20
August, 2026

A News 365Times Venture

20
Thursday
August, 2026

A News 365Times Venture

ಈ ಬಾರಿ ದಸರಾ ಮಹೋತ್ಸವದಲ್ಲಿ “ಕಂಬಳ” ಫಿಕ್ಸ್..!

Date:

ಮೈಸೂರು,ಆಗಸ್ಟ್,19,2026 (www.justkannada.in): ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಸಾಂಪ್ರದಾಯಿಕ ಹಾಗೂ ಜನಪ್ರಿಯ ಕ್ರೀಡೆಯಾದ ಕಂಬಳವನ್ನು ಆಯೋಜಿಸುವುದು ಖಚಿತವಾಗಿದೆ.

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಸರ್ಕಾರ ನಿರ್ಧಾರ ಮಾಡಿ ಜಾಗ ಗುರುತಿಸಿ ಪರಿಶೀಲನೆಯೂ ನಡೆಸಿತ್ತು. ಆದರೆ ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಆದರೂ ಸಹ ಕಂಬಳ ನಡೆಸಲು ಮುಂದಾಗಿರುವ ಸರ್ಕಾರ ಇದೀಗ  ಇದಕ್ಕೆ ಉಪಸಮಿತಿಯನ್ನ ರಚನೆ ಮಾಡಿದ್ದು ಈ ಬಾರಿ ಕಂಬಳ ನಡೆಯುವುದು ಬಹುತೇಕ ಫಿಕ್ಸ್ ಆಗಿದೆ.

ಹೌದು. ನಾಡಹಬ್ಬ ಮೈಸೂರು ದಸರಾ ಆಚರಣೆಗಾಗಿ ರಾಜ್ಯ ಸರ್ಕಾರ ವಿವಿಧ ಉಪಸಮಿತಿಗಳನ್ನ ರಚನೆ ಮಾಡಿದ್ದು ಇದರಲ್ಲಿ ಕಂಬಳ ಉಪಸಮಿತಿಯೂ ಇದೆ.  ಕಂಬಳ ಉಪಸಮಿತಿಯ ಉಪ ವಿಶೇಷಾಧಿಕಾರಿಯಾಗಿ ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್ ,  ಕಾರ್ಯಾಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಉಪ ಅರಣ್ಯಾಧಿಕಾರಿ ಪರಮೇಶ,  ಕಾರ್ಯದರ್ಶಿಗಳಾಗಿ  ಪದ್ಮನಾಭ, ಮೈತ್ರಿ ಅವರನ್ನ ನೇಮಿಸಲಾಗಿದೆ.

ಸ್ವಾಗತ, ಅಮಂತ್ರಣ ಮ್ತು ಸ್ಥಳಾವಕಾಶ,  ಬಂದೋಬಸ್ತ್, ಪಂಜಿನ ಕವಾಯತು,  ಮೆರವಣಿಗೆ ಮತ್ತು ಸ್ತಬ್ದಚಿತ್ರ,  ರೈತ ದಸರಾ, ಸಾಮಸ್ಕೃತಿಕ ದಸರಾ,  ಲಲಿತ ಕಲೆ ಮತ್ತು ಕರಕುಶಲ ಕಲೆ, ದೀಪಾಲಂಕಾರ, ಕವಿಗೋಷ್ಠಿ, ಯೋಗ ದಸರಾ, ಯುವ ಸಂಭ್ರಮ, ಯುವದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ಆಹಾರ ಮೇಳ, ಕಂಬಳ, ಕುಸ್ತಿ, ಗಜಪಯಣ , ಕ್ರೀಡೆಗೆ ಉಪಸಮಿತಿಗಳನ್ನ ರಚಿಸಲಾಗಿದೆ.

Key words: Mysore Dasara, Kambala, fix,  Sub committee

The post ಈ ಬಾರಿ ದಸರಾ ಮಹೋತ್ಸವದಲ್ಲಿ “ಕಂಬಳ” ಫಿಕ್ಸ್..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಿದ್ಯಾರ್ಥಿಗಳಿಂದಲೇ ಶಾಲಾ ಪ್ರಿನ್ಸಿಪಾಲ್ ಹತ್ಯೆ

ನಲ್ಗೊಂಡ,ಆಗಸ್ಟ್,20,2026 (www.justkannada.in): ತಂದೆ ತಾಯಿ ಮತ್ತು ಶಿಕ್ಷಕರನ್ನ ದೇವರ ಸಮಾನ ಎಂದು...

ಮುಡಾ ಹಗರಣ: ಎಲ್ಲಾ‌ ಸೈಟ್ ಗಳನ್ನ ರದ್ದು ಮಾಡಿ ದಿಟ್ಟತನ ತೋರಿಸಿ- ಸಾ.ರಾ ಮಹೇಶ್

ಮೈಸೂರು,ಆಗಸ್ಟ್,20,2026 (www.justkannada.in): ಮುಡಾ 50:50 ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ  ನಗರಾಭಿವೃದ್ಧಿ ಸಚಿವ...

ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ: ಸಿಎಂ ಡಿ.ಕೆ ಶಿವಕುಮಾರ್ ಒತ್ತಾಯ

ಮಹಾಬಲಿಪುರಂ, ಆಗಸ್ಟ್, 20,2026 (www.justkannada.in): “ಕರ್ನಾಟಕ ಬಲಿಷ್ಠವಾದಾಗ, ದಕ್ಷಿಣ ಭಾರತ ಮತ್ತಷ್ಟು...

KMF ಪಶು ಆಹಾರ ಕಲಬೆರಕೆ ಅವ್ಯವಹಾರ ಪ್ರಕರಣ: ನಾಲ್ವರು ಹಿರಿಯ ಅಧಿಕಾರಿಗಳು ಸಸ್ಪೆಂಡ್

ಬೆಂಗಳೂರು,ಆಗಸ್ಟ್,20,2026 (www.justkannada.in): ಕೆಎಂಎಫ್ ಪಶು ಆಹಾರ ಕಲಬೆರಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ...