ಮೈಸೂರು,ಆಗಸ್ಟ್,21,2026 (www.justkannada.in): ಅರ್ಜುನ ಅವಧೂತಗೆ ಭದ್ರತೆ ಮತ್ತು ಆತ್ಮರಕ್ಷಣೆ ದೃಷ್ಟಿಯಿಂದ ಉಚಿತವಾಗಿ ನೀಡಲಾಗಿದ್ದ ಒಬ್ಬ ಅಂಗರಕ್ಷಕನ ಭದ್ರತೆಯನ್ನು ಮೈಸೂರು ನಗರ ಪೊಲೀಸ್ ಇಲಾಖೆ ಹಿಂಪಡೆದಿದೆ.
ಲಕ್ಷ್ಮೀಪುರಂ ಪೊಲೀಸ್ ಠಾಣೆ ಪರಿಶೀಲನೆ ನಡೆಸಿ, ಸದ್ಯದ ಪರಿಸ್ಥಿತಿಯಲ್ಲಿ ಅರ್ಜುನ ಅವಧೂತಗೆ ಗನ್‌ಮ್ಯಾನ್ ಭದ್ರತೆಯ ಅಗತ್ಯವಿಲ್ಲ ಎಂದು ವರದಿ ನೀಡಿತ್ತು. ಕೃಷ್ಣರಾಜ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಈ ವರದಿಗೆ ಅನುಮೋದನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಉಪ ಪೊಲೀಸ್ ಆಯುಕ್ತರಿಗೆ, ಅರ್ಜುನ ಅವಧೂತಗೆ ಒದಗಿಸಲಾಗಿದ್ದ ಅಂಗರಕ್ಷಕ ಭದ್ರತೆಯನ್ನು ಕೂಡಲೇ ಹಿಂಪಡೆದು, ಪಾಲನಾ ವರದಿ ಸಲ್ಲಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಅಗತ್ಯವಿದ್ದಲ್ಲಿ ಮುಂದಿನ ದಿನಗಳಲ್ಲಿ ಪಾವತಿ ಆಧಾರದ ಮೇಲೆ ಗನ್ ಮ್ಯಾನ್ ಭದ್ರತೆ ಪಡೆಯಲು ಅವಕಾಶವಿದೆ ಎಂದು ಪೊಲೀಸ್ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.
ENGLISH SUMMARY…
Police Withdraw Gunman Security for Arjun Avadhoota
Mysuru: The Mysuru City Police have withdrawn the free gunman security provided to Arjun Avadhoota for protection and self-defence.
Following a review, the Lakshmipuram Police reported that there was no current need for armed security. The Assistant Commissioner of Police, KR Sub-Division, approved the report.
Police have directed the City Armed Reserve to immediately withdraw the security. If required, he can obtain a gunman on a payment basis.
Key words: Mysore, Arjun Avadhoot, Gunman security, withdrawn
The post ಅರ್ಜುನ ಅವಧೂತಗೆ ನೀಡಿದ್ದ ಗನ್‌ಮ್ಯಾನ್ ಭದ್ರತೆ ವಾಪಸ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




