7
July, 2026

A News 365Times Venture

7
Tuesday
July, 2026

A News 365Times Venture

ಕಬಿನಿ ಡ್ಯಾಂ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 6 ಅಡಿ ಏರಿಕೆ

Date:

ಮೈಸೂರು,ಜುಲೈ,6,2026 (www.justkannada.in): ಕೇರಳದ ವೈನಾಡಿನಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮೈಸೂರು ಜಿಲ್ಲೆ ಹೆಚ್‌.ಡಿ‌.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.

ಒಂದೇ ದಿನಕ್ಕೆ  ಅಂದರೆ 24 ಗಂಟೆಯಲ್ಲೇ ಕಬಿನಿ ಜಲಾಶಯಕ್ಕೆ ಆರು ಅಡಿ‌ ನೀರು ಹರಿದು ಬಂದಿದ್ದು, 300 ಕ್ಯೂಸೆಕ್ ಇದ್ದ ಒಳಹರಿವು ಆರು ಸಾವಿರಕ್ಕೆ ಹೆಚ್ಚಳವಾಗಿದೆ. ನಿನ್ನೆ 53 ಅಡಿಗೆ ಕುಸಿದಿದ್ದ ಕಬಿನಿ ಡ್ಯಾಂ ನೀರಿನ ಮಟ್ಟ ಇದೀಗ ಇಂದು 59 ಅಡಿಗೆ ಏರಿಕೆ ಕಂಡಿದೆ. ಕಬಿನಿ ಜಲಾಶಯದ ಒಟ್ಟು ಎತ್ತರ 84 ಅಡಿಗಳಾಗಿದೆ.

ರಾಜ್ಯ ರಾಜಧಾನಿ‌ ಬೆಂಗಳೂರು, ಮೈಸೂರು, ಚನ್ನಪಟ್ಟಣ, ರಾಮನಗರ, ಮಂಡ್ಯ, ನಂಜನಗೂಡು, ತಿ.ನರಸೀಪುರ, ಚಾಮರಾಜನಗರ ಸೇರಿ ಹಲವು ಪಟ್ಟಣಗಳಿಗೆ ಕಬಿನಿ ಜಲಾಶಯ ನೀರುಣಿಸುತ್ತಿದ್ದು, ಇದು ರಾಜ್ಯದ ಎರಡು ಕೋಟಿ ಜನರ ಪಾಲಿನ‌ ಕುಡಿಯುವ ನೀರಿನ ಆಶ್ರಯದ ಡ್ಯಾಂ ಆಗಿದೆ.

ಕಾಡು ಪ್ರಾಣಿಗಳ ಕುಡಿಯುವ ನೀರಿಗೂ ಈ ಜಲಾಶಯ ಆಶ್ರಯವಾಗಿದ್ದು ತಮಿಳುನಾಡಿಗೆ ಈ ಡ್ಯಾಂನಿಂದ ಅತಿ‌ಹೆಚ್ಚು ನೀರು ಬಿಡಲಾಗುತ್ತದೆ.

Key words: Kabini Dam, inflow, increases, 6 feet, rise , single day

 

The post ಕಬಿನಿ ಡ್ಯಾಂ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 6 ಅಡಿ ಏರಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

SIR ಪ್ರಕ್ರಿಯೆ: ಚುನಾವಣಾ ಆಯೋಗಕ್ಕೆ ದೋಸ್ತಿ ನಾಯಕರಿಂದ ದೂರು

ಬೆಂಗಳೂರು,ಜುಲೈ,6,2026 (www.justkannada.in):  ರಾಜ್ಯದಲ್ಲಿ ನಡೆಯುತ್ತಿರುವ ಎಸ್ ಐಆರ್ ಪ್ರಕ್ರಿಯೆ ವೇಳೆ ನಿಯಮ...

ಹಲವೆಡೆ ಮಳೆ: ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ-  ಡಿಸಿಎಂ ಪರಮೇಶ್ವರ್

ಬೆಂಗಳೂರು,ಜುಲೈ,6,2026 (www.justkannada.in):  ರಾಜ್ಯದಲ್ಲಿ ಹಲವೆಡೆ ಮಳೆಯಾಗುತ್ತಿದ್ದು ಜಲಾಶಯಗಳಿಗೆ ಒಳಹರಿವು ಬರುತ್ತಿದೆ. ಹೀಗಾಗಿ...

ಆರ್ ಎಸ್ ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜುಲೈ,6,2026 (www.justkannada.in): ಆರ್ ಎಸ್ ಎಸ್ ನವರು ಪಥಸಂಚಲನಕ್ಕೆ ಅನುಮತಿ ತೆಗೆದುಕೊಳ್ಳಬೇಕು...

ಮೈಸೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ: ಜಗಳ ಬಿಡಿಸಲು ಬಂದವರ ಮೇಲೆಯೇ ಅಟ್ಯಾಕ್

ಮೈಸೂರು,ಜುಲೈ,6,2026 (www.justkannada.in): ಕುಡಿದು ಆಟೋದಲ್ಲಿ ಬಂದಿದ್ದ ಮೂವರು ಕ್ಯಾಂಟರ್ ಗೆ ಅಟೋ...