇರೆ ದೇಶಕ್ಕೆ ಹೋಗಿ ಭಾರತದ ಬಗ್ಗೆ ಮಾತನಾಡುತ್ತೀರಿ. ನಿಮ್ಮನ್ನು ಪ್ರಧಾನಿ ಮೋದಿ ತಡೆದಿದ್ದಾರಾ.? ಅಂದು ಪತ್ರಿಕೆಯ ಕಂಟೆಂಟ್ ಬಗ್ಗೆ ಇಂದಿರಾ ತೀರ್ಮಾನ ಮಾಡುತ್ತಿದ್ದರು. ಆದರೆ ಇಂದು ಮೋದಿ ಆ ರೀತಿ ನಡೆದುಕೊಳ್ಳುತ್ತಿದ್ದಾರಾ? ಎಂದು ಆರ್ ಅಶೋಕ್ ಪ್ರಶ್ನಿಸಿದರು.
Key words: no discussion, about, BJP, new, state president, R. Ashok
The post ಹೊಸ ರಾಜ್ಯಾಧ್ಯಕ್ಷರ ಬಗ್ಗೆ ಚರ್ಚೆಯೇ ಆಗಿಲ್ಲ: ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.