22
April, 2026

A News 365Times Venture

22
Wednesday
April, 2026

A News 365Times Venture

ಆ.17 ರಂದು ನಮ್ಮ ಶಾಸಕರು, ಪರಿಷತ್ ಸದಸ್ಯರು ಧರ್ಮಸ್ಥಳಕ್ಕೆ ಭೇಟಿ- ಬಿವೈ ವಿಜಯೇಂದ್ರ

Date:

ಬೆಂಗಳೂರು,ಆಗಸ್ಟ್,13,2025 (www.justkannada.in):  ಆಗಸ್ಟ್ 17 ರಂದು ನಮ್ಮ ಶಾಸಕರು, ಪರಿಷತ್ ಸದಸ್ಯರು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥೇಶ್ವರನ ದರ್ಶನ ಪಡೆಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಆಗಸ್ಟ್ 17ರಂದು ಧರ್ಮಸ್ಥಳಕ್ಕೆ ಭೇಟಿ  ನೀಡಿ ಮಂಜುನಾಥನ ದರ್ಶನ ಪಡೆದು ಬರುತ್ತೇವೆ.  ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣಧಲ್ಲಿ ನಾವು ಮಧ್ಯ ಪ್ರವೇಶಿಸಲ್ಲ. ನಾವು ಬಿಜೆಪಿ ಕಾರ್ಯಕರ್ತರಾಗಿ ಧರ್ಮಸ್ಥಳಕ್ಕೆ ಹೋಗುತ್ತಿಲ್ಲ.  ಮಂಜುನಾಥನ ಭಕ್ತರಾಗಿ ಅಲ್ಲಿಗೆ ಹೋಗುತ್ತಿದ್ದೇವೆ ನಮ್ಮ ನಿಲುವಿನ ಬಗ್ಗೆ ಸ್ಪಷ್ಟತೆ ಇದೆ. ಎಸ್ ಐಟಿ ತನಿಖೆ ಬೇಗ ಮುಗಿಯಬೇಕು. ಪ್ರಕರಣವನ್ನ ಹೀಗೆಯೇ ಎಳೆದುಕೊಂಡು ಹೋಗುವುದು ಸರಿಯಲ್ಲ. ಗೊಂದಲಗಳಿಗೆ ಬೇಗ ತೆರೆ ಬೀಳಬೇಕು. ತನಿಖೆ ಹಿಂದೆ ಎಸ್ ಡಿಪಿಐನಂತಹ ಸಂಘಟನೆಗಳ ಪಿತೂರಿ ನಡೆಯುತ್ತಿದೆ.  ನಾವು ಮಂಜುನಾಥನ ದರ್ಶನ ಪಡೆಯಲು ಮಾತ್ರ ಹೋಗುತ್ತಿದ್ದೇವೆ ಎಂದರು.

ಸಚಿವ ಸ್ಥಾನದಿಂದ ಕೆಎನ್ ರಾಜಣ್ಣ ವಜಾ ಬಗ್ಗೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಉತ್ತರ ಕೊಡಬೇಕಾಗುತ್ತದೆ.  ಸದನದಲ್ಲಿ ಸಿಎಂ  ಸಿದ್ದರಾಮಯ್ಯ ಸ್ಪಷ್ಟವಾಗಿ ಉತ್ತರ ನೀಡಬೇಕು ಎಂದು ಬಿವೈ ವಿಜಯೇಂದ್ರ ಹೇಳಿದರು.

Key words: MLAs, MLCs, visit , Dharmasthala, BY Vijayendra

The post ಆ.17 ರಂದು ನಮ್ಮ ಶಾಸಕರು, ಪರಿಷತ್ ಸದಸ್ಯರು ಧರ್ಮಸ್ಥಳಕ್ಕೆ ಭೇಟಿ- ಬಿವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಿಎಂಗೆ ಮಾಟ ಮಂತ್ರದ ಹೇಳಿಕೆ: ರಾಜಣ್ಣಗೆ  ಟಾಂಗ್ ಕೊಟ್ಟ ಶಾಸಕ ಬಾಲಕೃಷ್ಣ

ಬೆಂಗಳೂರು,ಏಪ್ರಿಲ್,22,2026 (www.justkannada.in):  ಸಿಎಂ ಸಿದ್ದರಾಮಯ್ಯಗೆ ಮಾಟ ಮಂತ್ರ ಮಾಡೋ ಶಕ್ತಿ ಇರೋದಿ...

ಸಚಿವ ಜಮೀರ್ ಜೆಡಿಎಸ್ ಸೇರ್ತಾರಾ ಅನ್ನೋ ವಿಚಾರ: ಪಕ್ಷ ಯಾರನ್ನೂ ನೆಚ್ಚಿಕೊಂಡಿಲ್ಲ ಎಂದ ನಿಖಿಲ್

ಬೆಂಗಳೂರು,ಏಪ್ರಿಲ್,22,2026 (www.justkannada.in): ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಸೇರುತ್ತಾರೆಯೇ...

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಇಬ್ಬರ ಬಂಧನ

ಕೊಡಗು,ಏಪ್ರಿಲ್,22,2026 (www.justkannada.in):  ಅಮೆರಿಕಾ ಮೂಲದ ಪ್ರವಾಸಿ ಮಹಿಳೆಯ ಮೇಲೆ ಹೋಮ್ಸ್‌ ಸ್ಟೇ...

ಪಹಲ್ಗಾಮ್ ದಾಳಿಗೆ ವರ್ಷ :  ಕಣಿವೆ ದುಃಖದಲ್ಲಿ, ಹೊಂದಾಣಿಕೆ ಮತ್ತು ಹೆಚ್ಚಿದ ಭದ್ರತೆ.!

  ಶ್ರೀನಗರ, ಏ.೨೧,೨೦೨೬: ಕಾಶ್ಮೀರದ ಶ್ರೀನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅಶಾಂತಿಯ ನಿಶ್ಶಬ್ದತೆ...