20
November, 2026

A News 365Times Venture

20
Friday
November, 2026

A News 365Times Venture

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಸಿದ್ದರಾಮಯ್ಯ, ಸಿಎಂ ಡಿಕೆಶಿ ನುಡಿದಂತೆ ನಡೆದಿದ್ದಾರೆ-ಸಚಿವ ಯತೀಂದ್ರ

Date:

ಮೈಸೂರು,ಅಕ್ಟೋಬರ್,5,2026 (www.justkannada.in): ನಾವು ನುಡಿದಂತೆ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ.  ಸಿದ್ದರಾಮಯ್ಯ ನುಡಿದಂತೆ ನಡೆದುಕೊಂಡರು. ಸಿದ್ದರಾಮಯ್ಯರಂತೆ ಸಿಎಂ ಡಿಕೆ ಶಿವಕುಮಾರ್ ಸಹ ಕೆಲಸ ಮಾಡುತ್ತಿದ್ದಾರೆ ಎಂದು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನಂಜನಗೂಡು ತಾಲೂಕಿನ ದಾಸನೂರು ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ವರುಣಾ ವ್ಯಾಪ್ತಿಯಲ್ಲಿ 146 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಕೊಟ್ಟಿದ್ದೇವೆ. 56 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆ ನೂತನವಾಗಿ ನಿರ್ಮಾಣಗೊಂಡಿದೆ. ಈ ಸರ್ಕಾರದಲ್ಲಿ ಹಣ ಇಲ್ಲ ಅಂತಾರೆ. ಹಣ ಇಲ್ಲದೆ ಇಷ್ಟೆಲ್ಲ ಕೆಲಸನ್ನು ಮಾಡಲು ಆಗತ್ತಾ? ಗ್ಯಾರಂಟಿ ಕೊಡಲ್ಲ ನಿಲ್ಲಿಸುತ್ತಾರೆ ಅಂದರು. ನಾವು ನುಡಿದಂತೆ ಗ್ಯಾರೆಂಟಿಗಳನ್ನು ಕೊಟ್ಟವು . ನುಡಿದಂತೆ ನಿಮ್ಮ ಸಿದ್ದರಾಮಯ್ಯ ನಡೆದುಕೊಂಡರು. ಇದು ನಿಮ್ಮ ಕಾಂಗ್ರೆಸ್ ಪಕ್ಷದ ಬದ್ಧತೆ ಎಂದರು.

ಮಹಿಳೆಯರಿಗೆ ಗೃಹಲಕ್ಷ್ಮಿ, ಶಕ್ತಿ ಯೋಜನೆ ಕೊಟ್ಟಿದ್ದೇವೆ, ಗೃಹಜ್ಯೋತಿ ಕೊಟ್ಟಿದ್ದೇವೆ. ಇದು ನೀವು ನಮ್ಮನ್ನು ನಂಬಿ ಮತ ಹಾಕಿದಕ್ಕೆ ನಾವು ಹೇಳಿದಂತೆ ನಡೆದುಕೊಂಡಿದ್ದೇವೆ. ಸರ್ಕಾರದ ಹಣ ಅಂದರೆ ಜನರ ಹಣ. ನಿಮ್ಮ ಹಣ ನಿಮಗೆ ನಾವು ಯೋಜನೆಗಳ ಮುಖಾಂತರ ಕೊಡುತ್ತಿದ್ದೇವೆ. ಜನರ ಅಭಿವೃದ್ಧಿ ನಮ್ಮ ಪಕ್ಷದ ಆದ್ಯತೆ ಎಂದರು.

ಸಿಎಂ ಡಿಕೆಶಿಯನ್ನು ಹೊಗಳಿದ ಯತೀಂದ್ರ ಸಿದ್ದರಾಮಯ್ಯ

ವರುಣಾ ಕ್ಷೇತ್ರದ ಜನರ ಆಶೀರ್ವಾದದಿಂದ ನಮ್ಮ ತಂದೆ ಸಿಎಂ ಆದರು. ನಾನು ಕೂಡ ನಿಮ್ಮಿಂದ ಎಂ.ಎಲ್. ಎ ಆಗಿದ್ದೇನೆ. ಈಹಗ ಮಂತ್ರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಇದಕ್ಕೆಲ್ಲ ಕಾರಣ ವರುಣಾ ಕ್ಷೇತ್ರದ ಜನರು. ಈಗ ಡಿಕೆಶಿ ಸಿಎಂ ಆಗಿದ್ದಾರೆ. ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ನೇಗಿಲು ಯೋಜನೆ ಜಾರಿಗೆ ತಂದಿದ್ದಾರೆ. ರೈತರ ಹೊಲವನ್ನು ಉಚಿತವಾಗಿ ಉಳುವ ವ್ಯವಸ್ಥೆ ಮಾಡಿದ್ದೇವೆ. ಸಿದ್ದರಾಮಯ್ಯರಂತೆ ಡಿಕೆಶಿಯು ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಡಿ ಹೊಗಳಿದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

‘ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ? ಎಚ್ಚರಿಕೆಯಿಂದಿರುವ ಸಿಎಂ ಡಿಕೆಶಿ ಸೂಚನೆ

ಬೆಂಗಳೂರು,ಅಕ್ಟೋಬರ್,7,2026 (www.justkannada.in): ರಾಜ್ಯ ಸರ್ಕಾರದ ಸಚಿವರನ್ನು ಗುರಿಯಾಗಿಸಿಕೊಂಡು ಖಾಸಗಿ ಏಜೆನ್ಸಿಗಳ ಮೂಲಕ...

ನಿಸ್ವಾರ್ಥ ಸೇವೆಯೇ ನನ್ನ ಏಕೈಕ ಧ್ಯೇಯ: ಅರ್ಥವ್ಯವಸ್ಥೆಯಲ್ಲಿ ವಿಶ್ವದ 3ರಲ್ಲಿ ಭಾರತ ಇರಲಿದೆ –ಪ್ರಧಾನಿ ಮೋದಿ

ನವದೆಹಲಿ,ಅಕ್ಟೋಬರ್,7,2026 (www.justkannada.in): ದೇಶಕ್ಕಾಗಿ ನಿಸ್ವಾರ್ಥ ಸೇವೆಯೇ ನನ್ನ ಜೀವನದ ಏಕೈಕ ಧ್ಯೇಯ....

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಸಿಎಂ, ಡಿಸಿಎಂರಿಂದ ಸನ್ಮಾನ: ನಗದು ಬಹುಮಾನ ಮೊತ್ತ ಹೆಚ್ಚಳ

ಬೆಂಗಳೂರು, ಅಕ್ಟೋಬರ್, 6,2026 (www.justkannada.in): ಏಷ್ಯನ್ ಗೇಮ್ಸ್ 2026ರಲ್ಲಿ ಪದಕ ಗೆದ್ದ...

ಮೈಸೂರು: ವೈಯಕ್ತಿಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ – ಪಾಲಿಕೆ ಸಿಬ್ಬಂದಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

  ಮೈಸೂರು, OCT.06,2026: ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ...