ಮೈಸೂರು,ಆಗಸ್ಟ್,29,2026 (www.justkannada.in): ತಮ್ಮ ಹಗರಣ ಮುಚ್ಚಿಕೊಳ್ಳಲು ಗೃಹ ಖಾತೆ ಪಡೆದಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಿರುದ್ದ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಡಿಸಿಎಂ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್, ಎಲ್ಲರ ಮೇಲೂ ಎಲ್ಲದಕ್ಕೂ ಅಪಾದನೆ ಮಾಡೋದು ಹೆಚ್ ಡಿ ಕುಮಾರಸ್ವಾಮಿ ಕೆಲಸ. ಅದಕ್ಕೆ ತಕ್ಕಂತೆ ದಾಖಲೆಗಳು ಇದ್ದರೆ ಕೊಡಲಿ. ಕುಮಾರಸ್ವಾಮಿ ಕಾನೂನು ಚೌಕಟ್ಟಿನಲ್ಲಿ ಏನು ಬೇಕಾದರೂ ಮಾಡಲಿ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೆ. ನನಗೂ ಒಂದೇ, ಹೆಚ್ ಡಿಕೆಗೂ ಒಂದೇ, ಪ್ರಿಯಾಂಕ್ ಖರ್ಗೆಗೂ ಒಂದೇ ಕಾನೂನು ಎಂದರು. 
ರಾಜ್ಯ ರಾಜಕಾರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮೌನ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಸಿದ್ದರಾಮಯ್ಯ ಸದನಕ್ಕೆ ಬಂದಿದ್ದರು. ಈಗ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ ಎಂದರು.
Key words: HDK, job, blame, everyone, DCM, Dr. G. Parameshwar
The post ಎಲ್ಲರ ಮೇಲೂ ಎಲ್ಲದಕ್ಕೂ ಅಪಾದನೆ ಮಾಡೋದು HDK ಕೆಲಸ- ಡಿಸಿಎಂ ಡಾ.ಜಿ.ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




