ಚಿಕ್ಕಮಗಳೂರು,ಜುಲೈ,1,2026 (www.justkannada.in): ಯಾರು ಅರ್ಹರಿದ್ದಾರೋ ಅವರಿಗೆ ಮಾತ್ರ ಗೃಹಜ್ಯೋತಿ ಯೋಜನೆ ನೀಡುತ್ತೇವೆ. ಅನರ್ಹರಿಗೆ ನೀಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಜೆ ಜಾರ್ಜ್ , ಯಾರು ಅರ್ಹರಿದ್ದಾರೋ ಅವರಿಗೆ ಮಾತ್ರ ಗೃಹಜ್ಯೋತಿ ಯೋಜನೆ ಸಿಗುತ್ತೆ. ದೂರುಗಳು ಬರುತ್ತಿದೆ. ಹೀಗಾಗಿ ಅನರ್ಹರನ್ನ ತೆಗೆದು ಹಾಕುತ್ತೇವೆ ಎಂದರು.
200 ಯುನಿಟ್ ಉಚಿತ ಅಂತಾ ಹೇಳಿದ್ದೇವೆ ಕೊಡುತ್ತಿದ್ದೇವೆ. ಗೃಹ ಜ್ಯೋತಿಗೆ ಜಾತಿ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ. ಜಾತಿ ಹೆಸರು ಕಾಲಂನಲ್ಲಿ ಬರೆದರೆ ಸಾಕು. ವಿರೋಧ ಪಕ್ಷದಲ್ಲಿ ಸುಮ್ಮನೆ ಕೂರಲು ಬಿಜೆಪಿಗೆ ಆಗುತ್ತಿಲ್ಲ. ಬಿಜೆಪಿಯವರು ಮೊದಲು ಫಾರಂ ನೋಡಿದ ಮೇಲೆ ಹೇಳಲಿ. ಫಾರಂ ತೆಗೆದುಕೊಂಡ ಮೇಲೆ ಎಲ್ಲರಿಗೂ ಗೊತ್ತಾಗುತ್ತೆ. ವ್ಯವಹಾರ ಪತ್ರವನ್ನು ಕೊಡುವಂತೆ ನಾವು ಬರೆದಿದ್ದೇವಾ? ಎಂದು ಸಚಿವ ಕೆ.ಜೆ ಜಾರ್ಜ್ ಪ್ರಶ್ನಿಸಿದರು.
Key words: Grihajyothi, revised, eligible, Minister K.J. George
The post ಅರ್ಹರಿದ್ದವರಿಗೆ ಮಾತ್ರ ಕೊಡಲು ಗೃಹಜ್ಯೋತಿ ಪರಿಷ್ಕರಣೆ- ಸಚಿವ ಕೆ.ಜೆ ಜಾರ್ಜ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




