4
May, 2026

A News 365Times Venture

4
Monday
May, 2026

A News 365Times Venture

ಅಲ್ಪಸಂಖ್ಯಾತರಿಗೆ ವಸತಿ ಮೀಸಲಾತಿ: ಸ್ಪಷ್ಟನೆ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್

Date:

ಬೆಂಗಳೂರು, ಜೂನ್,​ 20,2025 (www.justkannada.in): ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 10ರಿಂದ ಶೇ 15ಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು ಇದಕ್ಕೆ ತೀವ್ರ ವಿರೋಧ ಟೀಕೆಗಳು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಈ ವಚಾರ ಕುರಿತು ವಸತಿ ಇಲಾಖೆ ಸಚಿವ ಜಮೀರ್​ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವ ಜಮೀರ್ ಅಹ್ಮದ್ ಖಾನ್, ವಸತಿ ಇಲಾಖೆ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿ ನೀಡುವ ನಿರ್ಧಾರ ಈಗ ಕೈಗೊಂಡ ತೀರ್ಮಾನವಲ್ಲ. 2019ರಲ್ಲಿ ಮೈತ್ರಿ ಸರ್ಕಾರದಲ್ಲಿ ಹೆಚ್​ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶೇ 15 ರಷ್ಟು ಮೀಸಲಾತಿ ಬಗ್ಗೆ ಸಂಪುಟ ಉಪಸಮಿತಿ ಶಿಫಾರಸು ಮಾಡಿತ್ತು ಎಂದು ತಿಳಿಸಿದ್ದಾರೆ.

ಸಾಚಾರ್ ಸಮಿತಿಯ ವರದಿ ಪ್ರಕಾರ ಕೇಂದ್ರದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 15 ರಷ್ಟು ಮೀಸಲಾತಿ ನೀಡಬೇಕೆಂದು ಇದೆ. ಅದೇ ರೀತಿ ರಾಜ್ಯದಲ್ಲೂ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಇತ್ತು. ಹೀಗಾಗಿ ಕೇಂದ್ರದ ಮಾದರಿಯನ್ನೇ ರಾಜ್ಯದಲ್ಲೂ ಅನುಸರಿಸಲಾಗಿದೆ. ಹೆಚ್​ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ ಸಮಯದಲ್ಲಿ ರಚಿಸಿದ್ದ ಸಂಪುಟ ಉಪಸಮಿತಿ ಶಿಫಾರಸು ಮಾಡಿತ್ತು. ಇದೀಗ ಸಂಪುಟದ ಮುಂದೆ ಬಂದು ಒಪ್ಪಿಗೆ ದೊರೆತಿದೆ. ಈಗಾಗಲೇ ಇದ್ದ ಶೇ 10 ರಷ್ಟು ಮೀಸಲಾತಿ ಪ್ರಮಾಣ ಶೇ.15ಕ್ಕೆ ಹೆಚ್ಚಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ವಸತಿ ರಹಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಬೇಡಿಕೆ ಇತ್ತು. ಶೇ.15ರಷ್ಟು ಮೀಸಲಾತಿ ಜಾರಿಗೊಳಿಸಬೇಕೆಂದು 2021ರ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಸಹ ತಿಳಿಸಿತ್ತು. ವಾಸ್ತವಾಂಶ ತಿಳಿಯದೆ ಪ್ರತಿಪಕ್ಷಗಳು ಅನಗತ್ಯವಾಗಿ ಟೀಕೆ ಮಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಸಚಿವ ಜಮೀರ್ ಕಿಡಿಕಾರಿದ್ದಾರೆ.vtu

Key words: Housing Scheme, reservation , minorities, Minister, Zameer Ahmed Khan

The post ಅಲ್ಪಸಂಖ್ಯಾತರಿಗೆ ವಸತಿ ಮೀಸಲಾತಿ: ಸ್ಪಷ್ಟನೆ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗೆಲ್ಲುವ ಕಡೆ ಜಮೀರ್, ಸೋಲುವ ಕಡೆ ಡಿಕೆಶಿ ಕಳಿಸ್ತಾರೆ- ಆರ್.ಅಶೋಕ್ ಲೇವಡಿ

ಬೆಂಗಳೂರು,ಮೇ,4,2026 (www.justkannada.in):  ಗೆಲ್ಲುವ ಕಡೆ ಜಮೀರ್ ರನ್ನು ಸೋಲುವ ಕಡೆ ಡಿಕೆ...

ಕೆ.ಸಿ ರೆಡ್ಡಿ ಅವರು ಒಬ್ಬ ಸಮರ್ಥ, ಪ್ರಾಮಾಣಿಕ  ಆಡಳಿತಗಾರರಾಗಿದ್ದರು:ಸಿಎಂ  ಸಿದ್ದರಾಮಯ್ಯ

ಬೆಂಗಳೂರು, ಮೇ,04,2026 (www.justkannada.in):  ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ ರೆಡ್ಡಿಯವರು ಒಬ್ಬ...

ಬಾಗಲಕೋಟೆ ಬೈ ಎಲೆಕ್ಷನ್: ‘ಕೈ’ ಅಭ್ಯರ್ಥಿ ಉಮೇಶ ಮೇಟಿಗೆ ಭರ್ಜರಿ ಜಯ

ಬಾಗಲಕೋಟೆ,ಮೇ,4,2026 (www.justkannada.in):  ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ...

ಸಿದ್ದರಾಮಯ್ಯ ಜನಪ್ರಿಯತೆ, ಗ್ಯಾರಂಟಿ ನಮ್ಮ ಕೈಹಿಡಿದಿದೆ – ಸಚಿವ ಆರ್.ಬಿ ತಿಮ್ಮಾಪುರ

ಬಾಗಲಕೋಟೆ,ಮೇ,4,2026 (www.justkannada.in):  ಬಾಗಲಕೋಟೆ ಉಪಚುನಾವಣೆ ಫಲಿತಾಂಶ ಪ್ರಕಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ...